ಛಲವೊಂದಿದ್ದರೆ ಎಂತಹ ಸವಾಲನ್ನು ಬೇಕಾದರೂ ಎದುರಿಸಬಹುದು. ಅದಕ್ಕೆ ವಯಸ್ಸು, ಶಕ್ತಿಯ ಅಗತ್ಯತೆ ಬೇಕಿಲ್ಲ ಎಂಬುದಕ್ಕೆ ಈ 8 ವರ್ಷದ ಹುಡುಗಿಯೇ ಸಾಕ್ಷಿ. ಇಷ್ಟಕ್ಕೂ ಈ ಹುಡುಗಿಗೆ ಈ ಬಾರಿಯ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಭಾಜನಳಾಗಿದ್ದಾಳೆ..!
ಹೌದು.. ಮ್ಹೋನ್ ಬೇನಿ ಈಜುಂಗ್ ಎಂಬ ಈ ನಾಗಾಲ್ಯಾಂಡ್ ನ ಹುಡುಗಿ ವೋಕಾ ಜಿಲ್ಲೆಯ ಚೂಡಿ ಎಂಬಲ್ಲಿನ ನದಿಯಲ್ಲಿ ಮುಳುಗುತ್ತಿದ್ದ ತನ್ನ ಅಜ್ಜಿಯನ್ನು ರಕ್ಷಿಸಿದ್ದಕ್ಕಾಗಿ ಈ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ಈ ವರ್ಷ ಶೌರ್ಯ ಪ್ರಶಸ್ತಿ ಪಡೆಯುತ್ತಿರುವ 23 ಮಂದಿಯಲ್ಲಿ ಅತೀ ಚಿಕ್ಕ ವಯಸ್ಸಿನ ಹುಡುಗಿ ಈ ಮ್ಹೋನ್ ಬೇನಿ ಈಜುಂಗ್..!
ನಡೆದಿದ್ದೇನು ಗೊತ್ತಾ..?
ತನ್ನ ಶಾಲೆಗೆ ಚಳಿಗಾಲದ ರಜೆ ಘೋಷಿಸಿದ ಸಂದರ್ಭದಲ್ಲಿ ಮ್ಹೋನ್ ಬೇನಿ ತನ್ನ ಅಜ್ಜಿಯೊಂದಿಗೆ ಕಾಲ ಕಳೆಯಲು ನಾಗಾಲ್ಯಾಂಡ್ ನ ಚೂಡಿ ಎಂಬ ಹಳ್ಳಿಗೆ ಹೋಗಿದ್ದಳು. ಮ್ಹೋನ್ ಬೇನಿಯ ಅಜ್ಜಿ ರೆಂಥುಂಗ್ಲೋ ಜುಂಗಿಗೆ 78 ವರ್ಷ. ಮ್ಹೋನ್ ಬೇನಿಯ ಅಜ್ಜಿ ಆಕೆಯನ್ನು ಸಮೀಪದ ಹೊಳೆಯಲ್ಲಿ ಮೀನು ಹಿಡಿಯಲು ಕರೆದೊಯ್ದಿದ್ದಳು. ಆ ಸಮಯದಲ್ಲಿ ಮ್ಹೋನ್ ಬೇನಿಯ ಅಜ್ಜಿಗೆ ಇದ್ದಕ್ಕಿದ್ದಂತೆ ಸೆಳೆತ ಬಂದಂತಾಗಿ, ಪಾಶ್ರ್ವವಾಯು ಬಡಿದು ಮೂರ್ಛೆ ಹೋದರು. ಇದನ್ನು ಕಂಡು ಮ್ಹೋನ್ ಬೇನಿ ಬೆದರಿದಳು. ತನ್ನ ಹಳ್ಳಿಯೊಳಗೆ ಆಕೆ ಹೋಗಬೇಕೆಂದರೆ 4,5 ಕೀಮೀನಷ್ಟು ದೂರದ ದುರ್ಗಮವಾದ ಕಾಡಿನ ದಾರಿಯನ್ನು ಸವೆಸಬೇಕಾಗಿತ್ತು. ಆದರೂ ಈ ಪುಟ್ಟ ಹುಡುಗಿಗೆ ಆ ಕ್ಷಣದಲ್ಲಿ ಅದೆಲ್ಲಿಂದ ಧೈರ್ಯ ಬಂದಿತ್ತೋ ಗೊತ್ತಿಲ್ಲ. ಹಳ್ಳಿಯೊಳಗೆ 4,5 ಕಿಮೀನಷ್ಟು ದೂರ ಓಡಿ, ಅಲ್ಲಿನ ಗ್ರಾಮಸ್ಥರನ್ನು ಕರೆದುಕೊಂಡು ಬಂದು ತನ್ನಜ್ಜಿಯನ್ನು ಅಪಾಯದಿಂದ ಪಾರುಮಾಡುವಲ್ಲಿ ಯಶಸ್ವಿಯಾದಳು.
ಮ್ಹೋನ್ ಬೇನಿಯ ತಂದೆ ಎನ್ ಲಾಂಗ್ತ್ಸುಬೆಮೋ ಲೋತಾಗೆ ತಮ್ಮ ಮಗಳ ಬಗ್ಗೆ ಹೆಮ್ಮೆ ಇದೆ. ಎನ್ ಲಾಂಗ್ ತ್ಸುಬೆಮೋ ನಾಗಾಲ್ಯಾಂಡ್ ನ ಹೋಮ್ ಗಾರ್ಡ್ಸ್ ಇಲಾಖೆಯಲ್ಲಿ ಹವಾಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಮಗಳು ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಸ್ತಿ ಪಡೆಯುವ ಕ್ಷಣವನ್ನು, ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಲಾಂಗ್ತ್ಸುಬೆಮೋ ಕೂಡ ನವದೆಹಲಿಗೆ ಆಗಮಿಸಿದ್ದರು. ತನ್ನ ಅಜ್ಜಿಯನ್ನು ರಕ್ಷಿಸುವಲ್ಲಿ ಧೈರ್ಯವಹಿಸಿದ ಮ್ಹೋನ್ ಬೇನಿ, 1 ಮೆಡಲ್, ಸರ್ಟಿಫಿಕೇಟ್ ಮತ್ತು ರಾಷ್ಟ್ರೀಯ ಯೋಜನೆಯಡಿ ಹಣ ಮತ್ತು ಆಕೆ ಎಷ್ಟು ಓದುತ್ತಾಳೋ ಅಲ್ಲಿಯವರೆಗೆ ಸಂಪೂರ್ಣವಾದ ಹಣಕಾಸಿನ ಸಹಾಯಕ್ಕೆ ಪಾತ್ರಳಾಗಿದ್ದಾಳೆ. ಚಿಕ್ಕವಯಸ್ಸಿನಲ್ಲೇ ಅಸಾಧಾರಣ ಧೈರ್ಯ ಪ್ರದರ್ಷಿಸಿ ಅಜ್ಜಿಯನ್ನು ಕಾಪಾಡಿದ ಮ್ಹೋನ್ ಬೇನಿ ಎಂಬ ಈ 8 ವರ್ಷದ ಪುಟ್ಟ ಬಾಲಕಿಗೆ ಒಂದು ಸಲ್ಯೂಟ್.
- ರಾಜಶೇಖರ ಜೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ರಷ್ಯಾದಲ್ಲಿ ನಡೆಯಿತು ಕೂದಲಿಗಾಗಿ 8 ಕೊಲೆ..! ಕೂದಲಿನ ವಿಷಯಕ್ಕೆ ಪತ್ನಿ, ಮಕ್ಕಳು, ತಾಯಿಯನ್ನೇ ಕೊಂದ..!
ಒಂಟೆಗೆ ಮುತ್ತಿಕ್ಕಿದಳು ಆತ ಡೈವೋರ್ಸ್ ಕೊಟ್ಟ..! ಇದು ಒಂ(ಟೆ)ದು ಮುತ್ತಿನ ಕಥೆ..!
ಕೂಲಿಯ ಮಗ ಇವತ್ತು 100 ಕೋಟಿ ಒಡೆಯ..! ಆರನೇ ಕ್ಲಾಸ್ ಫೇಲ್ ಆಗಿದ್ದ ಹುಡುಗ ಇವತ್ತು ಕೋಟ್ಯಾಧಿಪತಿ..!
ಹುಚ್ಚು ಪರಪಂಚದಲ್ಲಿ ಹುಚ್ಚ ವೆಂಕಟ್ ಗಾನಸುಧೆ.. !
ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!