ಕನ್ನಡಿಗರಿಗಿಲ್ಲಿದೆ ಶುಭ ಸುದ್ದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೂ ಮೀಸಲಾತಿ

Date:

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಮಹಾನಗರಗಳಲ್ಲಿನ ಖಾಸಗಿ ವಲಯಗಳಲ್ಲಿ ಕನ್ನಡಿಗರಿಗಿಂತ ಅನ್ಯ ಭಾಷೀಯ ಜನರೇ ಹೆಚ್ಚಿದ್ದಾರೆ. ಇದನ್ನು ವಿರೋಧಿಸಿ ಹಲವಾರು ವರ್ಷಗಳಿಂದ ಕನ್ನಡಿಗರಿಗೂ ಮೀಸಲಾತಿ ನೀಡ್ಬೇಕು ಅಂತ ಹೋರಾಟ ನಡೀತಾನೆ ಬಂದಿದೆ. ಆದ್ರೆ ಈ ಎಲ್ಲಾ ಹೋರಾಟಗಳಿಗೂ ನ್ಯಾಯ ಸಿಗುವ ಕಾಲ ಬಂದಿದೆ..! ಯಾಕಂದ್ರೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ-ಬಿಟಿ) ಕಂಪನಿಗಳನ್ನೊರತುಪಡಿಸಿ ಉಳಿದೆಲ್ಲಾ ಖಾಸಗಿ ವಲಯ ಉದ್ಯಮ ಸಂಸ್ಥೆಗಳಲ್ಲಿ ಕನ್ನಡಿಗರಿಗೂ ಶೇ.100ರಷ್ಟು ಮೀಸಲಾತಿ ನೀಡ್ಬೇಕು ಎನ್ನುವ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದು ಮುಂದಿನ ಅಧಿವೇಶನದ ವೇಳೆ ಕಾಯ್ದೆ ಮಂಡನೆಯಾಗಲಿದ್ದು, ಈ ನೂತನ ನಿಯಮವನ್ನು ಪಾಲಿಸದ ಕಂಪನಿಗಳಿಗೆ ಸರ್ಕಾರ ನೀಡುವ ಸವಲತ್ತು ಹಾಗೂ ಅನುದಾನವನ್ನು ನಿರ್ದಾಕ್ಷಿಣ್ಯವಾಗಿ ಕಡಿತಗೊಳಿಸಲಾಗುತ್ತೆ..!
ಕಾರ್ಮಿಕ ಇಲಾಖೆ ಸಿದ್ದಪಡಿಸಿರೊ ಈ ನಿಯಮದಲ್ಲಿ ಕರ್ನಾಟಕ ಕೈಗಾರಿಕಾ ಉದ್ಯೋಗ ನೀತಿ 1961ರ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈ ಪ್ರಕಾರ ಐಟಿ-ಬಿಟಿ ಕಂಪನಿಗಳನ್ನೊರತುಪಡಿಸಿ ಖಾಯಂ, ಹಂಗಾಮಿ, ಗುತ್ತಿಗೆ, ಅಪ್ರೆಂಟಿಸ್ ಸೇರಿದಂತೆ ಎಲ್ಲಾ ವಲಯಗಳಲ್ಲೂ ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ನೀಡ್ಬೇಕು. 1946ರ ಕೇಂದ್ರ ಕಾಯ್ದೆ ತಿಳಿಸುರುವಂತೆ ಯಾವುದೇ ಖಾಸಗಿ ವಲಯವು ಆಯಾ ಪ್ರದೇಶದ ನೀರು, ಭೂಮಿ, ವಿದ್ಯುತ್ ಹಾಗೂ ಇನ್ನಿತರೆ ಮೂಲ ಸೌಕರ್ಯಗಳನ್ನು ಬಳಸಿಕೊಂಡಾಗ ಅಲ್ಲಿನ ಸ್ಥಳೀಯರಿಗೆ ಉದ್ಯೋಗವಕಾಶ ನೀಡಬೇಕು ಎಂಬ ಅಂಶ ಉಲ್ಲೇಖವಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡಿರೊ ರಾಜ್ಯ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಇದನ್ನು ಮುಂದಿನ ಅಧಿವೇಶನದಲ್ಲಿ ಜಾರಿಮಾಡಲಿದೆ.
ಅಷ್ಟೆ ಅಲ್ಲ 1995ರ ಕಾಯ್ದೆ ಪ್ರಕಾರವಾಗಿ ಖಾಸಗಿ ವಲಯವು ವಿಕಲಚೇತನರಿಗೆ ಶೇ. 5ರಷ್ಟು, ಯಾವುದೇ ವ್ಯಕ್ತಿ ಕರ್ನಾಟಕದಲ್ಲಿ ಸುಮಾರು 15 ವರ್ಷಗಳಿಂದ ನೆಲೆಸಿ ಆತನಿಗೆ ಅಲ್ಲಿನ ಭಾಷೆಯನ್ನು ಓದಲು, ಮಾತನಾಡಲು ಹಾಗೂ ಸಂವಹನ ನಡೆಸಲು ಬಂದರೆ ಆತನಿಗೆ ಉದ್ಯೋಗ ನೀಡ್ಬೇಕು ಎಂಬ ಅಂಶವೂ ಉಲ್ಲೇಖದಲ್ಲಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಕನ್ನಡಿಗರಿಗಿಲ್ಲಿದೆ ಶುಭ ಸುದ್ದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೂ ಮೀಸಲಾತಿ

25 ಪೈಸೆಯಿಂದ ಲಕ್ಷಾಧಿಪತಿಯಾದ್ರು..! ಹೇಗೆ ಗೊತ್ತಾ..?

ಯುವತಿಯನ್ನು ನುಂಗಿದ ಮೊಸಳೆ..! ಅದರ ಅಸಲಿ ಕಥೆ ಏನು ಗೊತ್ತಾ..?

ಡ್ರೆಸ್ ಬಗ್ಗೆ ಕಮೆಂಟ್: ಗಂಡನ ಎದುರೆ ನಡೀತು ಪತ್ನಿಗೆ ಹಲ್ಲೆ..!

ಆವಲಬೆಟ್ಟ ಫೇಮಸ್ ಸ್ಪಾಟ್‍ಗೆ ಭೇಟಿ ಮಾಡೋಕು ಮುನ್ನ ಈ ಸ್ಟೋರಿ ಓದಿ..!

ಮೋದಿಗೆ ಪತ್ರ ಬರೆದು ಜಿಲ್ಲಾಡಳಿತಕ್ಕೆ ಶಾಕ್ ಕೊಟ್ಟ ನಮನ.! ಪತ್ರದಲ್ಲೇನಿತ್ತು.?

ಗುಡ್‍ನ್ಯೂಸ್ : ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 4 ಲಕ್ಷಕ್ಕೆ .?

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...