ಬ್ಯಾಂಕ್ ಜೊತೆ ಬ್ಯುಸಿನೆಸ್ ಮಾಡಲು ಅವಕಾಶ, ಪ್ರತಿ ತಿಂಗಳು 30,000 ತನಕ ಆದಾಯ

Date:

ಬದಲಾಗುತ್ತಿರೋ ಸಮಯದ ಜೊತೆಗೆ ಬ್ಯುಸಿನೆಸ್ ನಲ್ಲೂ ನಮಗಾಗಿ ಅನೇಕ ಅವಕಾಶಗಳು ಬರುತ್ತಲಿವೆ ಆದರೆ ಅನೇಕರು ಇದರ ಕಡೆಗೆ ತುಂಬಾ ಕಡಿಮೆ ಗಮನ ನೀಡುತ್ತಿದ್ದಾರೆ, ಇಂತಹುದರಲ್ಲೇ ಒಂದು ಅವಕಾಶವೇನೆಂದರೆ, ಸ್ವಂತ ಬ್ಯಾಂಕ್ ತೆಗೆದು ವ್ಯವಹಾರ ಮಾಡುವಂತಹದ್ದು. ಹೌದು!
ಈಗ ನೀವೂ ನಿಮ್ಮ ಮಿನಿ ಬ್ಯಾಂಕ್ ತೆರೆಯಬಹುದು ಹಾಗೂ ಇದರ ಮೂಲಕ ನಿಮ್ಮ ಆದಾಯವನ್ನು ಪ್ರತೀ ತಿಂಗಳು ಹೆಚ್ಚಿಸಬಹುದು. ಪ್ರಧಾನ ಮಂತ್ರಿ ಜನ ಧನ ಯೋಜನೆಯ ಮೂಲಕ ನಿಮಗೆ ಇದಕ್ಕೆ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ಇದರ ಮೂಲಕ ನೀವು ನಗರಗಳಿಂದಾರಂಭಿಸಿ ಹಳ್ಳಿಗಳ ತನಕ ನಿಮ್ಮ ಸೇವೆಯನ್ನು ನೀಡಬಹುದಾಗಿದೆ.
2 ವಿಧದಲ್ಲಿ ಆದಾಯ ಮಾಡಬಹುದು :

1.ಬ್ಯಾಂಕ್ ಜೊತೆ ನೀವು ಬೆಸೆದುಕೊಂಡಲ್ಲಿ, ಆ ಬ್ಯಾಂಕ್ ನಿಂದ ನಿಮಗೆ ಒಂದು ನಿರ್ದಿಷ್ಟ ಮೊತ್ತ ಲಭಿಸುತ್ತದೆ.
2.ನಿಮ್ಮಿಂದ ಯಾವುದೇ ಸರ್ವಿಸ್ ಕಸ್ಟಮರ್ ಗೆ ನೀಡಲಾಗುತ್ತದೋ, ಅದರ ಮೇಲೂ ನಿಮಗೆ ಕಮಿಷನ್ ನೀಡಲಾಗುತ್ತದೆ.

ನೀವು ಯಾವ ಸರ್ವಿಸ್ ನೀಡಬಹುದು?
ಪ್ರಧಾನ ಮಂತ್ರಿ ಜನ ಧನ ಯೋಜನೆಯನ್ವಯ ಬ್ಯಾಂಕ್ ತನ್ನ ವ್ಯವಹಾರವನ್ನು ಹೆಚ್ಚಿಸಲು ಬ್ಯಾಂಕ್ ಸಹಾಯಿ(ಮಿತ್ರ)ಯನ್ನು ನೇಮಿಸಲಾರಂಭಿಸಿದೆ. ನೀವು ಸ್ವತಃ ಬ್ಯಾಂಕ್ ಮಿತ್ರರಾಗಬಹುದು, ಇಲ್ಲವಾದಲ್ಲಿ ಒಂದು ಕಸ್ಟಮರ್ ಸರ್ವಿಸ್ ಪಾಯಿಂಟ್ ತೆರೆಯಬಹುದು,
ಇದರ ಮೂಲಕ ಬ್ಯಾಂಕ್ ಮಿತ್ರರು ಸೇರಿ ಈ ಕೆಳಗಿನ ಸೇವೆಗಳನ್ನು ನೀಡಬಹುದು. www.tnit.in

1.ಸೇವಿಂಗ್ ಬ್ಯಾಂಕ್ ಅಕೌಂಟ್ ತೆರೆಯುವುದು.
2.ಆರ್ಡಿ ಹಾಗೂ ಎಫ್.ಡಿ ಅಕೌಂಟ್.
3.ಕ್ಯಾಶ್ ಡಿಪಾಸಿಟ್ ಹಾಗೂ ವಿತ್ ಡ್ರಾ ಸರ್ವಿಸ್
4.ಓವರ್ ಡ್ರಾಫ್ಟ್ ಸರ್ವಿಸ್
5.ರೈತರಿಗೆ ಸಾಲ ನೀಡುವುದು
6.ಜೀವ ವಿಮೆ ಹಾಗೂ ಮ್ಯೂಚ್ಯುವಲ್ ಫಂಡ್ ವಹಿವಾಟುಗಳು
7.ಪೆನ್ಷನ್ ಅಕೌಂಟ್
8.ಬಿಲ್ ಪಾವತಿ ಸೇವೆ
ಈ ಸೇವೆಯು ಬ್ಯಾಂಕ್ ಹಾಗೂ ಸರ್ವಿಸ್ ನೀಡುವ ಕಂಪನಿಗಳ ಜೊತೆಗಿನ ಒಪ್ಪಂದದ ಮೇಲೆ ನಡೆಯುತ್ತದೆ. ಇಲ್ಲಿ ಬಿಲ್ ಪಾವತಿಯು ಬೇರೆ ಬೇರೆ ಬ್ಯಾಂಕ್ ವ್ಯವಸ್ಥೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಈ ಕೆಳಗಿನ ಸೇವೆಗಳಾದ ಡಿಟಿಹೆಚ್ ರಿಚಾರ್ಜ್, ಮೊಬಾಯಿಲ್ ರಿಚಾರ್ಜ್, ಡಾಟಾ ಕಾರ್ಡ್ ಪೋಸ್ಟ್ ಪೇಯಿಡ್ ಮೊಬೈಲ್ ಹಾಗೂ ಲ್ಯಾಂಡ್ ಲಾಯಿನ್ ಬಿಲ್ ಪಾವತಿ, ವಿದ್ಯುತ್ ಬಿಲ್ ಪಾವತಿ, ಪ್ಯಾನ್ ಕಾರ್ಡ್ ಸರ್ವಿಸ್, ಟಿಕೆಟ್ ಬುಕಿಂಗ್, ಎಲ್ಲಾ ತರಹದ ಇನ್ಷುರೆನ್ಸ್ ಪ್ರೀಮಿಯಂ ಮೊತ್ತ ಸಂಗ್ರಹಣೆ ಇವೇ ಮೊದಲಾದವುಗಳ ಬಿಲ್ ಸೇವೆ ನೀಡಲಾಗುತ್ತದೆ.
ಯಾವುದೇ ವ್ಯಕ್ತಿಯು ಬ್ಯಾಂಕ್ ಮಿತ್ರನಾಗಲಿಚ್ಛಿಸುವನೋ ಅಥವಾ ಕಸ್ಟಮರ್ ಪಾಯಿಂಟ್ ತೆರೆಯಲಿಚ್ಛಿಸುವನೋ, ಅಂತಹವನು ಬ್ಯಾಂಕ್ ಜೊತೆಗೆ ನೇರ ಸಂಪರ್ಕ ಹೊಂದಿರಬೇಕು, ಹಾಗೂ ಈ ನಿಟ್ಟಿನಲ್ಲಿ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಜೊತೆಯಲ್ಲಿ ಖಾಸಗಿ ಬ್ಯಾಂಕ್ ಗಳ ಜೊತೆಯೂ ನೀವು ಸಂಪರ್ಕ ಹೊಂದಬಹುದು.
ಈ ಕಸ್ಟಮರ್ ಸರ್ವಿಸ್ ಪಾಯಿಂಟನ್ನು ನೀವು ನಗರಗಳು, ಸಣ್ಣ ಸಣ್ಣ ಪಟ್ಟಣಗಳು ಹಾಗೂ ಹಳ್ಳೀಗಳಲ್ಲೂ ತೆರೆಯಬಹುದು. ನಗರಗಳಲ್ಲಿ ಇದನ್ನು ವಾರ್ಡ್ ಆಧಾರದ ಮೇಲೂ ಹಾಗೂ ಹಳ್ಳಿಗಳಲ್ಲಿ ಕೆಲವೊಂದು ಪ್ರಮುಖ ಜಾಗಗಳನ್ನಾಧರಿಸಿ ತೆರೆಯಲಾಗುತ್ತದೆ.
ಯಾವುದೇ 18 ವರುಷಕ್ಕಿಂತ ಮೇಲ್ಪಟ್ಟ ವ್ಯಕ್ತಿಯು ಈ ಸೇವೆ ನೀಡಬಹುದಾಗಿದೆ, ಅಲ್ಲದೆ,ಯಾವುದೇ ಕಂಪನಿಗಳೂ ಈ ಸೇವೆಗಾಗಿ ಅರ್ಜಿ ಸಲ್ಲಿಸಬಹುದು.
ಇದಕ್ಕಾಗಿ ನೀವು ನಿಮ್ಮ ಪರಿಚಯ ಪತ್ರ (ಪ್ಯಾನ್ ಕಾರ್ಡ್,ಆಧಾರ್ ಕಾರ್ಡ್,ಡ್ರೈವಿಂಗ್ ಲೈಸನ್ಸ್),ರೆಸಿಡೆನ್ಷಿಯಲ್ ಪ್ರೂಫ್,ಬ್ಯುಸಿನೆಸ್ ಅಡ್ರೆಸ್ ಪ್ರೂಫ್(ವಿದ್ಯುತ್ ಬಿಲ್,ಟೆಲಿಫೋನ್ ಬಿಲ್) ಹತ್ತನೆಯ ತರಗತಿ ಮಾರ್ಕ್ ಶೀಟ್, ಕ್ಯಾರೆಕ್ಟರ್ ಸರ್ಟಿಫಿಕೇಟ್(ಪೋಲಿಸ್ ವೆರಿಫೈಡ್) ಬ್ಯಾಂಕ್ ಅಕೌಂಟ್ ಡೀಟೇಲ್,
ಪಾಸ್ ಬುಕ್,ಕ್ಯಾನ್ಸಲ್ಡ್ ಚೆಕ್ ಹಾಗೂ ಎರಡು ಪಾಸ್ ಪೋರ್ಟ್ ಸೈಜ್ ಭಾವಚಿತ್ರಗಳನ್ನು ನೀಡಬೇಕಾಗುತ್ತದೆ.
ಈ ಸೇವೆಗಾಗಿ ನಿಮ್ಮ ಬಳಿ 50-60,000 ತನಕ ಬಂಡವಾಳ ಈ ಕೆಳಗಿನ ವಸ್ತುವಿಗಾಗಿ :

  • ಲ್ಯಾಪ್ ಟಾಪ್/ಡೆಸ್ಕ್ ಟಾಪ್
  • ಇಂಟರ್ನೆಟ್ ಕನೆಕ್ಷನ್
  • ಸ್ಕ್ಯಾನರ್
  • ಪ್ರಿಂಟರ್

ಬ್ಯಾಂಕ್ ನಿಂದ ನಿಮಗಾಗಿ 1.25 ಲಕ್ಷದ ವರೆಗೆ ಲೋನ್ ಸಿಗುತ್ತದೆ, ಹಾಗೂ ಇವುಗಳಲ್ಲಿ ಕ್ಯಾಟಗರಿ ಲೋನ್ ಮೊತ್ತ, ವೆಹಿಕಲ್ (50,000), ಲ್ಯಾಪ್ ಟಾಪ್, ಪ್ರಿಂಟರ್, ಸ್ಕ್ಯಾನರ್ (50,000) ಹಾಗೂ ವರ್ಕಿಂಗ್ ಕ್ಯಾಪಿಟಲ್ 25,000 ರೂಪಾಯಿಗಳು.
ಬ್ಯಾಂಕ್ ಮಿತ್ರನಾಗುವುದರಿಂದ ನಿಮಗೆ ಬ್ಯಾಂಕ್ ಒಂದು ನಿಗದಿತ ಮೊತ್ತವನ್ನು ನಿಮ್ಮ ಸ್ಯಾಲರಿಯಾಗಿ ನೀಡುತ್ತದೆ, ಇದು ಸುಮಾರು 5,000 ರೂಪಾಯಿಗಳವರೆಗೂ ಇರಬಹುದು ಇದಲ್ಲದೆ ಬ್ಯಾಂಕ್ ಅಕೌಂಟ್ ತೆರೆಯುವುದರಿಂದ ಆರಂಭಿಸಿ ಪ್ರತೀ ಟ್ರಾನ್ಸಾಕ್ಷನ್ ಮೇಲೆ ನಿಮಗೆ ಕಮಿಷನ್ ಸಿಗುತ್ತದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಓರ್ವ ವರಿಷ್ಟ ಅಧಿಕಾರಿಯ ಹೇಳಿಕೆಯಂತೆ, ಯಾವುದೇ ವ್ಯಕ್ತಿಯೂ ಸುಲಭವಾಗಿ 25-30,000 ತನಕದ ಆದಾಯವನ್ನು ಬ್ಯಾಂಕ್ ಮಿತ್ರ ಸೇವೆಯಿಂದ ಪಡೆಯಬಹುದಾಗಿದೆ.

  • ಸ್ವರ್ಣಲತ ಭಟ್

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಶಮಿ ಪತ್ನಿಯ ಡ್ರೆಸ್ ಬಗ್ಗೆ ಟೀಕೆ, ಟೀಕಾಕಾರರಿಗೆ ನಾಚಿಕೆಯಾಗಬೇಕು : ಮಹಮ್ಮದ್ ಕೈಫ್

ಬೇನಾಮಿ ಆಸ್ತಿ ಹೊಂದಿರುವರ ಮೇಲಿದೆ ಮೋದಿಯ ಹದ್ದಿನ ಕಣ್ಣು..!

ಆಧಾರ್ ಪೇಮೆಂಟ್ ಆ್ಯಪ್ ಬಳಸೋದಾದ್ರೂ ಹೇಗೆ..?

ಎಚ್ಚರ..! ಚೆಕ್ ಬೌನ್ಸ್ ಆದ್ರೆ ಅದು ಜಾಮೀನು ರಹಿತ ಅಪರಾಧ..!

ಕನ್ನಡಿಗರಿಗಿಲ್ಲಿದೆ ಶುಭ ಸುದ್ದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೂ ಮೀಸಲಾತಿ

25 ಪೈಸೆಯಿಂದ ಲಕ್ಷಾಧಿಪತಿಯಾದ್ರು..! ಹೇಗೆ ಗೊತ್ತಾ..?

ಯುವತಿಯನ್ನು ನುಂಗಿದ ಮೊಸಳೆ..! ಅದರ ಅಸಲಿ ಕಥೆ ಏನು ಗೊತ್ತಾ..?

ಡ್ರೆಸ್ ಬಗ್ಗೆ ಕಮೆಂಟ್: ಗಂಡನ ಎದುರೆ ನಡೀತು ಪತ್ನಿಗೆ ಹಲ್ಲೆ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...