40 ಲಕ್ಷ ವಂಚನೆ : ನಟಿ ಪದ್ಮಜಾಗೆ ಜಾಮೀನು ರಹಿತ ವಾರೆಂಟ್!

admin
1 Min Read

ಮುಂಗಾರು ಮಳೆ ಗಾಳಿಪಟ ಇನ್ನೂ ಮುಂತಾದ ಹಲವಾರು ಪ್ರಸಿದ್ಧ ಚಲನ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಪದ್ಮಜಾ ರಾವ್ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ.  ಹೌದು ನಟಿ ಪದ್ಮಜಾ ರಾವ್ ಅವರು ನಲವತ್ತು ಲಕ್ಷ ರೂಪಾಯಿಗಳನ್ನು ವಂಚಿಸಿದ್ದಾರೆ ಎಂಬ ಆಧಾರದ ಮೇಲೆ ಜಾಮೀನು ರಹಿತ ವಾರೆಂಟನ್ನು ನೀಡಲಾಗಿದೆ.

 

 

ಮಂಗಳೂರಿನ ವೀರು ಶೆಟ್ಟಿ ಎಂಬ ನಿರ್ಮಾಪಕನಿಗೆ ನಲವತ್ತು ಲಕ್ಷ ಮೌಲ್ಯದ ಚೆಕ್ ಒಂದನ್ನು ಪದ್ಮಜಾ ರಾವ್ ಅವರು ಈ ಹಿಂದೆ ನೀಡಿದ್ದರು. ಆದರೆ ಈ ಚೆಕ್ ಬೌನ್ಸ್ ಆಗಿದ್ದು ಪದ್ಮಜಾ ರಾವ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಆದರೆ ನ್ಯಾಯಾಂಗ ವಿಚಾರಣೆಗೆ ಪದೇ ಪದೇ ಗೈರಾದ ಹಿನ್ನೆಲೆಯಲ್ಲಿ ಇದೀಗ ಪದ್ಮಜಾ ರಾವ್ ಅವರ ವಿರುದ್ಧ ಮಂಗಳೂರು ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಅನ್ನು ಹೊರಡಿಸಿದೆ.

Share This Article
Leave a Comment