600/600 ಅಂಕ ಗಳಿಸಿದ ವಿದ್ಯಾರ್ಥಿನಿ ಫುಲ್ ರೋಸ್ಟ್; ಇದೆಲ್ಲಾ ಬೇಕಿತ್ತಾ?

Date:

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಿಲಾಗಿದೆ. ಕೊರೊನಾ ವೈರಸ್ ಕಾರಣದಿಂದಾಗಿ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳ ಹಿಂದಿನ ಶೈಕ್ಷಣಿಕ ಪ್ರದರ್ಶನ ಗಮನಿಸಿ ಅಂಕಗಳನ್ನು ನೀಡಲಾಗಿದೆ.

ಇದೇ ವೇಳೆ ಓರ್ವ ವಿದ್ಯಾರ್ಥಿನಿ 600ಕ್ಕೆ 600 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾಳೆ. ಖಾಸಗಿ ಮಾಧ್ಯಮವೊಂದು ವಿದ್ಯಾರ್ಥಿನಿಯನ್ನು ಸಂದರ್ಶಿಸಿದಾಗ, 600ಕ್ಕೆ 600 ಅಂಕ ತೆಗೆದುಕೊಂಡಿದ್ದರೂ ಸಮಾಧಾನವಿಲ್ಲ ಎಂದು ಹೇಳಿದ್ದಳು.

ಇದೇ ಮಾತನ್ನು ಖಾಸಗಿ ಸುದ್ದಿ ಸಂಸ್ಥೆಯೊಂದು ಶೀರ್ಷಿಕೆಯನ್ನಾಗಿ ಬಳಸಿಕೊಂಡಿತ್ತು. ಈಗ ಆ ವಿದ್ಯಾರ್ಥಿನಿಯ ಹೇಳಿಕೆ ಮತ್ತು ಶೀರ್ಷಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿನಿಯ ಹೇಳಿಕೆಯನ್ನು ಅಪಹಾಸ್ಯ ಮಾಡಲಾಗುತ್ತಿದೆ. ಒಂದು ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿನಿಯ ಹೇಳಿಕೆಯನ್ನು ಕೆಲವು ಕಿಡಿಗೇಡಿಗಳು ಅಪಹಾಸ್ಯ ಮಾಡುತ್ತಿದ್ದರೆ, ಇನ್ನೊಂದೆಡೆ ಕೆಲವು ನೆಟ್ಟಿಗರು ವಿದ್ಯಾರ್ಥಿನಿಯ ಅಪಹಾಸ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

 

ಶಂಕರ್ ಸಿಹಿಮೊಗೆ ಫೇಸ್‌ಬುಕ್ ಪೇಜ್‌ನಲ್ಲಿ, “ಈ ಮಗುವಿನ ಫೋಟೋ ಹಾಕಿ ಅಪಹಾಸ್ಯ ಮಾಡುತ್ತಿರುವ, ಈ ಟಿವಿಯ ಪತ್ರಿಕೆ headlineಗೂ ಹಾಗೆ ಒಳಗೆ ಹೋಗಿ ವಿವರ ಓದದ ಅವಿವೇಕಿ ಮೂರ್ಖರಿಗೆ ಎರಡು ಬಾರಿಸಬೇಕು ಎಂದು ಅನಿಸುತ್ತಿದೆ, ಕೆಲವರು ಹೇಳಿದ ನಂತರ Post Delete ಮಾಡಿದರು. ಇನ್ನೂ ಕೆಲವರು ಪ್ರಗತಿಪರ ಬಸವಣ್ಣ ಅದು ಇದು ಹಾಕಿಕೊಂಡು ಇನ್ನೂ ಈ ಫೋಸ್ಟ್ Screenshot ತೆಗೆದು ಆ ಮಗುವಿಗೆ ಅಪಹಾಸ್ಯ ಮಾಡುತ್ತಿದ್ದಾರೆ,” ಎಂದು ಬರೆದುಕೊಂಡಿದ್ದಾರೆ.

“ಆ ಹುಡುಗಿ ಹೇಳಿರುವುದು 600ಕ್ಕೆ 600 ಅಂಕ ಬಂದಿದೆ. ಆದರೆ ಪರೀಕ್ಷೆ ಮಾಡದೆ ಇಷ್ಟು ಅಂಕ ಪಡೆದಿರುವುದಕ್ಕೆ ಬೇಸರವಿದೆ ಎಂದು ವಿನಃ ಇಷ್ಟು ಅಂಕ ಬಂದಿರುವುದು ಕಡಿಮೆಯಾಯಿತು ಎಂದಲ್ಲ. ಬೇರೆಯವರ ಮನೆಯ ಮಕ್ಕಳ ಫೋಟೋ ಈ ರೀತಿ ವಿಷಯ ಗ್ರಹಿಸದೆ ಅಪಹಾಸ್ಯ ಮಾಡುವ ಮುನ್ನ ನಿಮ್ಮ Basic Common Sense improve . ಇಲ್ಲ at least ಈ ರೀತಿ ಹಾಕುವ ಮುನ್ನ ಒಳಗೆ ಹೋಗಿ ವಿಷಯ ಸರಿಯಾಗಿ ಓದಿ. ಇಲ್ಲ ನೀವು ವಾಟ್ಸಾಪ್ ಯುನಿವರ್ಸಿಟಿ ವಿದ್ಯಾರ್ಥಿಗಳಿಗಿಂತ ನೀಚರಾಗುತ್ತೀರ.”

Child Abuse act ಅಂತಾ ಒಂದಿದೆ ಬೇರೆಯವರ ಮನೆಯ ಮಗುವಿನ ಫೋಟೋ ಈ ರೀತಿ ಬಳಸಿ ಅಪಹಾಸ್ಯ ಮಾಡುವುದು ತಪ್ಪಾಗುತ್ತದೆ. ವಿಷಯ ಸರಿಯಾಗಿ ಗ್ರಹಿಸದೆ, ಮೊದಲು ಈ headline ಕೊಟ್ಟವನಿಗೆ ಉಗಿಯಬೇಕು,” ಎಂದು ಬರೆದುಕೊಂಡಿದ್ದಾರೆ.

ಶಂಕರ್ ಸಿಹಿಮೊಗೆ ಫೇಸ್‌ಬುಕ್‌ ಪೋಸ್ಟ್‌ಗೆ ಕಮೆಂಟ್ ಮಾಡಿ ನೆಟ್ಟಿಗರು ವಿದ್ಯಾರ್ಥಿನಿ ಹೇಳಿಕೆಗೆ ಅಪಹಾಸ್ಯ ಮಾಡಿದವರ ವಿರುದ್ಧ ಕಿಡಿಕಾರಿದ್ದಾರೆ.

 

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...