ಪ್ರೀತಿ, ಅದು, ಸಾಲ ಮತ್ತು ಆತ್ಮಹತ್ಯೆ!!

Date:

ಪ್ರೀತಿ, ಪ್ರೇಮ ಎಂದು ನಂಬಿಹೋಗಿದ್ದ ಪ್ರೇಮಿಯೊಬ್ಬ ಪ್ರೀತಿಗಾಗಿ ಜಮೀನು ಮಾರಿ, ಸಾಲಮಾಡಿ ಕೊಂಡಿದ್ದ. ಇದೀಗ ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ರಂಗನಾಥಪುರ ಗ್ರಾಮದ ಯುವಕ ನಂಜುಂಡಸ್ವಾಮಿ (30) ಮೃತ ದುರ್ದೈವಿ. ವಿವಾಹವಾಗಿದ್ದ ಮಹಿಳೆಯನ್ನು ಪ್ರೀತಿ ಮಾಡಿದ್ದ ಯುವಕ ಈಗ ಆಕೆಯ ಜೊತೆಗಿನ ಫೋಟೋ, ವಾಟ್ಸಪ್ ಚಾಟ್‌ ವಿವರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಾವಿಗೆ ಶರಣಾಗಿದ್ದಾನೆ. ಹಿರಿಯೂರುತಾಲೂಕಿನ ಪಟ್ರೆಹಳ್ಳಿ ‌(ಲಕ್ಷ್ಮೀಪುರ) ಗ್ರಾಮದ ತೇಜು ತೇಮಿಳು ಎಂಬ ಗೃಹಿಣಿಯನ್ನು ನಂಜುಂಡಸ್ವಾಮಿ ಪ್ರೀತಿ ಮಾಡುತ್ತಿದ್ದ. ಎರಡು ಮದುವೆಯಾಗಿದ್ದರೂ ಮಹಿಳೆ ನಂಜುಂಡಸ್ವಾಮಿಯನ್ನು ಪ್ರೀತಿಸುತ್ತಿದ್ದಳು.

 

ಮೂರು ವರ್ಷಗಳ ಹಿಂದೆ ಯಾರಿಗೂ ತಿಳಿಯದಂತೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಇವರಿಬ್ಬರೂ ಮದುವೆ ಆಗಿದ್ದರು. ಇವರಿಬ್ಬರು ಮಾಡಿರುವ ವಾಟ್ಸಪ್ ಚಾಟ್ ಸಾಮಾಜಿಕ ತಾಲತಾಣದಲ್ಲಿ ಅಪ್ ಲೋಡ್ ಆಗಿದೆ. ಮದುವೆ ಬಳಿಕವೂ ತೇಜು ಮತ್ತೊಬ್ಬನ ಸ್ನೇಹ ಮಾಡಿದ್ದಳು ಎಂದು ತಿಳಿದು ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಮೋಸಹೊದ ನಂಜುಂಡಸ್ವಾಮಿ ನನ್ನ ಸಾವಿಗೆ ಇವಳೇ ಕಾರಣ. ಜೊತೆಗೆ ನನ್ನ ಸಾಲಗಾರನನ್ನಾಗಿ ಮಾಡಿದ್ದಾಳೆ ಎಂದು ಆರೋಪಿಸಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆರನಕಟ್ಟೆ ಬಾಲು ಅಣ್ಣ (ಗಂಡ) ಇವಳನ್ನು ಸುಮ್ನೆ ಬಿಡಬೇಡಿ ಇಂತಿ ತೇಜು ಲೇಟ್ ನಂಜುಂಡಸ್ವಾಮಿ ಎಂದು ತನ್ನ ವಾಟ್ಸಪ್ ಸ್ಟೇಟಸ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಬರೆದು, ಫೋಟೋ ಅಪ್ಲೋಡ್ ಮಾಡಿ ನಂಜುಂಡಸ್ವಾಮಿ ನೇಣಿಗೆ ಕೊರೊಳೊಡ್ಡಿದ್ದಾನೆ.

ಪ್ರೀತಿ, ಪ್ರೇಮ ಎಂದು ನಂಬಿಹೋಗಿದ್ದ ಪ್ರೇಮಿಯೊಬ್ಬ ಪ್ರಾಣ ಕಳೆದುಕೊಳ್ಳುವ ಮೂಲಕ ಪ್ರೇಮಿಯ ಬದುಕು ದುರಂತ ಅಂತ್ಯ ಕಂಡಿದೆ. ವಿಷಯ ತಿಳಿದ ತಕ್ಷಣ ಹಿರಿಯೂರು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share post:

Subscribe

spot_imgspot_img

Popular

More like this
Related

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ...

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...