76ರ ಸಮರ ವೀರೆ ; ಈಕೆಯ ಸಾಹಸಕ್ಕೆ ತಲೆಬಾಗಲೇ ಬೇಕು..!

Date:

ಮೂರು ಸಾವಿರ ವರ್ಷಗಳ ಇತಿಹಾಸವುಳ್ಳ ಪ್ರಾಚೀನ ಕಲೆಯಾದ ಕಲರಿಪಯಟ್ಟು ಇಂದು ವಿಶ್ವಪ್ರಸಿದ್ದಿ ಪಡೆದಿದೆ. ಶರೀರವನ್ನೇ ಆಯುಧವಾಗಿ ಬಳಸುವ ಮತ್ತು ದೇಹವನ್ನು ಬೇಕಾದಂತೆ ತಿರುಗಿಸೋದು ಈ ಕಲೆಯ ವಿಶೇಷ. ಇದ್ದಕ್ಕಿದ್ದಂತೆ ದಾಳಿ ಮಾಡಿದರೆ ವ್ಯಕ್ತಿ ತನ್ನನ್ನು ರಕ್ಷಿಸಿಕೊಳ್ಳುವುದನ್ನು ಕಲಿಸಿಕೊಡುವ ವಿದ್ಯೆಯೇ ಕಲರಿಪಯಟ್ಟು ಯುದ್ಧ ಕಲೆ.

ಕಲರಿಪಯಟ್ಟು ಕಲೆ ಸಾಂಪ್ರದಾಯಿಕ ಕುಸ್ತಿಯ ಕಲೆ. ಇದು ಜಗತ್ತಿನ ಅತ್ಯಂತ ಪ್ರಾಚೀನ ಹಾಗೂ ಅತ್ಯಂತ ವೈಜ್ಞಾನಿಕ ಸ್ವರೂಪದ ಕಲಾ ಪ್ರಕಾರವೆಂದು ಪರಿಗಣಿತವಾಗಿದೆ. ಈ ಕಲಾ ಪ್ರಕಾರವು ಆತ್ಮರಕ್ಷಣಾ ಕೌಶಲ್ಯವನ್ನು ಮತ್ತು ಶಕ್ತಿ ಸಾಮರ್ಥ್ಯಗಳನ್ನು ಹರಿತಗೊಳಿಸುವಲ್ಲಿ ನೆರವಾಗುತ್ತೆ. ಈ ಕಲರಿಪಯಟ್ಟು ಕಲೆಯನ್ನು ಕರಗತ ಮಾಡಿಕೊಂಡವರನ್ನು ವೀರರು, ಧೀರರು ಎನ್ನುತ್ತಾರೆ. ಈ ಯುದ್ಧದಲ್ಲಿ ಇವರಿಗೆ ಸರಿಸಾಟಿಯೇ ಇಲ್ಲ.
ಈ ಕಾಲದಲ್ಲಿ ಹೆಣ್ಣು ಮಕ್ಕಳು ಮನೆಕೆಲಸಕ್ಕೆ ಮಾತ್ರ ಸೀಮಿತ ಅಂತ ನೋಡುವವರೇ ಹೆಚ್ಚು. ಅಂತಹ ಸಮಾಜದಲ್ಲಿ ಇವ್ರು ನಿಜಕ್ಕೂ ಸ್ಫೂರ್ತಿಯಾಗಿ ನಿಲ್ಲೋದ್ರಲ್ಲಿ ಅನುಮಾನವೇ ಇಲ್ಲ. ಕಲರಿಪಯಟ್ಟು ಎಂಬ ಸಮರಕಲೆಯನ್ನು ತಾವು ಕಲಿತಿರುವುದಲ್ಲದೆ ಮುಂದಿನ ಪೀಳಿಗೆಗೆ, ವಿಶೇಷವಾಗಿ ಮಹಿಳಾ ಬಲವರ್ಧನೆಗೆ ಧಾರೆಯೆರೆಯುತ್ತಿರುವ 76ರ ಹರೆಯದ ಇವರ ಸಾಧನಾಗಾಥೆಗೆ ಇಡೀ ದೇಶ ಹೆಮ್ಮೆ ಪಡಲೇಬೇಕು.
ಇವರ ಹೆಸರು ಮೀನಾಕ್ಷಿ ಅಮ್ಮ ಅಂತ. ಕಲರಿಪಯಟ್ಟು ಕಲೆಯ ಪ್ರವೀಣೆಯಾದ ಮೀನಾಕ್ಷಿ ಅಮ್ಮ ತನ್ನ ಪ್ರತಿಸ್ಫರ್ಧಿಗೆ ತಲೆಬಾಗಿದ ಇತಿಹಾಸವೇ ಇಲ್ಲ.

ರಕ್ಷಣಾತ್ಮಕ ಮತ್ತು ಆಕ್ರಮಣಾಕಾರಿ ತಂತ್ರಗಳನ್ನು ಕೌಶಲ್ಯ ಪೂರ್ವವಾಗಿ ಉಪಯೋಗಿಸುವುದರ ಮೂಲಕ ಎಲ್ಲರನ್ನು ದಂಗಾಗಿಸುವ ಸಾಹಸಿ ಮಹಿಳೆ. ಸಮರಕಲೆಯಾದ ಕಲರಿಪಯಟ್ಟು ಕಲೆಯ ಸಮರವೀರೆ ಮೀನಾಕ್ಷಿ ಅಮ್ಮ.
ಮೀನಾಕ್ಷಿ ಅಮ್ಮನವರಿಗೆ ಈ ಕಲೆ ರಕ್ತಗತವಾಗಿಯೇ ಬಂದಿದೆ ಅಂತಲೇ ಹೇಳಬಹುದು. ಮೀನಾಕ್ಷಿಯವರ ತಂದೆ ಓರ್ವ ಖ್ಯಾತ ಕಲರಿಪಯಟ್ಟು ಪಟುವಾಗಿದ್ರು. ಹೀಗಾಗಿ ಮೀನಾಕ್ಷಿ ಅಮ್ಮ ಆರನೇ ವಯಸ್ಸಿನಲ್ಲೇ ಕಲರಿಪಟ್ಟು ವಿದ್ಯೆ ಕಲಿಯಲು ಪ್ರಾರಂಭಿಸಿದ್ರು. ಮೀನಾಕ್ಷಿ ಅವರು ಕಲರಿ ಜೊತೆಗೆ ಸಾಂಪ್ರದಾಯಕ ನೃತ್ಯವನ್ನು ಅಭ್ಯಾಸವನ್ನು ಮಾಡುತ್ತಿದ್ರು. ಚಿಕ್ಕ ವಯಸ್ಸಿನಲ್ಲಿರುವಾಗಲೇ ಮನೆಯವ್ರು ಕಲರಿಪಯಟ್ಟು ಬಿಟ್ಟು ವಿದ್ಯಾಭ್ಯಾಸ ಮತ್ತು ನೃತ್ಯದತ್ತ ಹೆಚ್ಚು ಗಮನ ಹರಿಸುವಂತೆ ಸಾಕಷ್ಟು ಬಾರಿ ಹೇಳಿದ್ರೂ ಕೂಡ ಉಪಯೋಗವಾಗಲಿಲ್ಲ. ಕಲರಿ ಕಲೆಯನ್ನು ತಮ್ಮ ರಕ್ತದ ಕಣಕಣಗಳಲ್ಲೂ ತುಂಬಿಸಿಕೊಂಡಿದ್ದ ಮೀನಾಕ್ಷಿ ಅಮ್ಮನವ್ರು ಅದ್ರಲ್ಲೆ ಮುಂದುವರೆದ್ರು.
ಮೀನಾಕ್ಷಿ ಅಮ್ಮನವರಿಗೆ ಈಗ 75 ವರ್ಷವಾಗಿದೆ. ಆದ್ರೂ ಇವರ ಕೈ ನಡುಗುವುದಿಲ್ಲ. ಇಟ್ಟ ಹೆಜ್ಜೆ ಹಿಂದಿಡೋ ಮಾತೇ ಇಲ್ಲ. ಕತ್ತಿವರಸೆಯಲ್ಲಿ ಮತ್ತು ಕೋಲುವರಸೆಯಲ್ಲಿ ಇವರನ್ನು ಸೋಲಿಸುವ ಗಂಡೇ ಇಲ್ಲ. ಎದುರಾಳಿ ಯಾರೇ ಆದರು ಇವರ ಮನಸ್ಸು ಕುಗ್ಗುವುದಿಲ್ಲ. ಕೈಯಲ್ಲಿ ದೊಣ್ಣೆ, ಕತ್ತಿಯನ್ನು ಹಿಡಿದ್ರೆ ಮುಗಿಯಿತು ಎದುರಾಳಿಯ ಒಂದೊಂದೇ ಪಟ್ಟಿಗೆ ಪ್ರತಿ ಪಟ್ಟು ಹಾಕುವ ಸಮರಕಲೆಯಲ್ಲಿ ಪ್ರಾವೀಣ್ಯತೆ ಹೊಂದಿದ್ದಾರೆ.

ಮೀನಾಕ್ಷಿ ಅಮ್ಮನವರು ತಮ್ಮ ಪತಿಯ ಜೊತೆಗೆ ಕಲರಿಪಯಟ್ಟು ವಿದ್ಯೆಯನ್ನು ಹೇಳಿಕೊಡಲು ಒಂದು ಸಂಸ್ಥೆಯನ್ನೇ ಸ್ಥಾಪಿಸಿದ್ದಾರೆ. ಅಲ್ಲಿಂದ ಮೀನಾಕ್ಷಿ ಅವರು ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಇಂದಿಗೂ ಅವರ ಗುರುಕುಲ ಎಂಬ ಹೆಸರಿನಲ್ಲಿ ಕಲರಿ ಸಂಗಮ ಶಾಲೆಯನ್ನು ತೆರೆದು ಕಲಿಯುವ ಆಸಕ್ತರಿಗೆ ಹೇಳಿಕೊಡುತ್ತಿದ್ದಾರೆ. ಪ್ರತಿ ವರ್ಷವೂ 150 ರಿಂದ 200 ವಿದ್ಯಾರ್ಥಿಗಳು ಈ ವಿದ್ಯೆಯನ್ನು ಕಲಿತು ಹೊರಬರುತ್ತಾರೆ.
ತಮ್ಮ ವಿದ್ಯಾರ್ಥಿಗಳು ಕಲರಿಪಯಟ್ಟು ವಿದ್ಯೆಯಲ್ಲಿ ಪರಿಣಿತಿ ಹೊಂದಿದರೆ ಅದೇ ನನಗೆ ಕೊಡುವ ಶುಲ್ಕ ಎನ್ನುತ್ತಾರೆ ಮೀನಾಕ್ಷಿ ಅಮ್ಮ. ಇಲ್ಲಿ ಕಲಿತ ವಿದ್ಯಾರ್ಥಿಗಳು ಸ್ವತಃ ಗುರುದಕ್ಷಿಣೆಯನ್ನು ಬಲವಂತವಾಗಿ ನೀಡಿದರೆ ಮಾತ್ರ ಸ್ವೀಕರಿಸುತ್ತಾರೆ ಅಷ್ಟೇ. ಈ ಗುರುದಕ್ಷಿಣೆಯೇ ಇವರಿಗೆ ಪ್ರಮುಖ ಆದಾಯ. ಆರ್ಥಿಕ ಸಂಕಷ್ಟ ಎದುರಿಸಿದರೂ ತಮ್ಮ ವಿದ್ಯೆಯನ್ನು ಹೇಳಿ ಕೊಡಲು ಯಾವುದೇ ರೀತಿಯ ಹೆಚ್ಚಿನ ಹಣಕಾಸು ನಿರೀಕ್ಷಿಸಲು ಮೀನಾಕ್ಷಿ ಅಮ್ಮನವರು ಒಪ್ಪುವುದೇ ಇಲ್ಲ.
ಆತ್ಮರಕ್ಷಣೆಗೆ ಜನರು ಬೇರೆ ಬೇರೆ ದೇಶದ ಫೈಟಿಂಗ್ ಸ್ಟೈಲ್​​ಗಳಿಗೆ ಮರುಳಾಗುತ್ತಾರೆ. ಬೇರೆ ದೇಶದ ಸ್ಟೈಲ್​ನ್ನು ಮೀರಿಸುವಂತೆ ಇರುವುದು ಕಲರಿಪಯಟ್ಟು. ಕೇರಳದ ಈ ಆತ್ಮರಕ್ಷಣಾ ಕಲೆಯನ್ನು ಹತ್ತಾರು ವೇದಿಕೆಗಳಲ್ಲಿ ಮೀನಾಕ್ಷಿ ಅಮ್ಮನವರು ಪ್ರದರ್ಶನ ನೀಡಿ ಸೈ ಎನ್ನಿಸಿಕೊಂಡಿದ್ದಾರೆ.

75 ವರ್ಷದ ವಯಸ್ಸಿನಲ್ಲಿಯು ಕಲರಿಪಯಟ್ಟು ಕಲೆಯಲ್ಲಿ ಇಡೀ ಜಗತ್ತನ್ನೇ ಬೆರಗುಗೊಳಿಸಿರುವ ಮೀನಾಕ್ಷಿ ಅಮ್ಮನವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ವಿಶ್ವದ ಅತ್ಯಂತ ಪ್ರಾಚೀನ ಯುದ್ಧಕಲೆಗಳಲ್ಲೊಂದಾಗಿರುವ ಕಲರಿಪಯಟ್ಟು ಕಲೆಯನ್ನು 76ರ ಇಳಿಯವಸ್ಸಿನಲ್ಲಿಯೂ ಮೀನಾಕ್ಷಿ ಅಮ್ಮನವರು ಯುವಕರನ್ನೇ ಸೋಲಿಸುತ್ತಾರೆ! ನನ್ನ ಶರೀರದಲ್ಲಿ ಶಕ್ತಿ ಇರುವವರೆಗೂ ನಾನು ಕಲರಿಪಯಟ್ಟು ಕಲಿಸುತ್ತೇನೆ, ಕಲಿಯುತ್ತಲೂ ಇರುತ್ತೇನೆ ಎನ್ನುವ ಮೀನಾಕ್ಷಿ ಅಮ್ಮನವರ ಸಂಕಲ್ಪವನ್ನು ಮೆಚ್ಚಲೇ ಬೇಕು.

Share post:

Subscribe

spot_imgspot_img

Popular

More like this
Related

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...