ಫೋರ್ಬ್ಸ್ ಇಂಡಿಯಾ ನಿಯತಕಾಲಿಕೆ ಹೊರಡಿಸುವ ವರ್ಷದ ದಿ ರಿಚ್ಚೆಸ್ಟ್ ಸೆಲೆಬ್ರೆಟಿಗಳಲ್ಲಿ ಖ್ಯಾತ ಬಾಲಿವುಡ್ ನಟ ಸಲ್ಮಾನ್‍ಖಾನ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಫೋರ್ಬ್ಸ್ ಇಂಡಿಯಾ ಹೊರ ತಂದಿರುವ 2015-16ನೇ ಸಾಲಿನಲ್ಲಿ ಸೆಲೆಬ್ರೆಟಿಗಳ ಗಳಿಕೆ ಮತ್ತು ಜನಪ್ರಿಯತೆಯನ್ನು ಗಮನಿಸಿ ಈ ಶ್ರೇಯಾಂಕ ನೀಡಲಾಗಿದೆ. ಸುಲ್ತಾನ್ ಮತ್ತು ಪ್ರೇಮ್ ರತನ್ ಧನ್ ಪಾಯೋ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡಿದದ್ದಲ್ಲದೆ ನಟ ಸಲ್ಲು ಅವರ ಗಳಿಕೆ ಮೊತ್ತವೂ ಕೂಡ ಅಷ್ಟೇ ಎತ್ತರಕ್ಕೆ ಬೆಳೆಯಿತು. ಈ ಬಾರಿ ಸಲ್ಮಾನ್ ಬರೋಬ್ಬರಿ 270.33 ಕೋಟಿ ಗಳಿಸುವ ಮೂಲಕ ಅತೀ ಹೆಚ್ಚು ಗಳಿಕೆ ಪಡೆಯುವ ನಟ ಎಂಬ ಖ್ಯಾತಿ ಪಡೆದಿದ್ದಾರೆ. ಇನ್ನು ಈ ವರ್ಷ ತರೆ ಕಂಡ ಶಾರೂಖ್ ಅವರ ಯಾವ ಚಿತ್ರವೂ ಕೂಡ ನಿರೀಕ್ಷಿತ ಗೆಲುವು ತಂದು ಕೊಡಲಿಲ್ಲ. ಅಲ್ಲದೆ ಜಾಹಿರಾತುಗಳಲ್ಲೂ ನಿರೀಕಿತ ಯಶಸ್ಸು ಕಾಣದ ಅವರು ಈ ಬಾರಿಯ ಫೋರ್ಬ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಸರಾಸರಿ 221.75 ಕೋಟಿ ಆದಾಯ ಹೊಂದಿದ್ದ ಕಿಂಗ್ ಖಾನ್ ಪಟ್ಟಿಯ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಬಾಲಿವುಡ್ ಜೊತೆಗೆ ಭಾರತದ ಅಗ್ರೆಸಿವ್ ಆಟಗಾರನೂ ಕಾಣಿಸಿಕೊಂಡಿದ್ದು, ವಿರಾಟ್ ಕೋಹ್ಲಿ ಈ ಬಾರಿಯ ಫೋರ್ಬ್ಸ್ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ವಿರಾಟ್ ಸರಾಸರಿ 133.44 ಕೋಟಿ ಆದಾಯಗಳಿಸುವ ಮೂಲಕ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ನಟ ಅಕ್ಷಯ್ ಕುಮಾರ್ ಫೋರ್ಬ್ಸ್ ಪಟ್ಟಿಯ ನಾಲ್ಕನೇ ಸ್ಥಾನದಲ್ಲಿದ್ದರೆ 122.48 ಕೋಟಿ ಆದಾಯ ಹೊಂದಿರುವ ಮತ್ತೋರ್ವ ಭಾರತೀಯ ಕ್ರಿಕೆಟಿಗ ಎಂ.ಎಸ್ ಧೋನಿ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್, ಅಮಿತಾಬ್ ಬಚ್ಚನ್ ಮತ್ತು ಹೃತಿಕ್ ರೋಷನ್ ಕ್ರಮವಾಗಿ 7,9,10ನೇ ಸ್ಥಾನದಲ್ಲಿದ್ದಾರೆ.
ಇನ್ನು ಈ ಬಾರಿ ಆದಾಯ ಗಳಿಕೆಯಲ್ಲಿ ಬಾಲಿವುಡ್ ನಟಿಯರೇನು ಹಿಂದೆ ಬಿದ್ದಿಲ್ಲ, ಫೋಬ್ಸ್ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ 69.75 ಕೋಟಿ ಗಳಿಸಿದ್ದು ಪಟ್ಟಿಯ 6 ನೇ ಸ್ಥಾನ ಅಲಂಕರಿಸಿಕೊಂಡಿದ್ದಾರೆ. ಹಾಲಿವುಡ್‍ನಲ್ಲೂ ಹವಾ ಎಬ್ಸಿದ್ದ ಪ್ರಿಯಾಂಕ ಚೋಪ್ರಾ ರ್ಯಾಂಕ್‍ನಲ್ಲಿ 8 ನೇ ಸ್ಥಾನದಲ್ಲಿದ್ದಾರೆ. ಅವರ ವಾರ್ಷಿಕ ವರಮಾನ 76 ಕೋಟಿ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಇನ್ಮುಂದೆ ಕಾರು ಖರೀದಿಸೋದು ಅಷ್ಟೊಂದು ಸುಲಭವಲ್ಲ..!
ತನ್ನ ಸೆಕ್ಸ್ ಸಿಡಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋದ ಜೆ.ಟಿ ಪಾಟೀಲ..!
ಸದ್ಯದಲ್ಲೇ ಇಬ್ಬರು ರಾಜಕೀಯ ವ್ಯಕ್ತಿಗಳ ಸಿ.ಡಿ. ರಿಲೀಸ್ : ರಾಜಶೇಖರ ಮುಲಾಲಿ
ಸೀರೆ ಕೊಳ್ಳೋಕೆ ಮುಗಿ ಬಿದ್ರು ಜನ..! ಸೀರೆಯ ಬೆಲೆ ಕೇವಲ 1. ರೂಪಾಯಿ ಮಾತ್ರ..!
ಸತ್ತ ವ್ಯಕ್ತಿಯ ಶವ ಸಂಸ್ಕಾರಕ್ಕೆ ನೀಡ್ತಾ ಇಲ್ಲ ಒಂದಿಡಿ ಜಾಗ..?
ಕನ್ನಡಿಗರಿಗಿಲ್ಲಿದೆ ಶುಭ ಸುದ್ದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೂ ಮೀಸಲಾತಿ