ನೋಟು ಅಮಾನ್ಯಗೊಂಡು ಕಾಳಧನಿಕರ ನಿದ್ದೆಗೆಡಿಸಿರುವ ಪ್ರಧಾನಿ ನರೇಂದ್ರ ಮೋದಿ ನಾಳೆ ರಾಷ್ಟ್ರವನ್ನುದ್ದೇಶಿಸಿ ಮತ್ತೊಮ್ಮೆ ಭಾಷಣ ಮಾಡಲಿದ್ದಾರೆ. ನೋಟು ಅಮಾನ್ಯಗೊಂಡ ನಂತರ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರೂ ಕೂಡ ಮೋದಿ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಮೋದಿ ಆಪ್ತ ವಲಯಗಳು ಜನತೆ ಅನುಭವಿಸುತ್ತಿರುವ ತೊಂದರೆಯ ಕುರಿತಾಗಿ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಹಲವಾರು ಮಹತ್ವದ ಘೋಷಣೆಗಳು ಹೊರಡಿಸಲಿದ್ದಾರೆ ಎಂದು ತಿಳಿದು ಬಂದಿದೆ. ನೋಟು ಬ್ಯಾನ್ ಆದ ನಂತ್ರ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಜನರು ದಿನಕ್ಕೆ ಎರಡೂವರೆ ಸಾವಿರ ರೂಗಳನ್ನು ಮಾತ್ರ ತಮ್ಮ ಖಾತೆಯಿಂದ ಡ್ರಾ ಮಾಡಿಕೊಳ್ಳಬಹುದಿತ್ತು. ತಿಂಗಳಿಗೆ 24 ಸಾವಿರ ರೂ ಹಣ ವಿತ್ ಡ್ರಾ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದ್ದರು. ಆದರೆ ಈಗ ಈ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕುವ ಸಂಭವವಿದೆ ಎಂದು ತಿಳಿದು ಬಂದಿದೆ. ಇನ್ನು ಬ್ಯಾಂಕ್‍ನಲ್ಲಿ ತಿಂಗಳಿಗೆ 25 ಸಾವಿರದ ಬದಲಾಗಿ 50 ಸಾವಿರ ರೂ.ಗಳನ್ನು ಹಾಗೂ ಪ್ರತಿ ದಿನ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಹಣ ಡ್ರಾ ಮಾಡಿಕೊಳ್ಳುವ ಪ್ರಮಾಣವೂ ಏರಿಕೆಯಾಗಲಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ನರೆಂದ್ರ ಮೋದಿ ತಮ್ಮ ಆಪ್ತ ಸಚಿವರೊಂದಿಗೆ ಮಾತುಕತೆ ನಡೆಸಿದ್ದರು. ಈ ವೇಳೆ ನೋಟು ನಿಷೇಧದಿಂದ ಜನಸಾಮಾನ್ಯರು, ರೈತರು ಹಾಗೂ ಮಧ್ಯಮವರ್ಗದ ಜನರು ಸೇರಿದಂತೆ ದೇಶದ ಬಹುತೇಕ ಮಂದಿ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಮಾಹಿತಿಯನ್ನು ಮೋದಿ ಅವರಿಗೆ ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಾಳೆ ಮೋದಿ ಅವರು ಮಾಡುವ ಭಾಷಣದಲ್ಲಿ ಈಗಿರುವ ನಿಯಮಗಳಿಗೆಲ್ಲಾ ನಿರ್ಬಂಧ ಹೇರುವ ಸಾಧ್ಯತೆಗಳಿವೆ. ಇನ್ನು ನೋಟು ಬ್ಯಾನ್ ನಂತರ ತಮಗೆ 50 ದಿನ ಕಾಲಾವಕಾಶ ನೀಡಿ ಎಂದಿದ್ದ ಮೋದಿಗೆ ನಾಳೆ ಕಡೆಯ ದಿನ. ಈ ನಿಟ್ಟಿನಲ್ಲಿ ನಾಳೆ ಮಂಡಿಸುವ ಭಾಷಣ ಮೋದಿ ಅವರಿಗೆ ಮಹತ್ವದ್ದಾಗಿದ್ದು, ಮತ್ತೇನು ಬದಲಾವಣೆ ಮಾಡುತ್ತಾರೊ..? ಎಂಬ ಕುತೂಹಲವೂ ಜನರಲ್ಲಿ ಕಾಡ ತೊಡಗಿದೆ..!
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಈ ವಾರ ಯಾರೂ ಪ್ರಥಮ್‍ನ ನಾಮಿನೇಟ್ ಮಾಡಲಿಲ್ಲ ಯಾಕೆ ಗೊತ್ತಾ.? ಇದರ ಹಿಂದಿನ ರಹಸ್ಯ ಬಯಲು.!!!
ಹಗಲಿನಲ್ಲಿ ಟಾಪ್ ಸಾಫ್ಟ್ ವೇರ್ ಇಂಜಿನಿಯರ್.! ರಾತ್ರಿ ಆದ್ರೆ ಸೀರೆ ಧರಿಸುವ ಗಂಡ..!
ಉಪೇಂದ್ರ ಹಾಗೂ ಯಶ್ ಬಗ್ಗೆ ಹಂಸಲೇಖ ಹೇಳಿದ್ದಾದ್ರೂ ಏನು..?
ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ ಈ ಪುಟ್ಟ ಹೃದಯ…!! Real Love Story
ಜನವರಿಯಿಂದ ಜಿಯೋ ಫ್ರೀ ಇಂಟರ್‍ನೆಟ್ ಕ್ಯಾನ್ಸಲ್..?!!
ಬ್ಯಾಂಕ್ ಜೊತೆ ಬ್ಯುಸಿನೆಸ್ ಮಾಡಲು ಅವಕಾಶ, ಪ್ರತಿ ತಿಂಗಳು 30,000 ತನಕ ಆದಾಯ