No menu items!
12.1 C
Munich
Saturday, May 2, 2026

ಮೋದಿ, ಒಬಾಮಾರನ್ನು ಕೊಹ್ಲಿ ಹಿಂದಿಕ್ಕಿದಾದ್ರೂ ಯಾವುದ್ರಲ್ಲಿ ಗೊತ್ತಾ..?

Must read

ಭಾರತದ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಅಗ್ರೆಸಿವ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ವಿಶ್ವದಾದ್ಯಂತ ಕೋಟ್ಯಾನು ಕೋಟಿ ಫಾಲೋವರ್ಸ್ ಹೊಂದಿರುವ ಕೊಹ್ಲಿ ಈಗ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಪ್ರಧಾನಿ ಮೋದಿ ಅವರನ್ನು ಹಿಂದಿಕ್ಕಿ ನಂ.1 ಪಟ್ಟಕ್ಕೇರಿದ್ದಾರೆ..!
ಅರೆ ಯಾವುದ್ರಲ್ಲಪ್ಪಾ..? ಅಂತ ಚಿಂತೆ ಮಾಡ್ತಾ ಇದೀರಾ..? ಬೇರೆಯಾವುದ್ರಲ್ಲೂ ಅಲ್ಲ ಯೂತ್ ಸರ್ವೆಯಲ್ಲಿ..! ಹೌದು.. ಮೀಡಿಯಾ ಹೌಸ್ ಹಾಗೂ ಮಾರ್ಸ್ ನಡೆಸಿದ ಯೂತ್ ಸರ್ವೆ 2016ರ ಸಮೀಕ್ಷೆಯಲ್ಲಿ ಕೊಹ್ಲಿ ಯುವಕರಿಗೆ ಆದರ್ಶ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಸಮೀಕ್ಷೆಯಲ್ಲಿ ಒಟ್ಟು ಶೇ.26.4 ವೋಟು ಪಡೆಯುವ ಮೂಲಕ ಪ್ರಧಾನಿ ಮೋದಿ ಹಾಗೂ ಒಬಾಮಾರನ್ನು ಹಿಂದಿಕ್ಕಿದ್ದಾರೆ. ಇನ್ನು ಒಬಾಮಾ ಅವರಿಗೆ ಶೇ.24ರಷ್ಟು ವೋಟ್ ಬಿದ್ದು ಎರಡನೇ ಸ್ಥಾನದಲ್ಲಿದ್ದರೆ, ಶೆ.18.7 ರಷ್ಟು ಮಂದಿ ನರೇಂದ್ರ ಮೋದಿ ಅವರನ್ನು ರೋಲ್ ಮಾಡೆಲ್ ಎಂದು ಒಪ್ಪಿಕೊಂಡಿದ್ದಾರೆ. ಇನ್ನು ಆಟಗಾರರ ಪಟ್ಟಿಯಲ್ಲಿ ವಿರಾಟ್‍ಗೆ ಶೇ.42.3 ವೋಟ್ ಪಡೆದು ಅಗ್ರಸ್ಥಾನಕ್ಕೇರಿದ ಆಟಗಾರನಾಗಿದ್ದಾರೆ. ಎಂ ಎಸ್ ಧೋನಿಗೆ 9.7ರಷ್ಟು ವೋಟ್ ಸಿಕ್ಕಿದೆ. ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ರೋಜರ್ ಫೆಡರರ್ ಶೇ.8.5ರಷ್ಟು ವೋಟ್ ಪಡೆದು 3ನೇ ಸ್ಥಾನದಲ್ಲಿದ್ದಾರೆ.
ಇನ್ನು ಭಾರತೀಯ ರಾಜಕೀಯ ನಾಯಕರೂ ಕೂಡ ದೇಶದ ಯುವಕರಿಗೆ ಆದರ್ಶ ವ್ಯಕ್ತಿಗಳಾಗಿದ್ದು ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲನೇ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ದೆಹಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿದ್ದು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಶೇ.8ರಷ್ಟು ಜನರು ಮಾತ್ರ ರೋಲ್ ಮಾಡೆಲ್ಲಾಗಿ ಸ್ವೀಕರಿಸಿದ್ದಾರೆ. ಸಿನಿಮಾ ರಂಗದಲ್ಲಿ ರಣವೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಲಿಸ್ಟ್ ನಲ್ಲಿ ಸ್ಥಾನ ಪಡೆದಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಶಮಿ ಪತ್ನಿಯ ಡ್ರೆಸ್ ಬಗ್ಗೆ ಟೀಕೆ, ಟೀಕಾಕಾರರಿಗೆ ನಾಚಿಕೆಯಾಗಬೇಕು : ಮಹಮ್ಮದ್ ಕೈಫ್

ಬೇನಾಮಿ ಆಸ್ತಿ ಹೊಂದಿರುವರ ಮೇಲಿದೆ ಮೋದಿಯ ಹದ್ದಿನ ಕಣ್ಣು..!

ಆಧಾರ್ ಪೇಮೆಂಟ್ ಆ್ಯಪ್ ಬಳಸೋದಾದ್ರೂ ಹೇಗೆ..?

ಎಚ್ಚರ..! ಚೆಕ್ ಬೌನ್ಸ್ ಆದ್ರೆ ಅದು ಜಾಮೀನು ರಹಿತ ಅಪರಾಧ..!

ಕನ್ನಡಿಗರಿಗಿಲ್ಲಿದೆ ಶುಭ ಸುದ್ದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೂ ಮೀಸಲಾತಿ

25 ಪೈಸೆಯಿಂದ ಲಕ್ಷಾಧಿಪತಿಯಾದ್ರು..! ಹೇಗೆ ಗೊತ್ತಾ..?

ಯುವತಿಯನ್ನು ನುಂಗಿದ ಮೊಸಳೆ..! ಅದರ ಅಸಲಿ ಕಥೆ ಏನು ಗೊತ್ತಾ..?

ಡ್ರೆಸ್ ಬಗ್ಗೆ ಕಮೆಂಟ್: ಗಂಡನ ಎದುರೆ ನಡೀತು ಪತ್ನಿಗೆ ಹಲ್ಲೆ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article