ಜಗತ್ತಿನಲ್ಲಿ ಕಡು ಬಡತನದಿಂದ ಬೆಂದು ಸಾಯುತ್ತಿರುವವರ ಪ್ರಮಾಣ ದಿನೇ ದಿನೇ ಹೆಚ್ಚುತ್ತಾ ಹೋಗುತ್ತಿದ್ದರೆ ಇನ್ನೊಂದೆಡೆ ಇಡೀ ವಿಶ್ವದಲ್ಲಿ ಇರುವ ಒಟ್ಟಾರೆಯ ಸಂಪತ್ತಿನಲ್ಲಿ ಅರ್ಧದಷ್ಟು ಸಂಪತ್ತು ಕೇವಲ ಎಂಟು ಜನರಲ್ಲಿ ಶೇಖರಣೆಯಾಗಿದೆ ಎಂಬ ವರದಿಯನ್ನು ಓಕ್ಸ್ ಫಾಮ್ ಬಹಿರಂಗ ಪಡಿಸಿದೆ..! ವಿಶ್ವ ಆರ್ಥಿಕ ವೇದಿಕೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಓಕ್ಸ್ ಫಾಮ್ ಇಂತಹದೊಂದು ಅಚ್ಚರಿಯ ಸತ್ಯ ಹೊರ ಹಾಕಿದೆ..! ವಿಶ್ವದಲ್ಲಿ ಒಟ್ಟು 3.6 ಬಿಲಿಯನ್ ಜನರು ಬಡತನದಿಂದ ಜೀವಿಸುತ್ತಿದ್ದು, ಇಷ್ಟೂ ಜನರ ಆಸ್ತಿ ಕೇವಲ ಎಂಟು ಶ್ರೀಮಂತ ವ್ಯಕ್ತಿಗಳ ಆಸ್ತಿಗೆ ಸಮ ಎಂಬ ವಿಚಾರವನ್ನು ಬಹಿರಂಗಪಡಿಸಿದೆ. ಈ ಎಂಟು ಶ್ರೀಮಂತ ವ್ಯಕ್ತಿಗಳಲ್ಲಿ 6 ಜನರು ಅಮೇರಿಕಾದ ಉದ್ಯಮಿಗಳು..! ಇನ್ನುಳಿದಂತೆ ಸ್ಪೇನ್ ಮತ್ತು ಮೆಕ್ಸಿಕೋದ ಪ್ರಜೆಗಳು ಎಂದು ಹೇಳಿದೆ..! ಈ ಪಟ್ಟಿಯಲ್ಲಿ ಮೈಕ್ರೋ ಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಫೇಸ್‍ಬುಕ್‍ನ ಮಾರ್ಕ್ ಜುಕರ್ಬರ್ಗ್, ಅಮೇಜಾನ್‍ನ ಜೆಫ್ ಬೆಜೋಸ್ ಕೂಡ ಸೇರಿದ್ದಾರೆ ಎನ್ನಲಾಗಿದೆ. ರಾಷ್ಟ್ರದಲ್ಲಿ ಹೆಚ್ಚುತ್ತಿರುವ ಜನಾಂಗೀಯ ನಿಂದನೆಯನ್ನು ಶ್ರೀಮಂತ ರಾಷ್ಟ್ರಗಳು ಇನ್ನು ಸಹಿಸಲು ಅಸಾಧ್ಯ ಎಂದೇಳಿರುವ ಓಕ್ಸ್ ಫಾಮ್, ಕಳೆದ ಒಂದು ವರ್ಷದ ಹಿಂದೆಯಷ್ಟೆ ಜಗತ್ತಿನ ಒಟ್ಟು ಸಂಪತ್ತಿನ ಅರ್ಧದಷ್ಟು ಆಸ್ತಿ 62 ಜನರ ಬಳಿಯಿತ್ತು ಆದ್ರೆ ಈಗ ಅದು ಎಂಟು ಜನರ ಪಾಲಾಗಿದೆ ಎಂದು ಹೇಳಿದೆ. ಇದನ್ನು ಸರಿ ಮಾಡಬೇಕಂದರೆ ಶ್ರೀಮಂತರಿಗೆ ಹೆಚ್ಚು ತೆರಿಗೆ ಹೇರಬೇಕು ಎಂದು ಓಕ್ಸ್ ಫಾಮ್ ಆಗ್ರಹಿಸಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಡ್ರಾಪ್ ಕೊಡೋ ನೆಪದಲ್ಲಿ ಮಾನಸಿಕ ಅಸ್ವಸ್ಥೆಯನ್ನೆ ರೇಪ್ ಮಾಡಿದ ಪೊಲೀಸ್..!
ಬಾಯ್ ಫ್ರೆಂಡ್ ಇದಾರಾ..? ಹಾಗಿದ್ರೆ ಮಾತ್ರ ಕಾಲೇಜ್‍ಗೆ ಬನ್ನಿ..!
ಇರ್‍ರೆಸ್ಪಾನ್ಸಿಬಲ್ ಆಟಕ್ಕೆ ನನ್ ******* ಅಂದ ಪ್ರಥಮ್.!!
ಈ ವರ್ಷದಿಂದ ರಿಮೇಕ್ ಮಾಡಲ್ವಂತೆ ಕಿಚ್ಚ ಸುದೀಪ..?
ಸದ್ಯದಲ್ಲೆ ಬೆಂಗಳೂರಲ್ಲಿ ಪ್ರತ್ಯೇಕ ಸೈಬರ್ ಠಾಣೆ: ಪ್ರವೀಣ್ ಸೂದ್
ಸ್ಯಾಂಡಲ್‍ವುಡ್ ಮಿಸ್ಟರ್ ಪರ್ಫೆಕ್ಟ್ ಅಂತೆ ಈ ನಟ..!