ಬೆಂಗಳೂರು ನಗರ ನೂತನ ಪೊಲೀಸ್ ಕಮಿಷನರ್ ಆಗಿ ನೇಮಕರಾದ ಪ್ರವೀಣ್ ಸೂದ್ ಅಧಿಕಾರಕ್ಕೆ ಬಂದಿದ್ದೆ ಹೊಸ-ಹೊಸ ನಿಯಮಗಳನ್ನು ರೂಪಿಸಲು ಮುಂದಾಗಿದ್ದಾರೆ..! ಸಾರ್ವಜನಿಕರಿಗೆ ಅನಗತ್ಯ ಕಿರುಕುಳ ತಪ್ಪಿಸುವ ಹಾಗೂ ಸಾರ್ವಜನಿಕರ ಸಮಯ ಹಾಳು ಮಾಡದಿರುವ ದೃಷ್ಠಿಯಿಂದ ಇನ್ಮುಂದೆ ಪೊಲೀಸರು ವಾಹನಗಳನ್ನು ಅಡ್ಡಗಟ್ಟಿ ಡಿಎಲ್ ಪರೀಕ್ಷೆ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರು ನಗರ ನಿರ್ಗಮಿತ ಪೊಲೀಸ್ ಅಧಿಕಾರಿ ಎಸ್.ಎಸ್ ಮೇಘರಿಕ್ ಅವರಿಂದ ಬ್ಯಾಟನ್ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಗರದಲ್ಲಿನ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೆಲವೊಂದು ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಅಪರಾಧ ಪತ್ತೆ ಬಿಟ್ಟು ಇನ್ನುಳಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಆದಷ್ಟು ಬೇಗ ಕೆಲಸ ಆಗಬೇಕು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ದೂರುದಾರರಾಗಲಿ ಅಥವಾ ಸಾರ್ವಜನಿಕರಾಗಲಿ ಪದೆ ಪದೆ ಪೊಲೀಸ್ ಠಾಣೆ ಮೆಟ್ಟಿಲೇರುವುದನ್ನು ನಿಯಂತ್ರಿಸಬೇಕು. ದೂರ ನೀಡಿದವರಿಗೆ ದೂರು ಸ್ವೀಕರಿಸಲಾಗಿದೆ ಎಂದು ತಿಳಿಯಲ ಅವರಿಗೆ ಎಸ್‍ಎಂಎಸ್ ಮೂಲಕ ಮಾಹಿತಿ ರವಾನಿಸಲಾಗುವುದು. ಅಷ್ಟೇ ಅಲ್ಲ ದೂರು ದಾಖಲಿಸಲಾದ ಪ್ರತಿ, ಯಾವ ಕೇಸ್ ದಾಖಲಿಸಲಾಗಿದೆ, ಅದಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಸಂಪೂರ್ಣ ವಿವರವನ್ನು ಎಸ್‍ಎಂಎಸ್ ಮೂಲಕ ತಿಳಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಹೀಗೆ ಮಾಡುವುದರಿಂದ ದೂರುದಾರರ ಪದೆಪದೆ ಪೊಲೀಸ್ ಠಾಣೆಗೆ ಬರುವುದು ತಪ್ಪುತ್ತದೆ ಎಂದಿದ್ದಾರೆ.
ಪ್ರಮುಖ ನಿಯಮಗಳು
ಸಂಚಾರ ಉಲ್ಲಂಘಿಸಿದವರಿಗೆ ದಾಖಲೆ ಪರಿಶೀಲನೆ ನಡೆಸಬಹುದು ಬಿಟ್ಟರೆ ಸುಮ್ಮನೆ ವಾಹನಗಳನ್ನು ಅಡ್ಡ ಹಾಕಿ ಡಿಎಲ್ ಚೆಕ್ ಮಾಡುವಂತಿಲ್ಲ. ಆದರೆ ಈ ನಿಯಮ ಡ್ರಿಂಕ್ ಅಂಡ್ ಡ್ರೈವ್‍ಗೆ ಅನ್ವಯಿಸೊದಿಲ್ಲ.
ಪಾಸ್‍ಪೋರ್ಟ್ ಅಥವಾ ಯಾವುದೇ ಪೊಲೀಸ್ ಪರಿಶೀಲನೆಗೆ 15 ದಿನಕ್ಕಿಂತ ಹೆಚ್ಚಿನ ಅವಧಿ ತೆಗೆದು ಕೊಳ್ಳುವಂತಿಲ್ಲ. ಮುಂದಿನ ದಿನಗಳಲ್ಲಿ ಈ ಅವಧಿಯನ್ನೂ ಸಡಿಲಗೊಳಿಸುವ ನಿರೀಕ್ಷೆ ಇದೆ.
ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ರಾಜಿನ ಪ್ರಶ್ನೆಯೇ ಇಲ್ಲ. ಪ್ರಕರಣವನ್ನು ಇನ್ನಷ್ಟು ಗಂಭಿರವಾಗಿ ಪಡೆದು ಸಂತ್ರಸ್ಥರಿಗೆ ಕಾನೂನಿನ ನೆರವು ನೀಡಲಾಗುವುದು ಎಂದು ಸೂಚನೆ ನೀಡಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333