ಆರ್‍ಬಿಐ ಶಿಫಾರಸ್ಸು ಮಾಡಿದ ಕೆಲವೇ ಗಂಟೆಗಳಲ್ಲಿ ನೋಟ್ ಬ್ಯಾನ್ ಬಗ್ಗೆ ಭಾಷಣ ಮಾಡಿದ ಮೋದಿ..!

Date:

ನವೆಂಬರ್ 8ರಂದು ಯಾರೂ ಕೂಡ ಊಹೆ ಮಾಡಿಕೊಳ್ಳಲಾಗದ ಒಂದು ಅಚ್ಚರಿಯ ಘಟನೆ ನಡೆದು ಹೋಯ್ತು. ರಾತ್ರೋ ರಾತ್ರಿ ಪ್ರಧಾನಿ ಮೋದಿ ಭಾಷಣ ಮಾಡಿ ಇನ್ಮುಂದೆ ಹಳೆಯ 500 ಮತ್ತು 1000 ನೋಟುಗಳು ನಿಷೇಧವಾಗಿದ್ದು, ಅದಿನ್ನು ಕೇವಲ ಕಾಗದದ ಹಾಳೆಯಂತೆ ಎಂದು ತಿಳಿಸಿದ್ದರು. ಈ ನೋಟ್ ಬ್ಯಾನ್ ನಂತ್ರ ನಡೆದದ್ದೆಲ್ಲಾ ಒಂದು ರೀತಿಯ ನಾಟಕೀಯ ಬೆಳವಣಿಗಗಳು. ಕೇಂದ್ರದ ಈ ನಿರ್ಧಾವನ್ನು ಎಲ್ಲರೂ ಒಪ್ಪೋಕೆ ಸಾಧ್ಯಾನ ಹೇಳಿ ಅದೇ ರೀತಿ ಇದೊಂದು ಪಿತೂರಿ ನೋಟ್ ಬ್ಯಾನ್ ವಿಷಯ ಆರ್‍ಬಿಐ ಸೇರಿದಂತೆ ಪ್ರತಿಪಕ್ಷದ ಎಲ್ಲಾ ಮುಖಂಡರಿಗೆ ಗೊತ್ತಿತ್ತು, ಎರಡು ದಿನಗಳ ಹಿಂದೆಯೇ ಮೋದಿ ಭಾಷಣವನ್ನು ರೆಕಾರ್ಡ್ ಮಾಡಲಾಗಿತ್ತು ಎಂಬ ಊಹಾಪೋಹಗಳು ಬಂದವು. ಆದ್ರೆ ಈಗ ಬಂದಿರುವ ಮೂಹಿತಿ ಕೇಳಿದ್ರೆ ನಿಮಗೆಲ್ಲಾ ಅಚ್ಚರಿಯಾಗ್ಬೋದು. ಆರ್‍ಬಿಐ ಹಳೇಯ ನೋಟುಗಳನ್ನು ಬ್ಯಾನ್ ಮಾಡಿ ಎಂದು ಹೇಳಿದ ಕೆಲವೇ ಗಂಟೆಯೊಳಗೆ ಮೋದಿ ಭಾಷಣ ಮಾಡಿ ಜನರಿಗೆ ವಿಷಯ ಮುಟ್ಟಿಸಿದ್ದಾರೆ ಎಂದು ಆರ್‍ಟಿಐ ಅಡಿ ಬಯಲಾಗಿದೆ. ಕಳೆದ ನ.8ರಂದು ಹಳೆಯ 500 ಮತ್ತು 1000ರೂ.ಗಳಿಗೆ ನಿಷೇಧ ಹೇರಿ ಎಂದು ಆರ್‍ಬಿಐ ಶಿಫಾರಸ್ಸು ಮಾಡಿ ಕೆಲವೇ ಗಂಟೆಯೊಳಗೆ ಈ ಕಾರ್ಯವನ್ನು ಮೋದಿ ಮಾಡಿದ್ದರು. ಇನ್ನೊಂದು ಅಚ್ಚರಿಯ ಸಂಗತಿ ಅಂದ್ರೆ ನೋಟ್ ಬ್ಯಾನ್ ಕುರಿತಾದ ಮಾಹಿತಿ ಮೋದಿ ಸೇರಿದಂತೆ ಆರ್‍ಬಿಐ ಗವರ್ನರ್ ಉರ್ಜಿತ್ ಪಟೇಲ್, ಆರ್ಥಿಕ ವ್ಯವಹಾರ ಕಾರ್ಯದರ್ಶಿ ಶಕ್ತಿಕಾಂತ್ ದಾಸ್, ಡೆಪ್ಯೂಟಿ ಗವರ್ನರ್‍ಗಳಾದ ಆರ್. ಗಾಂಧಿ, ಎಸ್‍ಎಸ್ ಮುದ್ರಾ, ನಚಿಕೇತ್ ಎಂ ಮೋರ್ ಸೇರಿದಂತೆ 8 ಜನರಿಗೆ ಮಾತ್ರ ತಿಳಿದಿತ್ತು ಅಷ್ಟೆ..! ಆರ್‍ಬಿಐ ಶಿಫಾರಸ್ಸು ಮಾಡಿದ ಕೆಲವೇ ಗಂಟೆಗಳಲ್ಲಿ ತುರ್ತು ಸಂಪುಟ ಸಭೆ ಕರೆದ ಮೋದಿ ಈ ನಿರ್ಧಾರದ ಬಗ್ಗೆ ತಿಳಿಸಿದ್ರು. ಅಷ್ಟೆ ಅಲ್ಲ ರಾತ್ರಿ ನೋಟ್ ಬ್ಯಾನ್ ಕುರಿತಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗುವವರೆಗೂ ಅವರೆನ್ನೆಲ್ಲಾ ಅಲ್ಲೇ ಕೂರಿಸಿಕೊಂಡಿದ್ರು. ಬಳಿಕ ರಾತ್ರಿ 8ರ ಸುಮಾರಿಗೆ ನೋಟ್ ಬ್ಯಾನ್ ಕುರಿತು ರಾಷ್ಟ್ರವನ್ನೂದ್ದೇಶಿಸಿ ಭಾಷಣ ಮಾಡಿದ್ರು. ಮಾಹಿತಿ ಹಕ್ಕು ಕಾಯ್ದೆ(ಆರ್‍ಟಿಐ) ಅಡಿ ಆರ್‍ಬಿಐ ನೀಡಿರುವ ಮಾಹಿತಿಯಲ್ಲಿ ನೋಟು ನಿಷೇಧ ಘೋಷಣೆಯ ಹಿನ್ನಲೆ ಬಯಲಾಗಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಫೋಬ್ರ್ಸ್ ಶ್ರೀಮಂತ ಸೆಲಿಬ್ರಿಟಿಗಳಲ್ಲಿ ವಿರಾಟ್ ಕೋಹ್ಲಿಗೆ 3ನೇಸ್ಥಾನ

ಇನ್ಮುಂದೆ ಕಾರು ಖರೀದಿಸೋದು ಅಷ್ಟೊಂದು ಸುಲಭವಲ್ಲ..!

ತನ್ನ ಸೆಕ್ಸ್ ಸಿಡಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋದ ಜೆ.ಟಿ ಪಾಟೀಲ..!

ಸದ್ಯದಲ್ಲೇ ಇಬ್ಬರು ರಾಜಕೀಯ ವ್ಯಕ್ತಿಗಳ ಸಿ.ಡಿ. ರಿಲೀಸ್ : ರಾಜಶೇಖರ ಮುಲಾಲಿ

ಸೀರೆ ಕೊಳ್ಳೋಕೆ ಮುಗಿ ಬಿದ್ರು ಜನ..! ಸೀರೆಯ ಬೆಲೆ ಕೇವಲ 1. ರೂಪಾಯಿ ಮಾತ್ರ..!

ಸತ್ತ ವ್ಯಕ್ತಿಯ ಶವ ಸಂಸ್ಕಾರಕ್ಕೆ ನೀಡ್ತಾ ಇಲ್ಲ ಒಂದಿಡಿ ಜಾಗ..?

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...