ಆಧಾರ್ ಪೇಮೆಂಟ್ ಆ್ಯಪ್ ಬಳಸೋದಾದ್ರೂ ಹೇಗೆ..?

Date:

ನೋಟ್ ಬ್ಯಾನ್ ನಂತರ ದೇಶದಲ್ಲಿ ನಗದು ರಹಿತ ವ್ಯವಹಾರಕ್ಕೆ ಹೆಚ್ಚು ಹೆಚ್ಚು ಉತ್ತೇಜನ ನೀಡ್ಬೇಕು ಎನ್ನುವ ಉದ್ದೇಶದಿಂದ ದೇಶದ ಜನತೆಗೆ ಕೇಂದ್ರ ಸರ್ಕಾರ ಕ್ರಿಸ್‍ಮಸ್ ಉಡುಗೊರೆಯಾಗಿ ಆಧಾರ್ ಪೇಮೆಂಟ್ ಆಪ್ ಬಿಡುಗಡೆ ಮಾಡಿದೆ. ಡಿಜಿಟಲ್ ಇಂಡಿಯಾ ಕನಸನ್ನು ಹೊಂದಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಆ್ಯಂಡ್ರಾಯ್ಡ್ ಆಧಾರಿತ ಆಪ್‍ನ್ನು ಲೋಕಾರ್ಪಣೆ ತಂದಿದ್ದು, ಇದರ ಮೂಲಕ ಇ-ಪೇಮೆಂಟ್ ಸುಲಭವಾಗಿ ಮಾಡಬಹುದು. ಈ ಆ್ಯಪ್ ಇದ್ದರೆ ನೀವು ಯಾವುದೇ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‍ಗಳ ಮೊರೆ ಹೋಗಬೇಕಾಗಿರೊದಿಲ್ಲ. ಅವುಗಳಿಗಿಂತಲೂ ಇನ್ನೂ ಸುಲಭವಾಗಿ ಆಧಾರ್ ಪೇಮೆಂಟ್ ಆಪ್‍ನ ಸಹಾಯದಿಂದ ವ್ಯವಹಾರ ನಡೆಸಬಹುದು. ಫ್ರೀಚಾರ್ಜ್, ಪೇಟಿಎಂ ಇನ್ನು ಮುಂತಾದ ಮೊಬೈಲ್ ವ್ಯಾಲೆಟ್‍ಗಳಿಗೆ ಸಮನಾಗಿ ಈ ಆ್ಯಪ್ ಕಾರ್ಯ ನಿರ್ವಹಿಸಲಿದೆ. ಭಾರತ ರಾಷ್ಟ್ರೀಯ ಪಾವತಿ ಸಹಕಾರ ಸಂಘ ಹಾಗೂ ಐಡಿಎಫ್‍ಸಿ ಬ್ಯಾಂಕ್ ಈ ಅಪ್ಲಿಕೇಷನ್ ರೂಪಿಸಿದ್ದು, ಆಂಡ್ರಾಯ್ಡ್ ಫೋನ್‍ಗಳ ಮೂಲಕ ಅಪ್ಲಿಕೇಷನ್ ಡೌನ್‍ಲೋಡ್ ಮಾಡ್ಕೊಳ್ಬೋದು.
ಆಪ್ ಹೇಗೆ ಕಾರ್ಯ ನಿರ್ವಹಿಸುತ್ತೆ..?
ಈ ಆಪ್‍ನ್ನು ನೀವು ಬಳಸಬೇಕು ಅಂದ್ರೆ ಮೊದಲಿಗೆ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ನಿಮ್ಮ ಆಧಾರ್ ಸಂಖ್ಯೆಯ ಜೊತೆ ಜೋಡಣೆ ಮಾಡ್ಕೊಳ್ಬೇಕು. ಇದರ ಮೂಲಕ ಮಾಸ್ಟರ್, ವೀಸಾ ಕಾರ್ಡ್‍ಗಳಿಗೆ ಕೊಡಬೇಕಿದ್ದ ಶುಲ್ಕಗಳಿಗೆ ಬ್ರೇಕ್ ಬೀಳಲಿದೆ. ಇನ್ನು ಮಾರಾಟಗಾರರು ಈ ಅಪ್ಲಿಕೇಷನ್ ಜತೆಗೆ ಬಯೋ ಮೆಟ್ರಿಕ್ ಹಾಗೂ ಸ್ಕ್ಯಾನರ್, ಈ ಎರಡನ್ನೂ ಹೊಂದಿರಬೇಕಾಗಿರುತ್ತದೆ. ಈ ಮೂಲಕ ಅಪ್ಲಿಕೇಷನ್‍ನ್ನು ಸುಲಭವಾಗಿ ಬಳಸಬಹುದು.
ಗ್ರಾಹಕರ ಬಳಕೆ ಹೇಗೆ..?
ನೀವು ಯಾವುದಾದ್ರೂ ವಸ್ತು ಖರೀದಿ ಮಾಡಿಕೊಂಡಲ್ಲಿ ಮೊದಲು ನೀವು ವ್ಯಾಪಾರಿಯ ಬಳಿ ಆಧಾರ್ ಮರ್ಚೆಂಟ್ ಅಪ್ಲಿಕೇಷನ್ ಇದೆಯಾ ಎಂದು ಕೇಳಬೇಕು. ಒಂದು ವೇಳೆ ಇದ್ದರೆ ನಿಮ್ಮ ಆಧಾರ್ ವಿವರಗಳ ಮಾಹಿತಿಯನ್ನು ಅವರಿಗೆ ನೀಡಿ. ಆನಂತರವಾಗಿ ಆಧಾರ್ ಜೊತೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ವಿವರ ಅಲ್ಲಿ ಲಭ್ಯವಾಗುತ್ತೆ. ಆಗ ನೀವು ನಿಮಗೆ ಬೇಕಾದ ಬ್ಯಾಂಕ್‍ಗಳ ಮೂಲಕ ವ್ಯವಹಾರ ನಡೆಸಬಹುದು. ಇದರ ಮೂಲಕ ಬಯೋಮೆಟ್ರಿಕ್ ಸ್ಕ್ಯಾನರ್ ಮೂಲಕ ವ್ಯವಹಾರವನ್ನು ಇನ್ನೂ ಸುರಕ್ಷಿತಗೊಳಿಸಲಾಗುತ್ತೆ.
ಎರಡು ಖಾತೆಗಳಿದ್ರೂ ಚಿಂತೆ ಇಲ್ಲ..
ನೀವೇನಾದ್ರೂ ಒಂದೇ ಬ್ಯಾಂಕ್‍ನಲ್ಲಿ ಎರಡು ಖಾತೆಗಳನ್ನು ಹೊಂದಿದ್ದರೆ ಆಗ ಎರಡು ಖಾತೆಗಳಿಗೂ ಆಧಾರ್ ಲಿಂಕ್ ಮಾಡಿಕೊಳ್ಳಿ. ಈ ರೀತಿ ಆಧಾರ್ ಜೋಡಣೆ ಮಾಡಿಕೊಂಡಾಗ ಬ್ಯಾಂಕ್ ಖಾತೆಯ ಮೂಲಕ ಸುಲಭವಾಗಿ ಯಾವುದೇ ಹಳ್ಳಿಯಲ್ಲಾದರೂ ವ್ಯವಹಾರ ಮಾಡ್ಬೋದು ಎಂದು ಯುಐಎಡಿಐ ತಿಳಿಸಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಎಚ್ಚರ..! ಚೆಕ್ ಬೌನ್ಸ್ ಆದ್ರೆ ಅದು ಜಾಮೀನು ರಹಿತ ಅಪರಾಧ..!

ಕನ್ನಡಿಗರಿಗಿಲ್ಲಿದೆ ಶುಭ ಸುದ್ದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೂ ಮೀಸಲಾತಿ

25 ಪೈಸೆಯಿಂದ ಲಕ್ಷಾಧಿಪತಿಯಾದ್ರು..! ಹೇಗೆ ಗೊತ್ತಾ..?

ಯುವತಿಯನ್ನು ನುಂಗಿದ ಮೊಸಳೆ..! ಅದರ ಅಸಲಿ ಕಥೆ ಏನು ಗೊತ್ತಾ..?

ಡ್ರೆಸ್ ಬಗ್ಗೆ ಕಮೆಂಟ್: ಗಂಡನ ಎದುರೆ ನಡೀತು ಪತ್ನಿಗೆ ಹಲ್ಲೆ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...