ನಟ ಪುನೀತ್ ರಾಜ್ ಕುಮಾರ್ ( Puneet Rajkumar ) ಅವರ ನಿಧನಕ್ಕೆ ಕರುನಾಡೇ ಕಂಬನಿ ಮಿಡಿಯುತ್ತಿದೆ. ಅಭಿಮಾನಿಗಳ ಹೃದಯದಲ್ಲಿ ನೆಲೆಸಿರುವಂತ ಅಪ್ಪು ಮಾತ್ರ ಸದಾ ಜೀವಂತ. ಹೀಗಿರುವಂತ ನಟ ಪುನೀತ್ ಸಮಾಧಿ ನೋಡಲು, ಅಭಿಮಾನಿಯೊಬ್ಬ 150 ಕಿಲೋಮೀಟರ್ ದೂರದಿಂದ ಎತ್ತಿನಗಾಡಿಯಲ್ಲೇ ಹೊರಟಿದ್ದಾನೆ.
ಹೌದು.. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪೊನ್ನ ಸಮುಗ್ರ ಗ್ರಾಮದ ರೈತ ದಯಾನಂದ್ ಅವರು ನಟ ಪುನೀತ್ ರಾಜ್ ಕುಮಾರ್ ಅಭಿಮಾನಿಯಾಗಿದ್ದರು ( Puneet Rajkumar Abhimani ). ಪುನೀತ್ ನಿಧನಾನಂತ್ರ ಕಣ್ಣೀರಿಟ್ಟಿದ್ದಂತ ಅವರು, ಇದೀಗ ನೆಚ್ಚಿನ ನಟನ ಸಮಾಧಿಗೆ ನಮಿಸಿ ಬರೋದಕ್ಕೆ 150 ಕಿಲೋಮೀಟರ್ ದೂರದಿಂದ ಎತ್ತಿನ ಗಾಡಿಯಲ್ಲಿಯೇ ಆಗಮಿಸ್ತಾ ಇದ್ದಾರ.
ತಮ್ಮ ಪೊನ್ನ ಸಮುದ್ರದಿಂದ ನಿನ್ನೆ ಬೆಳಿಗ್ಗೆ ಎತ್ತಿನಗಾಡಿಯನ್ನು ಹೂಡಿಕೊಂಡು, ಬೆಂಗಳೂರಿನ ಕಂಠೀರವ ಸ್ಟುಡೀಯೋದ ಪುನೀತ್ ರಾಜ್ ಕುಮಾರ್ ಸಮಾಧಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಈ ಮೂಲಕ ಪುನೀತ್ ಸಮಾಧಿಗೆ ನಮೀಸಲು ಧಾವಿಸುತ್ತಿದ್ದಾರೆ.
ಅಂದಹಾಗೇ.. ಪಾವಗಡ ತಾಲೂಕಿನ ಪೊನ್ನ ಸಮುದ್ರದ ಗ್ರಾಮದ ರೈತ ದಯಾನಂದ್ ಗೆ ನಾಲ್ಕು ಎಕರೆ ಜಮೀನಿನಿದೆ. ಆ ಜಮೀನಿನಲ್ಲಿ ಪುನೀತ್ ಪ್ರೇರಣೆಯಿಂದ ರೈತನಾಗಿ ದುಡಿಯುತ್ತಿದ್ದಾರೆ. ಇಂತಹ ಅವರು, ಪುನೀತ್ ಸಮಾಧಿ ವೀಕ್ಷಣೆಗಾಗಿ ಬೆಂಗಳೂರಿಗೆ ಎತ್ತಿನ ಗಾಡಿಯಲ್ಲಿ ಆಗಮಿಸುತ್ತಿದ್ದಾರೆ.