9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು ಬಲಿ
ಬೆಂಗಳೂರು:-ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಬಸ್ ಸಾಕಷ್ಟು ಜನರ ಪ್ರಾಣ ಕಸಿದಿದೆ. ಅದರಂತೆ ಇದೀಗ ಮತ್ತೊಂದು ಬಲಿಯಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ 9 ವರ್ಷದ ಬಾಲಕಿ ಮೇಲೆ ಹರಿದ ಪರಿಣಾಮ ಆಕೆ ಸ್ಥಳಲ್ಲೇ ಸಾವನ್ನಪ್ಪಿರುವ ಘಟನೆ ರಾಜಾಜಿನಗರದ 1ನೇ ಬ್ಲಾಕ್ನಲ್ಲಿ ಜರುಗಿದೆ.
ಕಳೆದ ನಾಲ್ಕು ದಿನಗಳ ಹಿಂದಷ್ಟೇ ಕಮಲಾನಗರದಲ್ಲಿ ಬಿಎಂಟಿಸಿ ಬಸ್‌ನ ಬ್ರೇಕ್ ಫೇಲ್ಯೂರ್ ಆಗಿ ನಂದಿನಿ ಪಾರ್ಲರ್‌ಗೆ ನುಗ್ಗಿದ ಘಟನೆ ನಡೆದಿತ್ತು. ಬಸ್‌ನಲ್ಲಿ ಇಪ್ಪತ್ತು ಮಂದಿ ಪ್ರಯಾಣಿಕರಿದ್ದರು. ಯಾರಿಗೂ ಯಾವುದೇ ಪ್ರಾಣಹಾನಿಯಾಗಿರಲಿಲ್ಲ. ನಂದಿನಿ ಪಾರ್ಲರ್‌ನ ಗೋಡೆ ಮತ್ತು ಒಳಗಡೆಯಿದ್ದ ಕೆಲವು ಉಪಕರಣಗಳಿಗೆ ಹಾನಿಯಾಗಿತ್ತು.ಇದೀಗ 9 ವರ್ಷದ ಬಾಲಕಿಯು BMTC ಗೆ ಬಲಿಯಾಗಿದ್ದಾಳೆ ಎಂದು ತಿಳಿದು ಬಂದಿದೆ