ಅಪ್ಘಾನಿಸ್ತಾನದಲ್ಲಿ 7 ಮಂದಿ ಭಾರತೀಯ ಇಂಜಿನಿಯರ್ ಗಳ ಅಪಹರಣವಾಗಿದ್ದು, ಈ ಕುರಿತು ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಉತ್ತರ ಬಾಘ್ಲಾನ್ ಪ್ರಾಂತ್ಯದ ಬಾಘ್-ಇ-ಶಮಾಲ್ ನಲ್ಲಿ ಓರ್ವ ಅಫ್ಘಾನ್ ಪ್ರಜೆಯನ್ನು ಒಳಗೊಂಡಂತೆ ಏಳು ಮಂದಿ ಭಾರತೀಯರು ಅಪಹರಣಕ್ಕೆ ಒಳಗಾಗಿದ್ದಾರೆ. ಕಂಪನಿಯಿಂದ ಕೆಲಸ ಮುಗಿಸಿಕೊಂಡು ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಅವರನ್ನು ಕಿಡ್ನಾಪ್ ಮಾಡಿದ್ದಾರೆ.
ಭಾರತೀಯರ ಅಪಹರಣದ ಬಗ್ಗೆ ಮಾಹಿತಿ ಸಿಕ್ಕಿದೆ. ಇದನ್ನು ಖಚಿತ ಪಡಿಸಿಕೊಳ್ಳುವ ಸಂಬಂಧ ಅಲ್ಲಿನ ಅಧಿಕಾರಿಳ ಸಂಪರ್ಕದಲ್ಲಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.