ಬಾಲ್ಯ ವಿವಾಹವನ್ನು ತಡೆಗಟ್ಟುವ ಉದ್ದೇಶದಿಂದ ರಾಜಸ್ತಾನದ 47,000 ಟೆಂಟ್ ವಿತರಕರು ಮದುವೆಗೆ ಟೆಂಟ್ ವಿತರಿಸುವುದಿಲ್ಲ ಎಂದು ನಿರ್ಧರಿಸಿದ್ದಾರೆ. ರಾಜಸ್ಥಾನ ಟೆಂಟ್ ಡೀಲರ್ಸ್ ಕಿರಾಯ ವೈಶ್ಯ ಸಮಿತಿಯ ವ್ಯಾಪ್ತಿಗೆ ಒಳಪಡುವ ಎಲ್ಲಾ ವಿತರಕರು ಮಾಡಿದ ತೀರ್ಮಾನದ ಪ್ರಕಾರ ಪ್ರತೀ ಮದುವೆ ಗಂಡು ಹೆಣ್ಣಿನ ಜನ್ಮ ದಾಖಲಾತಿಯನ್ನು ಪರಿಶೀಲಿಸುತ್ತಿದ್ದಾರೆ. ಇದರಲ್ಲಿ ಅವರಿಗೇನಾದರೂ ವ್ಯತ್ಯಾಸ ಕಂಡುಬಂದಲ್ಲಿ ಕೂಡಲೇ ಸ್ಥಳೀಯ ಪೊಲಿಸ್ ಸ್ಟೇಶನ್ ಗೆ ದೂರು ದಾಖಲಿಸುವುದಾಗಿದೆ.
ಅಲ್ಲಿನ ಸಂಪ್ರದಾಯದ ಪ್ರಕಾರ ಸಣ್ಣ ಹಳ್ಳಿಗಳಲ್ಲಿ ವಾಸಿಸುವ ಜನರು ಏಪ್ರಿಲ್ ಕೊನೆಯ ವಾರ ಹಾಗೂ ಮೇ ಮೊದಲ ವಾರದಲ್ಲಿ ಬರುವ ತೀಜ್ ಹಬ್ಬದ ದಿನದಂದು ಮಕ್ಕಳ ಮದುವೆ ಮಾಡುತ್ತಾರೆ. ಇದು ಅತಿರೇಕವಾಗಿ ಜಿಲ್ಲೆಗಳಾದ ಚಿತ್ತೋರ್ಗರ್, ದುಂಗಾರ್ಪುರ್, ಬನ್ಸ್ ವಾರ, ಜುನ್ ಜುನು, ಸಿಕರ್, ಚುರು ಜಿಲ್ಲೆಗಳಲ್ಲಿ ನಡೆಯುತ್ತದೆ.
ಪ್ರತಿ ವರ್ಷ ನಡೆಯುವ ಬಾಲ್ಯ ವಿವಾಹದಲ್ಲಿ ನಮ್ಮ ದೇಶವು 6 ನೇಯ ಸ್ಥಾನದಲ್ಲಿದೆ.2011 ರ ಗಣತಿಯ ಪ್ರಕಾರ,ನಮ್ಮ ದೇಶದ 17 ಮಿಲಿಯನ್ ಮಕ್ಕಳಲ್ಲಿ ಹೆಚ್ಚಿನ ಮದುವೆಯಾಗುವ ಮಕ್ಕಳು 10 ರಿಂದ 19 ವರ್ಷ ಪ್ರಾಯದೊಳಗಿನವರು. ಇವರಲ್ಲಿಶೇಕಡಾ 76% ಅಥವಾ 12.7 ಮಿಲಿಯನ್ ಹೆಣ್ಣುಮಕ್ಕಳಾಗಿರುತ್ತಾರೆ.ಇದು ಹೆಚ್ಚಾಗಿ ರಾಜಸ್ಥಾನ್, ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ನಡೆಯುತ್ತವೆ.
ನಮ್ಮ ಸುಭದ್ರ ಭಾರತವು ಈ ಅನಾಗರಿಕ ಪದ್ದತಿಯ ವಿರುದ್ದ ಟೆಂಟ್ ವಿತರಕರ ಜೊತೆ ಕೈಜೋಡಿಸಿದೆ. ಇದರಿಂದ ಅದೆಷ್ಟೋ ಅಮಾಯಕ ಹೆಣ್ಣು ಮಕ್ಕಳ ಜೀವನ ನಾಶವಾಗುವುದನ್ನು ತದೆಗಟ್ಟಬಹುದು.ಇಂತಹ ಕೃತ್ಯ ವೇನಾದರೂ ಕಂಡುಬಂದಲ್ಲಿ ಪ್ರತಿಯೊಬ್ಬ ದೇಶದ ಪ್ರಜೆಯೂ ಇದರ ವಿರುದ್ದ ಹೊರಾಡಲು ಸನ್ನದ್ದನಾಗಿರಬೇಕು ಮತ್ತು ಪೊಲಿಸರ ಬಳಿ ದೂರು ದಾಖಲಿಸಬೇಕೆಂಬುದು ನನ್ನ ಕಳಕಳಿಯ ಪ್ರಾರ್ಥನೆ.
ಸ್ವರ್ಣ ಭಟ್
POPULAR STORIES :
ಒಂದು ವಾರ ಉಚಿತ ಯೋಗ ವಿತ್ ಹಿರೋಯಿನ್ ಸಂಜನಾ..!!
ಬ್ಲೂ ಫಿಲಂ ನಟಿ ಶಕೀಲಾಳನ್ನು ಅವಳಪ್ಪ ಹೊಡೆದು ಸಾಯಿಸಿಬಿಡುತ್ತಿದ್ದ..! ಶಕೀಲಾ ಲೈಫ್ ಸ್ಟೋರಿ.
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
ಮೀನಾಕುಮಾರಿ ಅದೇಕೆ ಕುಡಿದು ಸತ್ತಳು…!? `ದಿಲ್ ಸಾ ಜಬ್ ಸಾಥಿ ಪಾಯ, ಬೇಚೈನೀ ಭೀ ವೋ ಸಾಥ್ ಆಯಾ’
ಸಂಜಯ್ ದತ್ ನಾಪತ್ತೆ..!? ಜೈಲಿಂದ ಬಂದನಂತರ ಖಳನಾಯಕನ ಸುಳಿವಿಲ್ಲ..!?
ನೀವೂ ಫಿಟ್ ಆಗಿ, ಆರೋಗ್ಯವಾಗಿರೋಕೆ ಈಗ ಸಂಜನಾ ಹೇಳಿಕೊಡ್ತಾರಂತೆ ಯೋಗ.!