ತಮಿಳುನಾಡು ಪೊಲೀಸರಿಂದಲೇ ಆಟೋಗಳಿಗೆ ಬೆಂಕಿ: ಕಮಲ್ ಹಾಸನ್ ಟ್ವೀಟ್

1
50

ಸಾಂಪ್ರದಾಯಕ ಕ್ರೀಡೆ ಜಲ್ಲಿಕಟ್ಟುಗೆ ಶಾಶ್ವತ ಪರಿಹಾರ ನೀಡ್ಬೇಕು ಅಂತ ತಮಿಳುನಾಡಿನಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಯೊಬ್ಬರು ಆಟೋಗೆ ಬೆಂಕಿ ಹಚ್ಚಿದ ದೃಶ್ಯ ಈಗ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಖ್ಯಾತ ನಟ ಕಮಲ್‍ಹಾಸನ್ ಸೇರಿದಂತೆ ಹಲವಾರು ಜನರು ಈ ವೀಡಿಯೊವನ್ನು ಅಪ್ಲೋಡ್ ಮಾಡಿದ್ದು ಏನಿದು ಇದಕ್ಕೆ ಸ್ಪಷ್ಟ ಉತ್ತರ ನೀಡಿ ಎಂದು ಟ್ವೀಟ್ ಮಾಡಿದ್ದಾರೆ ಕಮಲ್..! ಮಾಧ್ಯಮ ಹಾಗೂ ಜಾಲತಾಣಗಳಲ್ಲಿ ಈ ದೃಶ್ಯ ಹರಿದಾಡುತ್ತಿದ್ದು ಪೊಲೀಸರ ಕೃತ್ಯಕ್ಕೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗ್ತಾ ಇದೆ. ಇನ್ನು ಕೆಲವು ಪ್ರತಿಭಟನಾಕಾರರು ಪೊಲೀಸರು ತಮ್ಮ ಮೇಲೆ ಲಾಠಿ ಪ್ರಹಾರ ನಡೆಸಿದ್ದ ಶಡ್ಯಂತ್ರ. ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿಸಿ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾ ರೂಪಕ್ಕೆ ತಾಳಲು ಪೊಲೀಸರೆ ಕಾರಣ ಎಂದು ಆಕ್ರೋಶಗೊಂಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ವಿಡಿಯೋ ಪ್ರತಿಭಟನೆಯದ್ದೆ..? ಅಥವಾ ಹಳೇಯ ವಿಡಿಯೋ ಆಗಿರಬಹುದೆ ಎಂಬುದಕ್ಕೆ ಯಾವುದೆ ಪುರಾವೆಗಳಿಲ್ಲ. ಆದರೂ ಕೂಡ ಪೊಲೀಸರಿಗೆ ಈ ದೃಶ್ಯಾವಳಿಗಳಿಂದ ಟೀಕಾ ಪ್ರಹಾರವೆ ಬರುತ್ತಿದ್ದು, ಇದರಿಂದ ಇಕ್ಕಟ್ಟಿಗೆ ಸಿಲುಕಿಕೊಂಡಿರುವ ಸ್ಥಿತಿಗೆ ಬಂದಿದ್ದಾರೆ ಪೊಲೀಸರು. ವಿಡಿಯೋ ಅಸಲಿಯೇ ಅಥವಾ ನಕಲಿಯೆ ಎಂಬುದರ ಕುರಿತು ತನಿಖೆಯ ನಂತರ ಸತ್ಯ ಗೊತ್ತಾಗಲಿದೆ. ಇನ್ನು ಜಲ್ಲಿಕಟ್ಟು ನಿಷೇಧ ಸಂಬಂಧ ಅದನ್ನು ಶಾಶ್ವತ ತೆರವುಗೊಳಿಸಬೇಕೆಂದು ಆಗ್ರಹಿಸಿ ಮರೀನಾ ಬೀಚ್‍ನಲ್ಲಿ ಬೀಡು ಬಿಟ್ಟಿರುವ ಸುಮಾರು ಎರಡು ಸಾವಿರ ಪ್ರತಿಭಟನಾಕಾರರು, ಸಾಂಪ್ರದಾಯಿಕ ಕ್ರೀಡೆಗೆ ಶಾಶ್ವತ ಕ್ರಮಕ್ಕೆ ಸರ್ಕಾರ ಕೈಗೊಳ್ಳುವವರೆಗೂ ಮರೀನಾ ಬೀಚ್ ಬಿಟ್ಟು ತೆರಳೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ರಾತ್ರೋ ರಾತ್ರಿ ಎಲಿಮಿನೇಟ್ ಆದ್ರು ಶಾಲಿನಿ..!!

ಹಂಪಿ ಸನ್‍ಲೈಟ್ & ಶ್ಯಾಡೋಸ್ ಚಿತ್ರಪ್ರದರ್ಶನ

ಈ ಬಾರಿಯ ಬಿಗ್‍ಬಾಸ್ ಫೈನಲ್ ಗೆಸ್ಟ್ ಯಾರು ಗೊತ್ತಾ..?

ಮಾಜಿ ಕ್ರಿಕೆಟಿಗ ವೀರು ಈಗ ಜಬರ್ದಸ್ತ್ ಸಿಂಗರ್

ಜಯಲಲಿತ ಜೀವನಾಧಾರಿತ ಸಿನಿಮಾ ಮಾಡ್ತಾರಂತೆ ಆರ್.ಜಿ.ವಿ..!

LIVE : ಬಿಗ್‍ಬಾಸ್ ಕನ್ನಡ ಸೀಸನ್-04 ಈ ಮೂವರಲ್ಲಿ ಫೈನಲ್ ತಲಪುವವರು ಯಾರು.?

ರಾಜಮೌಳಿಯ ಮಹಾಭಾರತದಲ್ಲಿ ಸುದೀಪ್ ಕರ್ಣ?

1 COMMENT

LEAVE A REPLY

Please enter your comment!
Please enter your name here