6 ವರ್ಷದ ಬಾಲಕ ಪೈಲೆಟ್..! ಈತ ವಿಮಾನ ಹಾರಿಸ್ತಾ ಇರೋ ವೀಡಿಯೋ ಈಗ ವೈರಲ್..! ಇದನ್ನು 3 ಲಕ್ಷ ಮಂದಿ ಶೇರ್ ಮಾಡಿದ್ದಾರೆ..! 2 ಕೋಟಿ ಮಂದಿ ವೀಕ್ಷಿಸಿದ್ದಾರೆ..!
ಬಾಲಕ ಅದಮ್, ಅಬುದಾಬಿಯವನು. ಮೊದಲೇ ಹೇಳಿರುವಂತೆ ಇವನಿಗಿನ್ನೂ 6 ವರ್ಷ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿಯೇ ವಿಮಾನದ ಕಾರ್ಯವಿಧಾನ ಹೇಗಿರುತ್ತೆ…ತುರ್ತು ಸಂದರ್ಭದಲ್ಲಿ ಏನ್ ಮಾಡ್ಬೇಕು ಇತ್ಯಾದಿ ಅಂಶಗಳು ತಿಳಿದುಕೊಂಡಿದ್ದಾನೆ..! ವಿಮಾನದ ಬಗ್ಗೆ ಚಿಕ್ಕ ವಯಸ್ಸಲ್ಲಿಯೇ ಇಷ್ಟೊಂದು ತಿಳ್ಕೊಂಡಿರುವ ಬಗ್ಗೆ ಎಲ್ಲರಿಗೂ ಅಚ್ಚರಿ.
ಇವನಿಗೆ ಪೈಲೆಟ್ ಆಗಬೇಕು ಎಂಬ ಆಸೆ. ತನ್ನ ಆಸೆಯಂತೆ..! ಒಂದು ದಿನದ ಮಟ್ಟಿಗೆ ಈಗಾಗಲೇ ಪೈಲೆಟ್ ಆಗಿ ತನ್ನ ಆಸೆಯನ್ನೀಡೇರಿಸಿಕೊಂಡಿದ್ದಾನೆ..!
ಬಾಲಕ ಆದಮ್ ಸಮವಸ್ತ್ರ ಧರಿಸಿ ಎ380 ವಿಮಾನದ ಕಾಕ್ ನಲ್ಲಿ ಕುಳಿತು ಪೈಲೆಟ್ ಸಮೀರ್ ಜೊತೆಗೆ ವಿಮಾನ ಹಾರಿಸಿ ಸಂಭ್ರಮಿಸಿದ್ದಾನೆ..! ನೀವೂ ನೋಡಿ, ಇಷ್ಟವಾದ್ರೆ ಶೇರ್ ಮಾಡಿ.