ದೇಶದಲ್ಲಿ ಹಳೆಯ ನೋಟುಗಳು ಅಮಾನ್ಯಗೊಂಡ ನಂತರ ಸಾಕಷ್ಟು ಜನತೆ ಕ್ಯಾಶ್‍ಲೆಸ್ ವ್ಯವಹಾರದ ಕಡೆ ಮುಖ ಮಾಡಿದ್ದು ಅದರಲ್ಲೂ ಪೆಟ್ರೋಲ್ ಹಾಗೂ ಪೆಟ್ರೋಲ್ ಉತ್ಪನ್ನಗಳ ಖರೀದಿಯಲ್ಲಿ ಹಿಂದೆಂದಿಗಿಂತಲೂ ಈಗ ಹೆಚ್ಚಿಗೆ ಕಂಡು ಬಂದಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ನೋಟ್ ಬ್ಯಾನ್‍ಗಿಂತಲೂ ಹಿಂದೆ ದೇಶದ ಎಲ್ಲಾ ಪೆಟ್ರೋಲ್ ಬಂಕ್‍ಗಳಲ್ಲಿ ಕರೆನ್ಸಿ ನೋಟ್‍ಗಳು ಮಾತ್ರ ಚಲಾವಣೆಯಲ್ಲಿತ್ತು. ಆಗ ಶೇ.10 ರಷ್ಟು ಮಾತ್ರ ಕ್ಯಾಶ್‍ಲೆಸ್ ವ್ಯವಹಾರ ನಡೆಯುತ್ತಿದ್ದವು. ಆದ್ರೆ ಈಗ ಬಂಕ್‍ಗಳಲ್ಲಿ ಕ್ಯಾಶ್‍ಲೆಸ್ ವ್ಯವಹಾರದ ಪ್ರಮಾಣ ಶೇ.25ರಷ್ಟು ಹೆಚ್ಚಿಗೆ ಕಂಡು ಬಂದಿದೆ. ಅಂದರೆ ಈ ಹಿಂದಿಗಿಂತಲೂ ಶೇ.15 ರಷ್ಟರ ಏರಿಕೆ ಕಂಡಿದೆ ಎಂದು ಅವರು ತಿಳಿಸಿದ್ದಾರೆ. ದೇಶದ 53 ಸಾವಿರ ಪೆಟ್ರೋಲ್ ಬಂಕ್‍ಗಳಲ್ಲಿ 32 ಸಾವಿರ ಪೆಟ್ರೋಲ್ ಬಂಕ್‍ಗಳು ಸ್ವೈಪಿಂಗ್ ಹಾಗೂ ಇತರೆ ವಿದ್ಯುನ್ಮಾನ ಯಂತ್ರಗಳ ಸೌಲಭ್ಯ ಹೊಂದಿದ್ದು, ಸಾಕಷ್ಟು ಗ್ರಾಹಕರು ಕ್ಯಾಶ್‍ಲೆಸ್ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಇನ್ಮುಂದೆ ಕಾರು ಖರೀದಿಸೋದು ಅಷ್ಟೊಂದು ಸುಲಭವಲ್ಲ..!
ತನ್ನ ಸೆಕ್ಸ್ ಸಿಡಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋದ ಜೆ.ಟಿ ಪಾಟೀಲ..!
ಸದ್ಯದಲ್ಲೇ ಇಬ್ಬರು ರಾಜಕೀಯ ವ್ಯಕ್ತಿಗಳ ಸಿ.ಡಿ. ರಿಲೀಸ್ : ರಾಜಶೇಖರ ಮುಲಾಲಿ
ಸೀರೆ ಕೊಳ್ಳೋಕೆ ಮುಗಿ ಬಿದ್ರು ಜನ..! ಸೀರೆಯ ಬೆಲೆ ಕೇವಲ 1. ರೂಪಾಯಿ ಮಾತ್ರ..!
ಸತ್ತ ವ್ಯಕ್ತಿಯ ಶವ ಸಂಸ್ಕಾರಕ್ಕೆ ನೀಡ್ತಾ ಇಲ್ಲ ಒಂದಿಡಿ ಜಾಗ..?
ಕನ್ನಡಿಗರಿಗಿಲ್ಲಿದೆ ಶುಭ ಸುದ್ದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೂ ಮೀಸಲಾತಿ