69ರ ಇಳಿ ವಯಸ್ಸಲ್ಲೂ ಬತ್ತಿಲ್ಲ ಶಾಲೆಗೆ ಹೋಗುವ ಉತ್ಸಾಹ!

Date:

ದುರ್ಗಾ ಕಮಿ, 69ರ ಹರೆಯದಲ್ಲೂ ಶಾಲೆಗೆ ಹೋಗುವ ಉತ್ಸಾಹ . ಮಕ್ಕಳಂತೆ ಆಟಪಾಠ ಕಲಿಯುವ ತವಕ. ಬಹುಶಃ ದುರ್ಗಾ ನೇಪಾಳದ ಅತ್ಯಂತ ಹಿರಿಯ ವಿದ್ಯಾರ್ಥಿ. ಶ್ರೀ ಕಲಾ ಭೈರವ ಪ್ರೌಢಶಾಲೆಯ 200 ವಿದ್ಯಾರ್ಥಿಗಳಲ್ಲಿ ದುರ್ಗಾ ಕೂಡ ಒಬ್ಬರು.
ದುರ್ಗಾ ಕಮಿ ಮಕ್ಕಳಂತೆ ಬೆಳಗ್ಗೆ ಬೇಗನೆ ಎದ್ದು ತಮ್ಮ ಉದ್ದನೆಯ ಬಿಳಿ ಗಡ್ಡವನ್ನು ನೀಟಾಗಿ ಬಾಚಿಕೊಂಡು, ಬಿಳಿ ಅಂಗಿ, ಟೈ ಹಾಗೂ ಬೂದುಬಣ್ಣದ ಪ್ಯಾಂಟ್ ಯೂನಿಫಾರ್ಮ್ ಧರಿಸಿ ಹೊರಡ್ತಾರೆ.
ಒಳ್ಳೆ ಶಿಕ್ಷಣ ಪಡೆದು ಶಿಕ್ಷಕರಾಗಿ ಮಕ್ಕಳಿಗೆ ಪಾಠ ಹೇಳಬೇಕೆಂಬ ಆಸೆ ದುರ್ಗಾ ಅವರಿಗಿತ್ತು. ಆದ್ರೆ ಬಡತನದಿಂದಾಗಿ ಅವರ ಕನಸು ನನಸಾಗಲೇ ಇಲ್ಲ. ಬಾಳ ಮುಸ್ಸಂಜೆಯಲ್ಲಿರುವ ದುರ್ಗಾ ಅವರದ್ದೀಗ ಒಂಟಿ ಬದುಕು. ಪತ್ನಿ ಕೂಡ ಇಹಲೋಕ ತ್ಯಜಿಸಿದ್ದಾರೆ. ಏಕಾಂಗಿಯಾಗಿ ಬದುಕು ಸವೆಸುವ ಬದಲು ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಳ್ಳೋಣ ಎಂದುಕೊಂಡ ಅವರು ಮತ್ತೆ ಶಾಲೆಗೆ ಹೋಗುತ್ತಿದ್ದಾರೆ.
ದುರ್ಗಾ ಅವರಿಗೆ ಚಿಕ್ಕ ಮಕ್ಕಳ ಜೊತೆ ಕುಳಿತು ಪಾಠ ಕಲಿಯಲು ಮುಜುಗರವೇನಿಲ್ಲ. ಅವರಿಗೆ ಓದಲು ಬರೆಯಲು ಬರುತ್ತಿರಲಿಲ್ಲ. ಕಹರಯ್ ಪ್ರಾಥಮಿಕ ಶಾಲೆಯಲ್ಲಿ 10-11 ವರ್ಷದ ಪುಟ್ಟ ಮಕ್ಕಳೊಂದಿಗೆ ಕುಳಿತು ಕಲಿತು ದುರ್ಗಾ 5ನೇ ತರಗತಿಯಲ್ಲಿ ಉತ್ತೀರ್ಣರಾದ್ರು.


ಆಮೇಲೆ, ದುರ್ಗಾ ಅವರು ಕಲಾಭೈರವ ಪ್ರೌಢಶಾಲೆಯ ಶಿಕ್ಷಕರಾದ ಡಿ.ಆರ್.ಕೊಯಿರಾಲ ಶಿಕ್ಷಣ ಮುಂದುವರಿಸಲು ದುರ್ಗಾ ಅವರನ್ನು ತಮ್ಮ ಶಾಲೆಗೆ ಆಹ್ವಾನಿಸಿದ್ರು. ಅಷ್ಟೇ ಅಲ್ಲ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ಕೂಡ ಒದಗಿಸಿದ್ರು. ತಮ್ಮ ತಂದೆಯ ವಯಸ್ಸಿನವರಿಗೆ ಪಾಠ ಹೇಳುತ್ತಿರುವುದು ಇದೇ ಮೊದಲು. ಇದು ನನಗೆ ಖುಷಿ ಕೊಟ್ಟಿದೆ ಎನ್ನುತ್ತಾರೆ ಡಿ.ಆರ್.ಕೊಯಿರಾಲ .
ಇನ್ನು ಶಾಲೆಯಲ್ಲಿ ವಿದ್ಯಾರ್ಥಿ ವೇತನ ಕೂಡ ದುರ್ಗಾ ಅವರಿಗೆ ಸಿಕ್ಕಿದೆ. ಆದ್ರೆ ಕಿತ್ತು ತಿನ್ನುವ ಬಡತನದಿಂದಾಗಿ ಮೂರು ಹೊತ್ತು ಸೊಂಪಾಗಿ ಊಟ ಮಾಡುವ ಭಾಗ್ಯ ಅವರಿಗಿಲ್ಲ. ಬೆಳಗ್ಗೆ ಅನ್ನ ಹಾಗೂ ತರಕಾರಿ ಸೇವಿಸಿದ್ರೆ ಅವರು ಮತ್ತೆ ಊಟ ಮಾಡುವುದು ರಾತ್ರಿಯೇ.
10ನೇ ತರಗತಿಯಲ್ಲಿರುವ ಅವರ ಸಹಪಾಠಿಗಳು ದುರ್ಗಾ ಅವರನ್ನು ಬಾ” ಎಂದೇ ಕರೆಯುತ್ತಾರೆ, ಅದರರ್ಥ ನೇಪಾಳಿಯಲ್ಲಿ ತಂದೆ ಎಂದು. ಹಿರಿ ವಯಸ್ಸಿನವರೆಂದು ಅವರನ್ನು ದೂರವಿಟ್ಟಿಲ್ಲ. ಎಲ್ಲ ಚಟುವಟಿಕೆಯಲ್ಲೂ ದುರ್ಗಾ ಪಾಲ್ಗೊಳ್ಳುತ್ತಾರೆ. ಮಕ್ಕಳೊಂದಿಗೆ ಮಕ್ಕಳಾಗಿ ವಾಲಿಬಾಲ್ ಕೂಡ ಆಡುತ್ತಾರೆ.
ಕಲಿಕೆಯನ್ನು ಮುಂದುವರಿಸುವ ಬಯಕೆ ದುರ್ಗಾ ಅವರದ್ದು, ಸಾಯುವವರೆಗೂ ಕಲಿಯುತ್ತಲೇ ಇರಬೇಕೆಂದು ತಮ್ಮಾಸೆ ಎನ್ನುತ್ತಾರೆ ಅವರು. ತಮ್ಮಂತೆ ಬಿಳಿ ಗಡ್ಡದೊಂದಿಗೆ ಶಾಲೆಗೆ ಹೋಗುವ ಎಲ್ಲ ಹಿರಿಯರಿಗೂ ಪ್ರೇರಣೆಯಾಗಬೇಕು ಅನ್ನೋದು ದುರ್ಗಾ ಅವರಾಸೆ.
ಒಟ್ಟಿನಲ್ಲಿ ಇಳಿವಯಸ್ಸಿನಲ್ಲೂ ಮಕ್ಕಳೊಂದಿಗೆ ಮಕ್ಕಳಾಗಿ ಶಾಲೆಗೆ ಹೋಗ್ತಾ ಇರೋ ದುರ್ಗಾ ಅವರನ್ನು ಮೆಚ್ಚಲೇಬೇಕು. ವಯಸ್ಸಿನ ಪರಿವೆಯಿಲ್ಲದೆ ಬಡತನವನ್ನು ಲೆಕ್ಕಿಸದೆ ಶಿಕ್ಷಣವೇ ಜೀವನ ಎಂದುಕೊಂಡಿರುವ ನೇಪಾಳದ ಈ ಹಿರಿಜೀವ ನಿಜಕ್ಕೂ ಎಲ್ಲರಿಗೂ ಮಾದರಿ.

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...