ಏರ್ಪೋರ್ಟ್ ಒಳಗೇ ಮೂತ್ರ ಮಾಡಿದ ಆರ್ಯನ್ ಖಾನ್!

Date:

ಡ್ರಗ್ಸ್‌ ಕೇಸ್‌ನಲ್ಲಿ ತಿಂಗಳುಗಟ್ಟಲೆ ಜೈಲಿನಲ್ಲಿಯೇ ಇದ್ದು ಕೊನೆಗೂ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಮತ್ತೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದಾನೆ.

ಇದಕ್ಕೆ ಕಾರಣ ಅಮೆರಿಕದ ಲಾಸ್‌ ಏಂಜಲೀಸ್‌ ವಿಮಾನ ನಿಲ್ದಾಣದ ಒಳಗಡೆಯೇ ಮೂತ್ರ ಮಾಡಿದ್ದಾನೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಇದರ ವಿಡಿಯೋ ಸಾಕಷ್ಟು ವೈರಲ್‌ ಆಗಿದೆ.

ಈ ವಿಡಿಯೋದಲ್ಲಿ ಯುವಕನೊಬ್ಬ ವಿಮಾನ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಈತ ಆರ್ಯನ್‌ ಖಾನೇ ಹೌದು ಎಂಬಂತೆ ಆ ಯುವಕ ಕಾಣಿಸುತ್ತಾನೆ. ಅದೇ ಬಣ್ಣ, ಅದೇ ಕೂದಲು, ಅದೇ ಮೈಕಟ್ಟು… ಆದ್ದರಿಂದ ಒಮ್ಮೆ ನೋಡಿದರೆ ಈತ ಆರ್ಯನ್‌ ಖಾನ್‌ನಂತೆಯೇ ಕಾಣಿಸುತ್ತಾನೆ.

ಆದರೆ ಅಸಲಿಯತ್ತೇ ಬೇರೆ. ಇದರ ಫ್ಯಾಕ್ಟ್‌ ಚೆಕ್‌ ಮಾಡಿದಾಗ ಈತ ಆರ್ಯನ್‌ ಖಾನ್‌ ಅಲ್ಲ ಎನ್ನುವುದು ಸಾಬೀತಾಗಿದೆ. ರೀವರ್ಸ್‌ ಇಮೇಜ್‌ ಬಳಸಿ ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಲಾಗಿದೆ.

ಈ ವಿಡಿಯೋ ತೆಗೆದಿರುವುದು 2013ರ ಡಿಸೆಂಬರ್‌ 17ರಂದು. ಈ ವಿಡಿಯೋದಲ್ಲಿ ಇರುವ ಯುವಕ ವಿಮಾನ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆ ಮಾಡಿರುವುದೂ ನಿಜ. ಕಂಠಪೂರ್ತಿ ಕುಡಿದದ್ದೂ ನಿಜ. ಆದರೆ ಒಂದೇ ಒಂದು ವ್ಯತ್ಯಾಸ ಎಂದರೆ, ಈ ಯುವಕ ಆರ್ಯನ್‌ ಖಾನ್‌ ಅಲ್ಲ. ಬದಲಿಗೆ ಕೆನಡಾದ ನಟ ಬ್ರಾನ್ಸೆನ್ ಪೆಲೆಟೀಯರ್.

‘ಫ್ರ್ಯಾಂಚೈಸ್ ದಿ ಟ್ವಿಲೈಟ್ ಸಾಗಾ’ ಎಂಬ ಇಂಗ್ಲಿಷ್‌ ಸಿನಿಮಾದಲ್ಲಿ ಆಕಾರವನ್ನು ಬದಲಾಯಿಸುವ ತೋಳದ ಪಾತ್ರದಲ್ಲಿ ವಿಶ್ವಖ್ಯಾತಿ ಗಳಿಸಿರುವ ನಟ ಈತ. 2013ರಲ್ಲಿ 35 ವರ್ಷದವನಾಗಿದ್ದ ಈತ ಕಂಠಪೂರ್ತಿ ಕುಡಿದು ತಾನೆಲ್ಲಿ ಇದ್ದೇನೆ ಎನ್ನುವುದು ತಿಳಿಯದೇ ವಿಮಾನ ನಿಲ್ದಾಣದೊಳಗೆ ಮೂತ್ರ ಮಾಡಿ ಸಿಕ್ಕಿಬಿದ್ದಿದ್ದ. ಅಲ್ಲಿಗೆ ಬಂದಿದ್ದ ಸಿಬ್ಬಂದಿ ಮನವಿ ಮಾಡಿಕೊಂಡರೂ ಆತ ಕೇಳಲಿಲ್ಲ.
ನಂತರ ಭದ್ರತಾ ಅಧಿಕಾರಿಗಳು ಅವನ ಕಡೆಗೆ ಧಾವಿಸಿ ನಟನನ್ನು ನೆಲಕ್ಕೆ ಹಾಕಿ ಕೈಕೋಳ ಹಾಕಿದ್ದಾರೆ. ಅಲ್ಲಿ ನೆರೆದ ಜನರು ‘ಓ ಮೈ ಗಾಡ್!’ ಎಂದು ಹೇಳುತ್ತಿರುವುದು ಕೂಡ ಇದರಲ್ಲಿ ಕೇಳಿಸುತ್ತದೆ

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...