ರೈತರ ಪ್ರತಿಭಟನೆ ಕುರಿತು ಸುಳ್ಳು ಸುದ್ದಿ ಬಿತ್ತುವ ಮೂಲಕ ದೇಶದ ಸಮಗ್ರತೆಗೆ ಧಕ್ಕೆ ತರುತ್ತಿರುವ ಖಾತೆಗಳನ್ನು ತಡೆ ಹಿಡಿಯುವಂತೆ ಕೇಂದ್ರ ಸರಕಾರ ಮಾಡಿದ ಆದೇಶ ಪಾಲಿಸಿರುವ ಮೈಕ್ರೊ ಬ್ಲಾಗಿಂಗ್ ಸಂಸ್ಥೆ ಟ್ವಿಟರ್, 500 ಅಕೌಂಟ್‌ಗಳನ್ನು ಅಮಾನತುಗೊಳಿಸಿದೆ.
ಖಾತೆಯನ್ನು ರದ್ದು ಮಾಡಿರುವ ಕುರಿತು ಟ್ವಿಟರ್ ಬ್ಲಾಗ್‌ಪೋಸ್ಟ್‌ನಲ್ಲಿ ಬರೆದುಕೊಂಡಿದೆ. ಏತನ್ಮಧ್ಯೆ, ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು, ಹೋರಾಟಗಾರರು ಹಾಗೂ ರಾಜಕಾರಣಿಗಳ ಖಾತೆಯನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದು, ಇದು ಭಾರತದ ಕಾನೂನಿನಡಿ ಬರುವ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಹೇಳಿದೆ.
ರೈತರ ಪ್ರತಿಭಟನೆ ಕುರಿತು ಟ್ವಿಟರ್ ಮೂಲಕ ಹೇಳಿಕೆಗಳನ್ನು ನೀಡುತ್ತಿರುವ ಪಾಕಿಸ್ತಾನ, ಖಲಿಸ್ತಾನ ಬೆಂಬಲಿಗರ 1,178 ಖಾತೆಗಳನ್ನು ರದ್ದು ಮಾಡುವಂತೆ ಫೆಬ್ರವರಿ 4ರಂದು ಸರಕಾರ ಟ್ವಿಟರ್‌ಗೆ ಸೂಚನೆ ನೀಡಿತ್ತು. ಅವುಗಳಲ್ಲಿ ಸುಮಾರು 500 ಖಾತೆಗಳ ವಿರುದ್ಧ ಸದ್ಯ ಕ್ರಮಕೈಗೊಳ್ಳಲಾಗಿದೆ.
ಜನವರಿ ತಿಂಗಳ ಅಂತ್ಯದಲ್ಲಿಸರಕಾರವು ರೈತರ ಪ್ರತಿಭಟನೆ ವಿಚಾರದಲ್ಲಿ ಸರಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿರುವ 257 ಟ್ವಿಟರ್ ಖಾತೆಗಳನ್ನು ರದ್ದು ಮಾಡಿಸಿತ್ತು. ಅಲ್ಲದೆ, ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನೂ ನೀಡಿತ್ತು.
ಬಾಲಿವುಡ್ ಮತ್ತು ಟಾಲಿವುಡ್‌ನ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡ ನಟಿ ಗೆಹನಾ ವಸಿಷ್ಠ ಅವರು ನೀಲಿ ಚಿತ್ರಗಳ ದಂಧೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಸದ್ಯ ಮುಂಬೈ ಪೊಲೀಸರ ಅತಿಥಿ ಆಗಿರುವ ಈ ನಟಿಯ ಮೇಲೆ ಹಲವು ಆರೋಪಗಳು ಕೇಳಿಬಂದಿವೆ. ಯುವತಿಯರಿಗೆ ಹಣದ ಆಮಿಷವೊಡ್ಡಿ ಅಶ್ಲೀಲ ದೃಶ್ಯಗಳಲ್ಲಿ ನಟಿಸುವಂತೆ ಆಕೆ ಒತ್ತಾಯಿಸುತ್ತಿದ್ದರು ಎಂಬ ವಿಷಯ ಬಹಿರಂಗ ಆಗಿದೆ.
ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಇಟ್ಟುಕೊಂಡು ಬರುವ ಹದಿಹರೆಯದ ಯುವತಿಯರಿಗೆ ಗೆಹನಾ ಹಣದ ಆಮಿಷ ಒಡ್ಡುತ್ತಿದ್ದರು. ಮಾಡೆಲ್‌ಗಳಿಗೆ 15ರಿಂದ 20 ಸಾವಿರ ರೂ.ಗಳವರೆಗೆ ಹಣ ನೀಡುತ್ತಿದ್ದರು. ನಂತರ ಅವರನ್ನು ‘ಅಂತಹ’ ದೃಶ್ಯಗಳಲ್ಲಿ ನಟಿಸುವಂತೆ ಮಾಡುತ್ತಿದ್ದರು. ಹೀಗೆ ಶೂಟಿಂಗ್ ಮಾಡಿಕೊಂಡ ನೀಲಿ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ ಅವುಗಳಿಂದ ಗೆಹನಾ ಹಣ ಗಳಿಸುತ್ತಿದ್ದರು ಎನ್ನಲಾಗಿದೆ.
ಅಶ್ಲೀಲ ದೃಶ್ಯಗಳನ್ನು ಚಿತ್ರಿಸಿ ಅವುಗಳನ್ನು ತಮ್ಮ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಗೆಹನಾರನ್ನು ಬಂಧಿಸಲಾಗಿದೆ. 87ಕ್ಕೂ ಹೆಚ್ಚು ವಿಡಿಯೋಗಳನ್ನು ಅವರು ಅಪ್‌ಲೋಡ್ ಮಾಡಿದ್ದಾರೆ. ಈ ವೆಬ್‌ಸೈಟ್‌ಗೆ ಚಂದಾದಾರರಾಗಲು ಬಯಸುವವರು 2 ಸಾವಿರ ರೂ. ನೀಡಬೇಕಿತ್ತು. 36 ಲಕ್ಷ ರೂ. ಹೊಂದಿರುವ ಗೆಹನಾ ಅವರ ಮೂರು ಬ್ಯಾಂಕ್ ಖಾತೆಗಳ ಮೇಲೆ ಪೊಲೀಸರು ಈಗ ಕಣ್ಣಿಟ್ಟಿದ್ದಾರೆ. ಈ ವೆಬ್‌ಸೈಟ್‌ನಿಂದಲೇ ಗೆಹನಾ ಇಷ್ಟು ಹಣ ಸಂಪಾದಿಸಿದ್ದರು ಎನ್ನಲಾಗಿದೆ.
ಆದರೆ ಈ ಯಾವ ಆರೋಪಗಳನ್ನೂ ಗೆಹನಾ ವಸಿಷ್ಠ ಒಪ್ಪಿಕೊಳ್ಳುತ್ತಿಲ್ಲ. ಈ ಬಗ್ಗೆ ಅವರ ಲೀಗಲ್ ಟೀಮ್ ಒಂದು ಹೇಳಿಕೆ ಬಿಡುಗಡೆ ಮಾಡಿದೆ. ‘ಗೆಹನಾ ವಸಿಷ್ಠ ನಿರಪರಾಧಿ. ಯಾವುದೇ ಅಶ್ಲೀಲ ಸಿನಿಮಾ ಹಗರಣದಲ್ಲಿ ಅವರು ತೊಡಗಿಕೊಂಡಿಲ್ಲ. ಅವರನ್ನು ದುರುದ್ದೇಶದಿಂದ ಸಿಕ್ಕಿಸಲಾಗಿದೆ. ಅವರ ಹೆಸರಿಗೆ ಕಳಂಕ ತರಬೇಕು ಎಂಬ ಉದ್ದೇಶದಿಂದ ವಿರೋಧಿಗಳು ಈ ರೀತಿ ಮಾಡಿದ್ದಾರೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.