70 ಸಾವಿರಕ್ಕೆ ಹೆಣ್ಣು ಮಗು ಸೇಲ್!

Date:

ಮದುವೆಯಾಗಿ ಎರಡು ವರ್ಷಕಳೆದರು ಮಕ್ಕಳಾಗಲಿಲ್ಲ ಎಂಬ ಕೊರಗಿನಲ್ಲಿದ್ದ ಮಹಿಳೆ ಗಂಡ ಹಾಗೂ ಮನೆಯವರನ್ನು ನಾನು ಗರ್ಭಿಣಿ ಎಂದು ನಂಬಿಸಿ, ಕೊನೆಗೆ ಹಣ ಕೊಟ್ಟು ಬೇರೆ ಮಗುವನ್ನು ಖರೀದಿಸಿದ್ದಳು. ಈಗ ಪ್ರಕರಣ ಬಯಲಿಗೆ ಬಂದಿದ್ದು, ಮಹಿಳೆ ಬಂಧನವಾಗಿದೆ. ಚನ್ನಪಟ್ಟಣದ ಅಪ್ಪಗೆರೆ ನಿವಾಸಿ ಸುಷ್ಮಾ ಬಂಧನಕ್ಕೊಳಗಾದ ಮಹಿಳೆ. ಸರ್ಕಾರಿ ನೌಕರನಾಗಿರುವ ತನ್ನ ಗಂಡ ಹಾಗೂ ಮನೆಯವರನ್ನು ನಂಬಿಸಲು ಗರ್ಭಿಣಿ ಎಂದು ಸೀಮಂತದ ಶಾಸ್ತ್ರಕೂಡ ಮಾಡಿಸಿಕೊಂಡಿದ್ದಳು. ಹೆರಿಗೆ ಸಮಯದಲ್ಲಿ ಮಧ್ಯವರ್ತಿಗಳ ಸಹಾಯದಿಂದ ಹಣ ನೀಡಿ ಹೆಣ್ಣು ಮಗುವನ್ನು ಖರೀದಿ ಮಾಡಿದ್ದಳು.

 

ಅಂಗನವಾಡಿ ಕಾರ್ಯಕರ್ತೆಯ ವಿಚಾರಣೆಯಿಂದ ಮಹಿಳೆಯ ನಾಟಕ ಬಯಲಾಗಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಜೈಲು ಸೇರಿರುವ ಸುಷ್ಮಾ ಬಿಬಿಎಂಪಿಯಲ್ಲಿ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ರವಿಕುಮಾರ್ ಎಂಬುವರನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದಳು. ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಿದ್ದ ಸುಷ್ಮಾ ಗರ್ಭಿಣಿಯಾಗುವುದಿಲ್ಲ ಎಂದು ಖಚಿತ ಪಡಿಸಿಕೊಂಡಿದ್ದಳು. ಮಕ್ಕಳಾಗದ ಹಿನ್ನಲೆಯಲ್ಲಿ ಗಂಡ ಮತ್ತು ಮನೆಯವರಿಂದ ಅಸಡ್ಡೆಗೆ ಒಳಾಗಾಗುವ ಭೀತಿಯಿಂದ ಮಗುವನ್ನು ಖರೀದಿ ಮಾಡಿ, ತನ್ನದೇ ಮಗು ಎಂದು ನಂಬಿಸಿದ್ದಳು.

 

ಸೀಮಂತ ಮಾಡಿಸಿಕೊಂಡಿದ್ದಳು; ತಾನು ಗರ್ಭಿಣಿ ಎಂದು ನಂಬಿಸಲು ಸುಷ್ಮಾ ಗಂಡನ ಮನೆಯಲ್ಲಿ ಸೀಮಂತ ಶಾಸ್ತ್ರ ಮಾಡಿಸಿಕೊಂಡು ತಾಯಿಯ ಮನೆಗೆ ಹೋಗಿದ್ದಳು. ಯಾರುಗೂ ಅನುಮಾನ ಬಾರದಂತೆ ಮಗುವನ್ನು ಖರೀದಿ ಮಾಡಿ ತಂದು ನನ್ನದೇ ಮಗು ಎಂದು ನಂಬಿಸಲು ಮುಂದಾಗಿದ್ದಳು.

ಮಗು ಖರೀದಿಗಾಗಿ ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣ ಗ್ರಾಮದಲ್ಲಿ ಶಾರದಾ ಎಂಬ ಮಹಿಳೆಯನ್ನು ಸಂಪರ್ಕಿಸಲಾಗಿತ್ತು. ಹಿಂದೆ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಶಾರದಾ ಮಗು ಮಾರಾಟ ಮಾಡಿಸುವ ಕೆಲಸ ಮಾಡಿಸುತ್ತಿದ್ದಳು. 70 ಸಾವಿರ ಹಣ ಕೊಟ್ಟು 10 ದಿನದ ಹೆಣ್ಣು ಹಸುಗುಸನ್ನು ಖರೀದಿ ಮಾಡಿಸಿದ್ದಳು.

ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಗರ್ಭಿಣಿಯರು ಮತ್ತು ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಮನೆ-ಮನೆಗೆ ಭೇಟಿ ನೀಡಿದ ಸಮಯದಲ್ಲಿ ಸುಷ್ಮಾ ಬಳಿ ಸರ್ಕಾರದ ಯೋಜನೆಗಳ ಫಲಾನುಭವಿ ದಾಖಲಾತಿಗೆ ತಾಯಿ ಕಾರ್ಡ್ ಕೇಳಿದ ಸಂದರ್ಭದಲ್ಲಿ ಸಮರ್ಪಕ ಉತ್ತರ ನೀಡಲಿಲ್ಲ. ಈ ಹಿನ್ನಲೆಯಲ್ಲಿ ಅನುಮಾನಗೊಂಡ ಅವರು ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ನಕಲಿ ತಾಯಿ ಸುಷ್ಮಾಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿ ಒಂದು ವಾರದೊಳಗೆ ಮಗುವಿನ ಜನನ ಪ್ರಮಾಣ ಪತ್ರ ಹಾಗೂ ತಾಯಿ ಕಾರ್ಡ್ ಇಲಾಖೆಗೆ ಒದಗಿಸುವಂತೆ ಸೂಚನೆ ಕೊಟ್ಟಿದ್ದರು. ಯಾವುದೇ ದಾಖಲೆಗ ಇಲಾಖೆಗೆ ಕೊಡದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...