ವಿದ್ಯಾಭ್ಯಾಸ, ಕಲಿಕೆಗೆ ವಯಸ್ಸಿನ ಹಂಗಿಲ್ಲ. ಕಲಿಯುವ ಮನಸ್ಸಿದ್ದರೆ ಯಾವ ವಯಸ್ಸಾದರೇನು? ಅರ್ಜೆಂಟೀನಾದ ಯೂಸೆಬಿಯಾ ಎನ್ನುವ ಅಜ್ಜಿಗೆ ಬರೋಬ್ಬರಿ 99 ವರ್ಷ.! ಈ ಇಳಿ ವಯಸ್ಸಿನಲ್ಲಿ ಅವರು ಶಾಲೆಗೆ ಹೋಗಲು ಆರಂಭಿಸಿದ್ದಾರೆ. ಅಜ್ಜೆ ಪುಟ್ಟ ಮಕ್ಕಳಂತೆ ಶಾಲೆಗೆ ಹೋಗುತ್ತಿರುವುದು ಎಲ್ಲರನ್ನು ನಿಬ್ಬೆರೆಗಾಗಿಸಿದೆ. ಸೋಶಿಯಲ್ ಮೀಡಿಯಾದಲ್ಲಂತೂ ಅಜ್ಜಿಯದ್ದೇ ಮಾತು..!
ಕೌಟುಂಬಿಕ ಸಮಸ್ಯೆ , ತಾಯಿ ನಿಧನದಿಂದ ಚಿಕ್ಕ ವಯಸ್ಸಿನಲ್ಲೇ ಶಾಲೆ ಹೋಗುವುದನ್ನು ಯೂಸೆಬಿಯಾ ಬಬಿಟ್ಟಿದ್ದರು. ಈಗ 99ನೇ ವಯಸ್ಸಿಲ್ಲಿ ಶಾಲೆಗೆ ಹೋಗುವ ಮನಸ್ಸು ಮಾಡಿದ್ದಾರೆ. ಒಂದು ದಿನವೂ ಶಾಲೆಗೆ ಹೋಗುವುದನ್ನು ಮಿಸ್ ಮಾಡಲ್ಲ. ಅವರನ್ನು ಶಿಕ್ಷಕರಾದ ಪ್ಯಾಟ್ರಿಸಿಯಾ ಶಾಲೆಗೆ ಕರೆದುಕೊಂಡು ಹೋಗುತ್ತಾರೆ.
ಅಜ್ಜಿ ಈಗ ಓದು ಬರಹ ಕಲಿತಿದ್ದಾರೆ. ಅಷ್ಟೇ ಅಲ್ಲದೆ ಕಂಪ್ಯೂಟರ್ ಕೂಡ ಕಲಿತಿದ್ದಾರಂತೆ. ಅಜ್ಜಿಯ ಉತ್ಸಾಹ ಎಲ್ಲರ ಗಮನ ಸೆಳೆದಿದೆ. ಸ್ಪೂರ್ತಿ ನೀಡಿದೆ.
99ನೇ ವಯಸ್ಸಿನಲ್ಲಿ ಶಾಲೆಗೆ ಹೋಗಲಾರಂಭಿಸಿದ ಅಜ್ಜಿಯ ಕಥೆ..!
Date: