ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!

Date:

ಮಗುವಿಗೆ ಅರ್ಧ ಟಿಕೆಟ್ ದರ ಕೊಡಲು ನಿರಾಕರಿಸಿದ್ದಕ್ಕಾಗಿ ನಿರ್ವಾಹಕ ಬಳಿ ಕಾದಾಟಕ್ಕಿಳಿದ ಪ್ರಯಾಣಿಕ ಇಂದು ಏಳು ವರ್ಷ ಕಠಿಣ ಕಾರಾಗೃಹ ವಾಸ ಅನುಭವಿಸುತ್ತಿದ್ದಾನೆ..! ಚಿಲ್ಲರೆ ವಿಷಯಕ್ಕಾಗಿ ನಿರ್ವಾಹಕನ ಬೆರಳನ್ನು ಕಚ್ಚಿದ ಆರೋಪದಡಿ ಜಮಖಂಡಿ ಜಿಲ್ಲಾ ಸತ್ರ ನ್ಯಾಯಾಲಯ 10.ಸಾವಿರ ದಂಡ ಹಾಗೂ ಏಳು ವರ್ಷ ಜೈಲು ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
ಸುಮಾರು ಏಳು ವರ್ಷಗಳ ಹಿಂದೆ ನಡೆದಿದ್ದ ಈ ಜಗಳಕ್ಕೆ ಕೋರ್ಟ್ ಇದೀಗ ತೀರ್ಪು ಪ್ರಕಟಿಸಿದ್ದು ಸರ್ಕಾರಿ ನೌಕರನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಶಿಕ್ಷೆ ನೀಡಲಾಗಿದೆ. ಮಹಾಲಿಂಗಪುರದ ಕೆಂಗೇರಿಮಡ್ಡಿಯ ನಾಗೇಶ ಬಸಪ್ಪ ಮುಂಡಗನೂರ ಹಾಗೂ ಮಧೋಳ ಘಟಕದ ರಾಜೇಸಾಬ ನಬಿಸಾಬ ದೊಡ್ಡಮನಿ ಅವರ ನಡುವೆ ನಡೆದ ಕಾದಾಟ ಕೊನೆಗೆ ಪೊಲೀಸ್ ಠಾಣೆಯವರೆಗೂ ತಲುಪಿತ್ತು. ಅಂದು ದೂರು ನೀಡಿದ ನಿರ್ವಾಹಕ ಆನಂತರವಾಗಿ ಕೆಲಸಕ್ಕೆ ರಾಜಿನಾಮೆ ನೀಡಿ ಖಾಸಗೀ ಕಂಪನಿಯೊಂದಕ್ಕೆ ಸೇರಿಕೊಂಡಿದ್ದ. ಸೇವೆಯಲ್ಲಿದ್ದಾಗ ನೀಡಿದ ದೂರಿನಿಂದ ಪ್ರಯಾಣಿಕ ಈಗ ಕಂಬಿ ಎಣಿಸುವ ಸ್ಥಿತಿಗೆ ಬಂದಿದ್ದಾನೆ..
ಘಟನೆ ವಿವರ: 2009ರಲ್ಲಿ ಮುಧೋಳ ಘಟಕದ ಕೆಎಸ್‍ಆರ್‍ಟಿಸಿ ಬಸ್ ಮುಧೋಳದಿಂದ ಮಹಾಲಿಂಗಪುರ ಮಾರ್ಗವಾಗಿ ಕೊಲ್ಲಾಪುರಕ್ಕೆ ತೆರಳುತ್ತಿತ್ತು. ಇದೇ ಬಸ್‍ಗೆ ನಾಗೇಶ ಆತನ ಮಗುವಿನೊಂದಿಗೆ ಬಸ್ ಹತ್ತಿದ್ದ. ಮಗುವಿಗೆ ಅರ್ಧ ಟಿಕೇಟ್(ಅಂದಿನ ದರ 10) ಮಾಡಬೇಕು ಎಂದು ನಿರ್ವಾಹಕ ಹೇಳಿದಾಗ ಮಗು ಇನ್ನು ಚಿಕ್ಕದಿದೆ ಟಿಕೆಟ್ ಮಾಡಿಸೋದಿಲ್ಲ ಎಂದು ಹೇಳಿದ್ದಾನೆ. ಇಬ್ಬರ ನಡುವೆ ವಾದ ಪ್ರತಿವಾದ ನಡೆದು ಕೊನೆಗೆ ಕೈ ಕೈ ಮಿಲಾಯಿಸುವವರೆಗೂ ಮುಂದುವರೆದಿದೆ. ಸಿಟ್ಟಿನಲ್ಲಿದ್ದ ಪ್ರಯಾಣಿಕ ನಾಗೇಶ ನಿರ್ವಾಹಕನ ತೋರು ಬೆರಳನ್ನು ಕಚ್ಚಿದ್ದಾನೆ. ಈ ಘಟನೆಯಿಂದಾಗಿ ಮಹಾಲಿಂಗಪುರ ನಿಲ್ದಾಣದಲ್ಲಿದ್ದ ನಿರ್ವಾಹಕರೆಲ್ಲರೂ ಸೇರಿ ಪ್ರಯಾಣಿಕನ ವಿರುದ್ದ ದೂರು ನೀಡಿದ್ದರು.
ನಿರ್ವಾಹಕರು ನೀಡಿದ ದೂರು ದಾಖಲಿಸಿಕೊಂಡ ಪೊಲೀಸು ಪ್ರಯಾಣಿಕನ ವಿರುದ್ದ ಸರ್ಕಾರಿ ನೌಕರನ ಕೆಲಸಕ್ಕೆ ಅಡ್ಡಿ, ಸಾರ್ವಜನಿಕ ಸ್ಥಳದಲ್ಲಿ ಅವಮಾನ ಮತ್ತು ಉದ್ದೇಶಪೂರ್ವಕವಾಗಿ ಗಾಯಗೊಳಿಸುವಿಕೆ ಕೇಸನ್ನು ದಾಖಲಿಸಿಕೊಂಡಿದ್ದರು. ಇಂತಹದ್ದೇ ಒಂದು ಘಟನೆ 2010ರಲ್ಲಿ ಪಂಜಾಬ್‍ನಲ್ಲಿ ನಡೆದಿದ್ದು, ಆ ಪ್ರಕರಣದ ತೀರ್ಪಿನನ್ವಯ ನ್ಯಾಯಾಲಯ ಅ.5ರಂದು ತೀರ್ಪು ನೀಡಿದೆ. ಸರ್ಕಾರಿ ನೌಕರನ ಮೇಲೆ ಯಾರೇ ಹಲ್ಲೆ ಮಾಡಿದರೂ ಅವರ ವಿರುದ್ದ ಕಠಿಣ ಶಿಕ್ಷೆ ವಿಧೀಸಲಾಗುತ್ತದೆ ಎಂಬ ತೀರ್ಪು ಸಾರಿದೆ.

POPULAR  STORIES :

ಪ್ರಧಾನಿ ಅಂಗಳಕ್ಕೆ ತಲುಪಿದ ಜಗನ್-ಚಂದ್ರಬಾಬು ಬ್ಲಾಕ್‍ಮನಿ ಫೈಟ್..!

ಇನ್ನು ಕ್ರಿಕೆಟ್ ಮೈದಾನದಲ್ಲಿ 14 ಜನ ಫೀಲ್ಡರ್..!

ಪುಣೆಯಲ್ಲಿ ಭುಗಿಲೆದ್ದ ದಲಿತರು-ಮರಾಠರ ಸಂಘರ್ಷ..!

ವಿಷ ಕುಡಿದು ಆತ್ಮಹತ್ಯೆ ಯತ್ನಿಸುವ ನಾಟಕವಾಡಿದ ರೈತನ ವಿಡಿಯೋ ವೈರಲ್..!

ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್.. ಸ್ಪೀಡ್ ಕಳೆದುಕೊಳ್ಳುತ್ತಿದೆ ಜಿಯೋ ಸಿಮ್..!

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...