ಹಾವನ್ನು ನೋಡುತ್ತಲೇ ಎಂತೆಂತಹ ಮನುಷ್ಯರೇ ಭಯ ಪಡುತ್ತಿರೋವಾಗ,ಪ್ರಪಂಚದಲ್ಲೇ ತೀರ ಅಪಾಯಕಾರಿ ಹಾವು ಎಂದೆನಿಸಿರುವ ಕಿಂಗ್ ಕೋಬ್ರ,ಕೇವಲ 9 ವರ್ಷದ ಹುಡುಗಿಯನ್ನು ಎದುರಿಸಲಾಗದೇ ಸೋತು ಹೋಯಿತು.3 ಬಾರಿಯೂ ಹಾವಿನಿಂದ ಕಚ್ಚಿಸಿಕೊಂಡ್ರೂ ಸಹ ಆ ಹುಡುಗಿಯು ಯಾವ ರೀತಿಯಲ್ಲಿ ಹಾವನ್ನು ಎದುರಿಸಿದಳೋ,ಅವಳ ಆ ಸಾಹಸಗಾಥೆಯನ್ನು ಪ್ರತ್ಯೊಬ್ಬರೂ ಮಾಡುತ್ತಿದ್ದಾರೆ.
ನಮಗೆ ತಿಳಿದ ಮಾಹಿತಿಯನ್ವಯ,ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಖುಷ್ಬೂ ಎಂಬ 9 ವರುಷದ ಹುಡುಗಿ ತನ್ನ ತಾಯಿಯೊಡನೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು,ಯಾವುದೋ ಕಾರಣಕ್ಕೆ ಹುಡುಗಿ ಹೊರಗೆ ಬರಬೇಕಾಯಿತು.ಆಗ ಅವಳ ಎದುರಿಗೆ ಕಿಂಗ್ ಕೋಬ್ರ ನಿಂತಿತ್ತು,ಹಾವು ಒಂದರ ಮೇಲೆ ಒಂದು,ಒಂದರ ಮೇಲೆ ಒಂದರಂತೆ 3 ಬಾರಿ ಖುಷ್ಬೂ ವನ್ನು ಕಚ್ಚತೊಡಗಿತು,ಇನ್ನೇನು 4 ನೇ ಬಾರಿ ಕಚ್ಚಬೇಕು ಅನ್ನೋವಷ್ಟರಲ್ಲಿ,ಆ ಹುಡುಗಿಯು ಅದನ್ನೆತ್ತಿ ದೂರಕ್ಕೆಸೆದುಬಿಟ್ಟಳು.
ಖುಷ್ಬೂಕೂಗು ಕೇಳಿ ಮನೆಯವರು ಹಾಗೂ ಅಕ್ಕಪಕ್ಕದವರು ಸಮಯಕ್ಕೆ ಸರಿಯಾಗಿ ಓಡಿ ಬಂದು,ಆ ಹಾವನ್ನೆತ್ತಿ ಸಾಯಿಸಿದರು.
ಖುಷ್ಬೂವನ್ನು ಹಾಸ್ಪಿಟಲ್ ಗೆ ಸೇರಿಸಲಾಯಿತು,ಕಚ್ಚಿದ ಹಾವು ಯಾವುದೆಂದು ಮಾಹಿತಿ ತಿಳಿದ ಕೂಡಲೇ ಅವಳಿಗೆ ಔಷಧೀಯ ಉಪಚಾರ ವೇಗವಾಗಿ ನಡೆಯಲಾರಂಭಿಸಿತು.ಈಗ ಖುಷ್ಬೂ ಅಪಾಯದಿಂದ ಪಾರಾಗಿದ್ದಾಳೆ ಅನ್ನಲಾಗಿದೆ.ಖುಷ್ಬೂವಿನ ಈ ಸಾಹಸದ ಬಗ್ಗೆ ಆ ಹಳ್ಳೀಯ ಪ್ರತಿಯೊಬ್ಬನೂ ಹೊಗಳಿದ್ದೇ ಹೊಗಳಿದ್ದು.
- ಸ್ವರ್ಣಲತ ಭಟ್
POPULAR STORIES :
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!