ಭಾರತಕ್ಕೆ ಕೊರೋನಾವೈರಸ್ ಬಂದ ನಂತರ ಲಾಕ್ ಲಾಕ್ ಡೌನ್ ಸಮಯದಲ್ಲಿ ಕಷ್ಟದಲ್ಲಿದ್ದ ಜನರಿಗೆ ಹಲವಾರು ನಟ ನಟಿಯರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿದರು. ಅದರಲ್ಲಿ ಹೆಚ್ಚಾಗಿ ಬಡಜನರಿಗೆ ಸಹಾಯ ಮಾಡಿ ಜನರ ಮೆಚ್ಚುಗೆಯನ್ನು ಪಡೆದದ್ದು ನಟ ಸೋನು ಸೂದ್.
ಹೌದು , ಸೋನು ಸೂದ್ ಹಲವಾರು ಬಡ ಜನರಿಗೆ ಸಹಾಯ ಮಾಡಿ ರಿಯಲ್ ಲೈಫ್ ಹೀರೋ ಎನಿಸಿಕೊಂಡರು. ಇದೀಗ ವಿಮಾನ ಕಂಪೆನಿಯಾದ ಸ್ಪೈಸ್ ಜೆಟ್ ಅವರು ಸೋನು ಸೂದ್ ಅವರಿಗೆ ವಿಶಿಷ್ಟ ರೀತಿಯಲ್ಲಿ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ.
ತಮ್ಮ ಏರೋಪ್ಲೇನ್ ಗಳ ಮೇಲೆ ಸೋನು ಸೂದ್ ಅವರಿಗೆ “ಏ ಸಲ್ಯೂಟ್ ಟು ದ ಸೇವಿಯರ್ ಸೋನು ಸೂದ್” ಎಂದು ಬರೆದು ಕೊಳ್ಳುವುದರ ಮೂಲಕ ಕೃತಜ್ನತೆಯನ್ನು ಸಲ್ಲಿಸಿದೆ.