ಹತ್ತು ವರ್ಷದ ಹುಡುಗನಿಗೆ ಅದೆಂಥಾ ಜವಬ್ದಾರಿ..! ಈತನ ಬುದ್ಧಿ ಎಲ್ಲರಿಗೂ ಬರಲ್ಲ ಕಣ್ರೀ..!

Date:

ಕೆಲವರಿಗೆ ಮೂರು ಕತ್ತೆ ವಯಸ್ಸಾಗಿದ್ರೂ ಬುದ್ಧಿ ಬಂದಿರಲ್ಲ..! ದುಡಿದು ತಿನ್ನೋ ವಯಸ್ಸಾಗಿದ್ರೂ ಸೋಮಾರಿಗಳಾಗಿ ಭೂಮಿಗೆ ಭಾರ, ಕೂಳು ದಂಡ” ಅನ್ನುವಂತೆ ಜೀವನ ತಳ್ತಾ ಇರ್ತಾರೆ…! ಬೇರೆ ಅವರ ಕತೆ ಬಿಟ್ಟಾಕಿ ನಮಗೇ ನಮ್ಮ ಜವಬ್ದಾರಿ ನೆಟ್ಟಗೆ ಗೊತ್ತೇ ಇಲ್ಲ..! ಇಪ್ಪತ್ತೂ ದಾಟಿದರೂ ಜವಬ್ದಾರಿ ಇಲ್ಲದ ನಾವುಗಳು 10 ವರ್ಷದ ಹುಡುಗನೊಬ್ಬನನ್ನು ನೋಡಿ ಜವಬ್ದಾರಿ ಅಂದ್ರೇನು ಅಂಥ ಅರ್ಥ ಮಾಡಿಕೊಳ್ಬೇಕಿದೆ..! ಆಟ ಆಡೋ ಈ ವಯಸ್ಸಲ್ಲಿ ಈ ಪುಟ್ಟ ಹುಡುಗನಿಗೆ ಅದೆಂಥಾ ಜವಬ್ದಾರಿ ಇದೆ..! ಈ ಮುದ್ದು ಹುಡುಗ ನಮಗೆಲ್ಲಾ ಹೊಣೆಗಾರಿಕೆ ಪಾಠವನ್ನು ಮಾಡ್ತಾನೆ..! ಆ ಹುಡುಗ ಯಾರು..? ಅವನು ನಿಭಾಯಿಸ್ತಾ ಇರೋ ಹೊಣೆಗಾರಿಕೆಯಾದ್ರೂ ಎಂಥಹದ್ದು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು..! ಈ ಜವಬ್ದಾರಿಯುತ ಹುಡುಗ ನನಗಂತೂ ತುಂಬಾ ಇಷ್ಟವಾದ.. ನಿಮಗೂ ಅವನು ಇಷ್ಟ ಆಗ್ತಾನೆಂಬ ನಂಬಿಕೆಯೂ ನನಗಿದೆ..!
ಆ ಪುಟ್ಟ ಬಾಲಕ ಪಾಟ್ನಾದವ..! ಮೊದಲೇ ಹೇಳಿದಂತೆ ಆತನಿಗಿನ್ನೂ ಕೇವಲ ಹತ್ತೇ ವರ್ಷ..! ತುಂಬಾ ಆ್ಯಕ್ಟೀವ್ ಇದ್ದಾನೆ..! ಅವನ ಕಣ್ಣುಗಳಲ್ಲೇ ಆತ್ಮವಿಶ್ವಾಸ ಎದ್ದು ಕಾಣುತ್ತೆ…! ಇವನನ್ನು ನೋಡಿದ್ರೆ ಮುಂದೊಂದು ದಿನ ಈ ಹುಡುಗ ಸಾಧನೆಯ ಶಿಖರವನ್ನೇರುತ್ತಾನೆಂದು ಯಾರು ಬೇಕಾದರೂ ಭವಿಷ್ಯ ನುಡಿಯ ಬಹುದು..! ಈತನ ತಂದೆ ಬೀದಿಯಲ್ಲಿ ಗೊಂಬೆ ಮಾರ್ತಾರೆ..! ಅದೇ ಅವರ ಕುಟುಂಬದ ಜೀವನಾಧಾರ…! ಈ ಹುಡುಗ ಶಾಲೆಯಿಂದ ಪ್ರತಿದಿನ ಸಂಜೆ ನಾಲ್ಕು ಗಂಟೆಗೆ ಮನೆಗೆ ಬಂದವನೇ ಅಪ್ಪನ ದುಡುಮೆಗೆ ಕೈ ಜೋಡಿಸ್ತಾನೆ..! ಬೇರೆ ಬೇರೆ ಆಕಾರದ ಬಲೂನ್ ಗಳನ್ನು ಊದಿ ಕೊಡುತ್ತಾನೆ..!
ಈ ಹುಡುಗನಿಗೆ ನಿನ್ನ ಹೆಸರೇನಪ್ಪಾ ಅಂಥ ಕೇಳಿದ್ರೆ “ಅಮಿತ್ ಕುಮಾರ್ ಪಾಂಡೆ” ಎಂದು ಕಾನ್ಫಿಡೆಂಟ್ ಆಗಿ ಹೇಳ್ತಾನೆ..!
ಯಸ್, ಈ ಹುಡಗ “ಅಮಿತ್ ಕುಮಾರ್ ಪಾಂಡೆ”..! ನಿತ್ಯವೂ ಶಾಲೆ ಬಿಟ್ಟವನೇ ಅಪ್ಪನಿಗೆ ಸಹಾಯ ಮಾಡ್ತಾನೆ..! ಹಂಗಂತ ಆತ ತನ್ನೊಡನೆ ಕೆಲಸಕ್ಕೆ ಬರಲೆಂದು ತಂದೆ ಎಂದೂ ಬಯಸಿದವರಲ್ಲ..! ಮಗು, ಹೋಗಪ್ಪಾ ಆಟ ಆಡ್ಕೋ ಅಂದ್ರೆ.. ಇಲ್ಲ ಪಪ್ಪಾ ಆಟ ಆಡೋಕೆ ಹೋಗಲ್ಲ ಅಂತಾನೆ..! ಆಟ ಆಡುವುದನ್ನು ಬಿಟ್ಟು ಅಪ್ಪನ ಜೊತೆಯಲ್ಲೇ ಇರ್ತಾನೆ..!
ಶಾಲೆಗೆ ಹೋಗ್ತೀಯಲ್ಲಾ.. ಹೋಮ್ ವರ್ಕ್ ಏನೂ ಇಲ್ವಾ ಅಂತ ಯಾರಾದ್ರೂ ಕೇಳಿದ್ರೂ ಆಗಲೂ ಅದೇ ಕಾನ್ಫಿಡೆಂಟ್ ನಿಂದ ಉತ್ತರ ಕೊಡ್ತಾನೆ..! “ನಾನು ಹೋಮ್ ವರ್ಕ್ ಮಾಡಿ ಮುಗಿಸಿದ್ದೇನೆ..!ಯಾವುದೇ ಬಾಕಿ ಇಲ್ಲ..!ನಾನು ಅಪ್ಪನ ಕೆಲಸಕ್ಕೆ ಸಹಾಯ ಮಾಡ್ತೀನಿ” ಅಂತಾನೆ. ಅಪ್ಪ ಕೇಳಿದ್ರೂ ಅದೇ ಹೋಮ್ ವರ್ಕ್ ಮುಗಿದಿದೆ ಪಪ್ಪಾ.. ನಾನು ನಿನಗೆ ಸಹಾಯ ಮಾಡ್ತೀನಿ “..!
ಇಷ್ಟು ಚಿಕ್ಕ ವಯಸ್ಸಲ್ಲಿ ಅದೆಂಥಾ ಬುದ್ಧಿ ಅಲ್ವಾ..! ಈ ಹುಡಗನಿಗೊಂದು ಸಲಾಂ..! ಈತನ ಬುದ್ಧಿ ಎಲ್ಲರಿಗೂ ಬರಲ್ಲ ಕಣ್ರೀ.. ಆ ಬುದ್ಧಿ ಬಂದ್ರೆ ಒಳ್ಳೆಯದು..! ಎನಿವೇ.. ಪುಟ್ಟಾ ನಿನಗೆ ಶುಭವಾಗಲಿ, ನಿನ್ನ ಭವಿಷ್ಯ ಉಜ್ವಲವಾಗಲಿ…! ಈ ಹುಡುಗನನ್ನು ಹೆತ್ತವರು ನಿಜಕ್ಕೂ ಧನ್ಯರು..!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಗಂಡ ಹೆಂಡತಿಗೆ ಹೊಡೆದ್ರೆ ಈ ನಾಯಿ ಏನು ಮಾಡುತ್ತೆ ಅಂತ ನೋಡಿ..! ಇದು ಶಾಂತಿಪ್ರಿಯ ನಾಯಿ – ಭೀಮ್..!

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಕ್ರೀಡಾ ಇತಿಹಾಸದಲ್ಲಿಯೇ ಅತೀ ದುಬಾರಿ ಟಿಕೇಟ್ ಯಾವುದು ಗೊತ್ತೇ..?

ರಿಯಲ್ ಲೈಫ್ ನ ರಿಯಲ್ ಹೀರೋಗಳು..! ಏನೂ ಇಲ್ಲದವರು ಏನೇನೋ ಆಗಿಬಿಟ್ಟರು..!

ಭಾರತದ ಈ ಸಾಹಸಿ ಬೈಕಿನಲ್ಲೇ ಒಂದುವರೆ ವರ್ಷದಲ್ಲಿ 5 ಖಂಡ, 14 ದೇಶಗಳನ್ನು ಸುತ್ತಿದ..!

ಏನೇನೋ ಕಂಡುಹಿಡಿಯುವವರ ನಡುವೆ ಇನ್ನೇನೋ ಕಂಡುಹಿಡಿಯುವ ನಮ್ಮ ಹುಡುಗ..! ಇವನು ಪಕ್ಕಾ ಕನ್ನಡದ ಸೈಂಟಿಸ್ಟ್

ಬೆಂಗಳೂರಿಗೂ ಬಂತು ತ್ರಿಡಿ ಬಾಬಾ ಫೋಟೋ..! ಈ ಫೋಟೋದ ವಿಶೇಷತೆ ಏನು ಗೊತ್ತಾ..?

ಆ್ಯಪಲ್ ತಿನ್ನೋಕೆ ಮುಂಚೆ ಈ ವೀಡಿಯೋ ತಪ್ಪದೇ ನೋಡಿ..!

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

ಈ ಗೂಗಲ್ ಟ್ರಿಕ್ಸ್ ಗಳು ನಿಮಗೆ ಗೊತ್ತಾ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

ಭಾರತದ ಇತಿಹಾಸ ಹಾಗೂ ಅಪೂರ್ವ ಸಾಧನೆಯನ್ನು ತೋರಿಸೋ ಅದ್ಭುತ ಸ್ಯಾಂಡ್ ಆರ್ಟ್.!

ಪಳಪಳನೆ ಹೊಳೆಯುವ ಕೂದಲಿಗಾಗಿ ಕೋಕ ಕೋಲಾ ಬಳಸಿ..!

 ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...