5G ವಂಚನೆಗೆ ಸಿದ್ಧತೆ ಹುಷಾರಾಗಿರಿ…!

admin
1 Min Read

ಸೈಬರ್ ವಂಚಕರ ತಂಡ 5G ವಂಚನೆಗೆ ಸಿದ್ಧತೆ ನಡೆಸಿದ್ದು, ಈಗಾಗಲೇ ಸೈಬರ್ ಕ್ರೈಂ ಪೊಲೀಸ್ ಹಾಗೂ ಸಿಸಿಬಿ ಹೊಸ ವಂಚನೆ ತಡೆಯಲು ಜಾಗೃತಿ ಮೂಡಿಸುತ್ತಿದೆ.ಕಾಲ್​ ಸೆಂಟರ್​ಗಳಿಂದ ಕರೆ ಮಾಡುವ ಮೂಲಕ ಹೊಸ ವಂಚನೆಗೆ ಸಿದ್ಧವಾಗುತ್ತಿರುವ ವಂಚಕರ ಗ್ಯಾಂಗ್ ಏರ್​ಟೆಲ್, ಜಿಯೋ ಸೇರಿದಂತೆ ಹಲವು ನೆಟ್​ವರ್ಕ್​ಗಳಿಂದ ನಿಮ್ಮ ಸಿಮ್ ಅಪ್​ಡೇಟ್​ ಮಾಡುತ್ತೇವೆ ಎಂದು ಕರೆ ಮಾಡುತ್ತಾರೆ. ಕರೆ ಮಾಡಿ ನಿಮ್ಮ ನಂಬರ್ ಮತ್ತು ಮಾಹಿತಿ ಕೊಡಿ ಎಂದು ಹೇಳುವ ಈ ಗ್ಯಾಂಗ್ ಒಟಿಪಿ ಬರುತ್ತೆ ಅದನ್ನೆ ಹೇಳಿ ಅಂತಾರೆ. ಒಂದು ವೇಳೆ ಒಟಿಪಿ ಹೇಳಿದರೆ ಮುಗೀತು ಕ್ಷಣಾರ್ಧದಲ್ಲಿ ನಿಮ್ಮ ಖಾತೆಯಲ್ಲಿರುವ ಹಣವನ್ನು ದೋಚುತ್ತಾರೆ. ಈ ಕಾರಣದಿಂದ ಸಿಸಿಬಿ ಮತ್ತು ಸೆನ್ ಪೊಲೀಸರು ಜಾಗೃತಿ ಮೂಡಿಸುತ್ತಿದ್ದು, ಯಾವುದೇ ಅಪ್​ಡೇಟ್ ಇದ್ದರೂ ಅದನ್ನು ಸಂಬಂಧಪಟ್ಟ ನೆಟ್​ವರ್ಕ್ ಕಚೇರಿಗಳಲ್ಲಿ ಮಾಡಿಸಿ, ಸುಖಾಸುಮ್ಮನೆ ಒಟಿಪಿ ಹೇಳಿ ಪೇಚಿಗೆ ಸಿಲುಕದಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ಅಂತಹ ಕರೆ ಬಂದರೆ ಅಥವಾ ವಂಚನೆಯಾದರೆ ತಕ್ಷಣ 122ಗೆ ಕರೆ ಮಾಡುವಂತೆ ನಗರ ಅಪರಾಧ ವಿಭಾಗದ ಡಿಸಿಪಿ ಡಾ.ಶರಣಪ್ಪ ಮನವಿ ಮಾಡಿದ್ದಾರೆ.

Share This Article
Leave a Comment