ಇನ್ಮುಂದೆ ವಾರದಲ್ಲಿ 4ದಿನ ಕೆಲಸ 3ದಿನ ರಜೆ!

0
74

ಕೇಂದ್ರ ಸರ್ಕಾರ ಇದೀಗ ಹೊಸ ಕೆಲಸದ ಅವಧಿ ಗಳನ್ನ ಜಾರಿಗೆ ತರಲು ಮುಂದಾಗಿದೆ. ಕಾರ್ಮಿಕರ ನಿಯಮಾವಳಿ ಬದಲಾವಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ ವಾರದಲ್ಲಿ 4ದಿನ ಕೆಲಸ ಮತ್ತು 3ದಿನಗಳ ರಜೆಯನ್ನು ಜಾರಿಗೆ ತರಲು ಮುಂದಾಗಿದೆ.

 

 

ಕೆಲಸದ ಒತ್ತಡವನ್ನು ತಗ್ಗಿಸಲು ಈ ರೀತಿಯ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದ್ದು ಈಗಾಗಲೇ ಕೇಂದ್ರ ಸರ್ಕಾರದ ಈ ಯೋಜನೆಗೆ ಹಲವಾರು ಕಂಪೆನಿಗಳು ಒಪ್ಪಿಗೆ ವ್ಯಕ್ತಪಡಿಸಿವೆ. ಇನ್ನು ಕೇಂದ್ರ ಸರ್ಕಾರ ಈ ಕಾರ್ಮಿಕರ ನಿಯಮಾವಳಿ ಬದಲಾವಣೆಯಲ್ಲಿ 3ರೀತಿಯ ಕೆಲಸದ ಅವಧಿಯನ್ನು ನಿಗದಿಪಡಿಸಲಿದ್ದು ಕಂಪೆನಿಗಳು ಮೂರರಲ್ಲಿ ಯಾವುದನ್ನೂ ಬೇಕಾದರೂ ಅಳವಡಿಸಿಕೊಳ್ಳಬಹುದು.

 

 

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕೆಲಸದ ಅವಧಿ ಗಳ ಪಟ್ಟಿ ಈ ಕೆಳಕಂಡಂತಿದೆ..

1. ವಾರದಲ್ಲಿ 4ದಿನ ಕೆಲಸ 3ದಿನ ರಜೆ : ಇದರಲ್ಲಿ 4ದಿನ ಕೆಲಸ ಮಾಡಿ 3ದಿನ ರಜೆಯನ್ನು ಪಡೆಯಬಹುದು ಆದರೆ ದಿನವೊಂದಕ್ಕೆ 12 ಗಂಟೆಗಳ ಕಾಲ ಕೆಲಸವಿರಲಿದೆ.

2. ವಾರದಲ್ಲಿ 5ದಿನ ಕೆಲಸ 2ದಿನ ರಜೆ : ಇದರಲ್ಲಿ 5ದಿನ ಕೆಲಸ ಮಾಡಿ 2ದಿನ ರಜೆಯನ್ನು ಪಡೆಯಬಹುದು ಆದರೆ ದಿನವೊಂದಕ್ಕೆ 10 ಗಂಟೆಗಳ ಕಾಲ ಕೆಲಸ ಮಾಡಬೇಕು.

3. ವಾರದಲ್ಲಿ 6ದಿನ ಕೆಲಸ 1ದಿನ ರಜೆ : ಇದು ಪ್ರಸ್ತುತ ಎಲ್ಲಾ ಕಡೆ ಉಪಯೋಗಿಸಲ್ಪಡುತ್ತಿರುವ ವಿಧಾನ ಇದರಲ್ಲಿ ವಾರದ 6ದಿನ ಕೆಲಸ ಮಾಡಿ 1ದಿನ ರಜೆಯನ್ನು ಪಡೆಯಬಹುದು. ಹಾಗೂ ಈ ವಿಧಾನದಲ್ಲಿ ದಿನವೊಂದಕ್ಕೆ 8ಗಂಟೆಗಳ ಕಾಲ ಕೆಲಸವಿರಲಿದೆ.

 

 

ಈ 3ವಿಧಾನಗಳಲ್ಲಿ ಯಾವುದಾದರೂ ಒಂದನ್ನು ಕಂಪೆನಿ ತನ್ನ ಕಾರ್ಮಿಕರು ಮತ್ತು ಕೆಲಸಗಾರರ ಜೊತೆ ಒಪ್ಪಂದದ ಮೂಲಕ ಜಾರಿಗೆ ತಂದುಕೊಳ್ಳಬಹುದು. ತನ್ನ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಕಂಪೆನಿ ವಾರದಲ್ಲಿ 4ದಿನ ಅಥವಾ 5ದಿನ ಕೆಲಸಗಳನ್ನ ನೀಡಿ ಮಿಕ್ಕಿದ ದಿನವನ್ನ ರಜೆ ಎಂದು ಘೋಷಿಸುವುದು ಉತ್ತಮ ಎಂಬುದು ಹಲವಾರು ಕೆಲಸಗಾರರ ಅಭಿಪ್ರಾಯ.

LEAVE A REPLY

Please enter your comment!
Please enter your name here