94 ಬಾಲ್ ಗಳಲ್ಲಿ 173 ರನ್ ಚಚ್ಚಿದ ಇಶಾನ್

Date:

: ಟೀಮ್‌ ಇಂಡಿಯಾದ ಭವಿಷ್ಯದ ತಾರೆ ಎಂದೇ ಗುರುತಿಸಿಕೊಂಡಿರುವ ಯುವ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌, ಪ್ರಸಕ್ತ ಸಾಲಿನ ವಿಜಯ್‌ ಹಝಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಮಧ್ಯ ಪ್ರದೇಶ ಎದುರು ದಾಖಲೆಯ ಶತಕ ಸಿಡಿಸಿದ್ದಾರೆ.

ಶನಿವಾರವಷ್ಟೇ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ಕಿಶನ್‌, ಇದನ್ನು ಬಹಳಾ ಸಂಭ್ರಮದಿಂದಲೇ ಆಚರಿಸಿದಂತೆ ಕಂಡಿದ್ದು ಜಾರ್ಖಂಡ್‌ ತಂಡಕ್ಕೆ 324 ರನ್‌ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಇದು ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ ರನ್‌ಗಳ ಅಂತರದಲ್ಲಿ ವಿಶ್ವದ 3ನೇ ಅತಿ ದೊಡ್ಡ ಗೆಲುವಾಗಿದೆ.

ಇಲ್ಲಿನ ಹೋಳ್ಕರ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿದ ಜಾರ್ಖಂಡ್‌ ತಂಡದ ನಾಯಕ ಮತ್ತು ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಕಿಶನ್‌, 42 ಎಸೆತಗಳಲ್ಲಿ 50 ರನ್‌, 74 ಎಸೆತಗಳಲ್ಲಿ 100 ರನ್‌, 86 ಎಸೆತಗಳಲ್ಲಿ 150 ರನ್‌ ಪೂರೈಸುವ ಮೂಲಕ ಅಂತಿಮವಾಗಿ 94 ಎಸೆತಗಳಲ್ಲಿ 173 ರನ್‌ಗಳನ್ನು ಚೆಚ್ಚಿ ಔಟಾದರು. ಇದರಲ್ಲಿ ಅಂತಿಮ 71 ರನ್‌ಗಳು ಕೇವಲ 20 ಎಸೆತಗಳಲ್ಲಿ ಬಂದವು ಎಂಬುದು ವಿಶೇಷ. ಇದಕ್ಕೂ ಮುನ್ನ ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ ಕಿಶನ್‌ ವೈಯಕ್ತಿಕ ಗರಿಷ್ಠ ಮೊತ್ತ 139 ರನ್‌ ಆಗಿತ್ತು.

ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ ವಿಕೆಟ್‌ಕೀಪರ್‌ ಸಿಡಿಸಿದ ಮೂರನೇ ಅತ್ಯಧಿಕ ಮೊತ್ತ ಇದಾಗಿದೆ. ಇದಕ್ಕೂ ಮುನ್ನ ಮೊರ್ನೆ ವ್ಯಾನ್‌ ವಿಕ್‌ 2014ರಲ್ಲಿ ನೈಟ್ಸ್‌ ಎದುರು ನಡೆದ ಪಂದ್ಯದಲ್ಲಿ ಡಾಲ್ಫಿನ್ಸ್‌ ತಂಡದ ಪರ 171 ಎಸೆತಗಳಲ್ಲಿ 175 ರನ್‌ಗಳನ್ನು ಬಾರಿಸಿದ್ದರು. ಪಾಕಿಸ್ತಾನದ ಮೊಹ್ಸಿನ್‌ ಖಾನ್‌ ಲಾಹರ್‌ ವಿರುದ್ಧದ ಪಂದ್ಯದಲ್ಲಿ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ ತಂಡದ ಪರ 2003ರಲ್ಲಿ 152 ಎಸೆತಗಳಲ್ಲಿ 174 ರನ್‌ಗಳನ್ನು ಸಿಡಿಸಿದ್ದರು.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಜಾರ್ಖಂಡ್‌ ತಂಡ ನಿಗದಿತ 50 ಓವರ್‌ಗಳಲ್ಲಿ 422 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಕಿಶನ್‌ ಹೊರತಾಗಿ ವಿರಾಟ್ ಸಿಂಗ್‌ (68), ಸುಮಿತ್‌ ಕುಮಾರ್‌ (58) ಮತ್ತು ಅನುಕುಲ್‌ ರಾಯ್‌ (78) ಅರ್ಧಶತಕಗಳನ್ನು ಬಾರಿಸಿ ತಂಡಕ್ಕೆ ಬೃಹತ್‌ ಮೊತ್ತ ತಂದುಕೊಟ್ಟರು.

ಬಳಿಕ ಗುರಿ ಬೆನ್ನತ್ತಿದ್ದ ಪಾರ್ಥ್‌ ಸಹಾನಿ ಸಾರಥ್ಯದ ಮಧ್ಯ ಪ್ರದೇಶ ತಂಡ ವೇಗದ ಬೌಲರ್‌ ವರುಣ್‌ ಆರೊನ್‌ (37ಕ್ಕೆ 6) ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿಹೋಯಿತು. ಪರಿಣಾಮ ಮಧ್ಯ ಪ್ರದೇಶ ತಂಡ 18.4 ಓವರ್‌ಗಳಲ್ಲಿ 98 ರನ್‌ಗಳಿಗೆ ಆಲ್‌ಔಟ್‌ ಆಗಿ ಹೀನಾಯ ಸೋಲಿನ ಆಘಾತಕ್ಕೊಳಗಾಯಿತು.

ಪಂದ್ಯದಲ್ಲಿ ಕಿಶನ್‌ 7 ಕ್ಯಾಚ್‌ಗಳನ್ನು ಪಡೆದು ಹೊಸದ ದಾಖಲೆ ಬರೆದಿದ್ದಾರೆ. ಈ ಮೂಲಕ ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ ಪಡೆದ ರೈಲ್ವೇಸ್ ತಂಡದ ಮಹೇಶ್‌ ರಾವತ್‌ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. 2013ರಲ್ಲಿ ಮಧ್ಯ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಮಹೇಶ್‌ 7 ಕ್ಯಾಚ್‌ ಪಡೆದು ದಾಖಲೆ ಬರೆದಿದ್ದದ್ದರು. ಪಾರ್ಥಿವ್‌ ಪಟೇಲ್‌ 2014ರಲ್ಲಿ ಸೆಂಟ್ರಲ್‌ ಝೋನ್‌ ಎದುರು ವೆಸ್ಟ್‌ ಝೋನ್‌ ಪರ 6 ಕ್ಯಾಚ್‌ ಮತ್ತೊಂದು ಸ್ಟಂಪಿಂಗ್‌ ಮೂಲಕ ಮಿಂಚಿದ್ದರು.

ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ ರನ್‌ಗಳಿಂದ ಅತಿ ದೊಡ್ಡ ಜಯ ದಾಖಲಿಸಿದ ವಿಶ್ವ ದಾಖಲೆ ಸಮರ್‌ಸೆಟ್‌ ತಂಡದ ಹೆಸರಲ್ಲಿದೆ. ಸಮರ್ಸೆಟ್‌ 1990ರಲ್ಲಿ ಡೆವೋನ್‌ ವಿರುದ್ಧ 346 ರನ್‌ಗಳ ಬೃಹತ್‌ ಜಯ ದಾಖಲಿಸಿತ್ತು. ಇದಾದ ಬಳಿಕ ಗ್ಲೌಸ್ಟರ್‌ಶೈರ್‌ ತಂಡ 2003ರಲ್ಲಿ ಬಕಿಂಗ್‌ಹ್ಯಾಮ್‌ಶೈರ್‌ ಎದುರು 234 ರನ್‌ಗಳ ಗೆಲುವು ಸಂಪಾದಿಸಿತ್ತು.

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...