ಎಚ್ಚರ..! ಚೆಕ್ ಬೌನ್ಸ್ ಆದ್ರೆ ಅದು ಜಾಮೀನು ರಹಿತ ಅಪರಾಧ..!

0
49

ಇನ್ಮುಂದೆ ನಿಮ್ಮ ಚೆಕ್ ಬೌನ್ಸ್ ಆದ್ರೆ ನಿಮಗೆ ಕಾದಿದೆ ನೋಡಿ ಗಂಡಾಂತರ..! ಯಾಕಂದ್ರೆ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳೊಕೆ ಮುಂದಾಗಿದೆ..! ಹೌದು.. ದೇಶದಲ್ಲಿ ಹಳೇಯ ನೋಟುಗಳು ರದ್ದುಮಾಡಿ ಕ್ಯಾಶ್‍ಲೆಸ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡುವ ದೃಷ್ಠಿಯಿಂದ ಚೆಕ್ ಬೌನ್ಸ್ ಪ್ರಕರಣಗಳಿಗೆ ಇನ್ನಷ್ಟು ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮಹತ್ವದ ನಿರ್ಧಾರಕ್ಕೆ ಗಂಭೀರ ಚಿಂತನ ನಡೆಯುತ್ತಿದೆ. ಚೆಕ್ ಬೌನ್ಸ್ ಆದ ಒಂದು ತಿಂಗಳೊಳಗೆ ಅದನ್ನು ಪಾವತಿ ಮಾಡದಿದ್ದರೆ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಚಿಂತನ ನಡೆಸಿವೆ. ಅಲ್ಲದೆ ಈ ಕಾಯ್ದೆ ತಿದ್ದುಪಡಿ ತರುವ ಎಲ್ಲಾ ಸಾಧ್ಯತೆಗಳು ಇದೆ. ದೇಶಾದಾದ್ಯಂತ ವಿವಿಧ ಬ್ಯಾಂಕ್‍ಗಳಲ್ಲಿ ಸುಮಾರು 18 ಲಕ್ಷ ಚೆಕ್ ಬೌನ್ಸ್ ಪ್ರಕರಣಗಳಿದ್ದು, ಅದಕ್ಕೆಲ್ಲಾ ಕಡಿವಾಣ ಹಾಕುವ ನಿಟ್ಟಿನಲ್ಲಿ ಇನ್ಮುಂದೆ ಚೆಕ್ ಬೌನ್ಸ್ ಪ್ರಕರಣಗಳು ಕಂಡು ಬಂದಲ್ಲಿ ಅವರನ್ನು ಜಾಮೀನು ರಹಿತ ಅಪರಾಧ ಪಟ್ಟಿಗೆ ಸೇರಿಸುವ ಮೂಲಕ ಚೆಕ್ ಬೌನ್ಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ 2014ರಲ್ಲಿ ಪ್ರಕರಣ ಯಾವ ವ್ಯಾಪ್ತಿಯಲ್ಲಿ ನಡೆದವೋ ಅಲ್ಲೇ ಪ್ರಕರಣ ವಿಚರಣೆ ನಡೆಯಬೇಕು ಎಂದು ಆದೇಶ ನೀಡಿತ್ತು. ಆದರೂ ಕೂಡ ಚೆಕ್ ಬೌನ್ಸ್ ವಿಲೇವಾರಿ ತಡವಾಗುತ್ತಿದ್ದು, ನ್ಯಾಯಾಲಯದ ಮೇಲೆ ಒತ್ತಡಗಳು ಕೂಡ ಹೆಚ್ಚಾಗ್ತಾ ಇದೆ. ಈ ನಡುವೆ ವರ್ತಕರ ಸಂಸ್ಥೆಗಳ ನಿಯೋಗವೊಂದು ಹಣಕಾಸು ಸಚಿವಾಲಯದ ಮುಖ್ಯಸ್ಥರನ್ನು ಭೇಟಿ ಮಾಡಿ ಇಂತಹ ಸಲಹೆಯೊಂದನ್ನು ನೀಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ನೋಟು ನಿಷೇಧದ ಬಳಿಕೆ ವ್ಯಾಪಾರ ವಹಿವಾಟುಗಳು ಸುಸೂತ್ರವಾಗಿ ನಡೆಯಬೇಕೆನ್ನುವ ಹಿನ್ನಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಕನ್ನಡಿಗರಿಗಿಲ್ಲಿದೆ ಶುಭ ಸುದ್ದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೂ ಮೀಸಲಾತಿ

25 ಪೈಸೆಯಿಂದ ಲಕ್ಷಾಧಿಪತಿಯಾದ್ರು..! ಹೇಗೆ ಗೊತ್ತಾ..?

ಯುವತಿಯನ್ನು ನುಂಗಿದ ಮೊಸಳೆ..! ಅದರ ಅಸಲಿ ಕಥೆ ಏನು ಗೊತ್ತಾ..?

ಡ್ರೆಸ್ ಬಗ್ಗೆ ಕಮೆಂಟ್: ಗಂಡನ ಎದುರೆ ನಡೀತು ಪತ್ನಿಗೆ ಹಲ್ಲೆ..!

ಆವಲಬೆಟ್ಟ ಫೇಮಸ್ ಸ್ಪಾಟ್‍ಗೆ ಭೇಟಿ ಮಾಡೋಕು ಮುನ್ನ ಈ ಸ್ಟೋರಿ ಓದಿ..!

ಮೋದಿಗೆ ಪತ್ರ ಬರೆದು ಜಿಲ್ಲಾಡಳಿತಕ್ಕೆ ಶಾಕ್ ಕೊಟ್ಟ ನಮನ.! ಪತ್ರದಲ್ಲೇನಿತ್ತು.?

ಗುಡ್‍ನ್ಯೂಸ್ : ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 4 ಲಕ್ಷಕ್ಕೆ .?

LEAVE A REPLY

Please enter your comment!
Please enter your name here