ಆರ್‍ಬಿಐ ಕಛೇರಿ ಮುಂದೆ ಮಹಿಳೆಯ ಪ್ರತಿಭಟನೆ ಹೇಗಿತ್ತು ಗೊತ್ತಾ..?

Date:

ನೋಟು ನಿಷೇಧದ ಬಳಿಕ ದೇಶದ ಹಲವಾರು ಭಾಗಗಳಲ್ಲಿ ಸಖತ್ ಹೈಡ್ರಾಮಾಗಳೆ ನಡೆದೋಗಿದೆ. ಕೆಲವರು ನೋಟು ನಿಷೇಧವನ್ನು ಸ್ವಾಗತಿಸಿದ್ರೆ, ಇನ್ನೂ ಕೆಲವ್ರು ಅದಕ್ಕೆ ವಿರೋದ ವ್ಯಕ್ತ ಪಡಿಸಿದ್ರು. ಅಂತಹ ಘಟನೆಗಳಲ್ಲಿ ಇನ್ನೊಂದು ವಿಚಿತ್ರ ಘಟನೆಯೊಂದು ಸೇರ್ಪಡೆಯಾಗಿದೆ ನೋಡಿ..! ಹಳೆಯ 500 ಮತ್ತು 1000 ನೋಟು ಬದಲಾವಣೆ ಮಾಡ್ಕೊಳ್ಬೇಕು ಅಂತ ದಿಲ್ಲಿಯ ಆರ್‍ಬಿಐ ಪ್ರಾದೇಶಿಕ ಕಛೇರಿಗೆ ಭೇಟಿ ನೀಡಲು ಬಂದಿದ್ದ ಮಹಿಳೆಯೊಬ್ಬಳಿಗೆ ಅಲ್ಲಿನ ಭದ್ರತಾ ಸಿಬ್ಬಂಧಿ ತಡೆದಿದ್ದಾನೆ. ಈ ವೇಳೆ ತಾನು ಹಳೆಯ ನೋಟು ಬದಲಾವಣೆ ಮಾಡ್ಕೊಳ್ಬೇಕು ಅಂತ ಎಷ್ಟೆ ಅಂಗಲಾಚಿಕೊಂಡ್ರೂ ಆ ಸಿಬ್ಬಂಧಿ ಈಕೆಯ ಮಾತಿಗೆ ಕ್ಯಾರೆ ಅನ್ನಲಿಲ್ಲ. ಆದ್ರೂ ಆಕೆ ನನಗೆ ಒಳಗೆ ಪ್ರವೇಶ ಕೊಡ್ಬೇಕು ಅಂತ ಗೇಟ್ ಮುಂದೆಯೆ ತನ್ನ ಮಗು ಜೊತೆ ಕೂತು ಪ್ರತಿಭಟನೆ ಮಾಡ್ತಾಳೆ. ಆದ್ರೆ ಭದ್ರತಾ ಸಿಬ್ಬಂಧಿ ಆಕೆಯನ್ನು ಬಲವಂತವಾಗಿ ಎತ್ತಂಗಡಿ ಮಾಡಿಸೋಕೆ ಪ್ರಯತ್ನ ಪಟ್ಟಾಗ ಸಿಟ್ಟೆದ್ದ ಆ ಸ್ತ್ರೀ ತನ್ನ ಮಗುವನ್ನು ಕೆಳಗೆ ಬಿಟ್ಟು ತಾನು ಧರಿಸಿದ್ದ ಮೇಲು ಉಡುಪನ್ನು ಸಾರ್ವಜನಿಕರೆದುರೆ ಕಳಚಿ ವಿಚಿತ್ರ ಪ್ರತಿಭಟನೆ ಮಾಡೋ ಮೂಲಕ ತಾನು ಪ್ರತಿಭಟನೆಯಿಂದ ಹಿಂದೆ ಸರಿಯೋ ಮಾತೆ ಇಲ್ಲ ಎನ್ನುವ ಸಂದೇಶ ನೀಡಿದ್ದಾಳೆ..! ಮಹಿಳೆಯ ಅವತಾರಕ್ಕೆ ಕಕ್ಕಾಬಿಕ್ಕಿಯಾದ ಭದ್ರತಾ ಸಿಬ್ಬಂಧಿ ಕೂಡಲೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಆಕೆಗೆ ಸಮಾಧಾನ ಪಡಿಸಿ ಪೊಲೀಸ್ ಸ್ಟೇಷನ್‍ಗೆ ಕರೆದೊಯ್ದು ಪ್ರಕರಣವನ್ನು ಅಲ್ಲಿಗೆ ಇತ್ಯರ್ಥ ಮಾಡಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಮುಂದೆ ಮಳೆ ಬಂದ್ರೂ ಪಂದ್ಯ ರದ್ದಾಗಲ್ಲ..!!

ಅಂತೂ ಮುಗೀತು ಜಿಯೋ ವೆಲ್‍ಕಮ್ ಆಫರ್..! ಹಾಗಾದ್ರೆ ಮುಂದಿನ ಪ್ಲಾನ್ ಏನು..?

ಇನ್ಮುಂದೆ ವಾಹನ ಅಡ್ಡ ಹಾಕಿ ಡಿಎಲ್ ಪರಿಶೀಲನೆ ಮಾಡುವಂತಿಲ್ಲ..!

ಭಾರತೀಯರೇ..! ಮತ್ತೊಮ್ಮೆ ಕೆಲಸ ಕಳೆದುಕೊಳ್ಳಲಿದ್ದೀರಿ ಎಚ್ಚರ..!!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...