ಗರಿಷ್ಟ ಮಟ್ಟದ ನೋಟುಗಳು ಬ್ಯಾನ್ ಆದ ನಂತ್ರ ದೇಶದ ಜನತೆಗೆ ಮತ್ತೊಂದು ಹೊಸ ನೋಟು ಪರಿಚಯ ಆದ್ವು. ಪಿಂಕ್ ಬಣ್ಣದ ಚಿಕ್ಕ ಗಾತ್ರದ 2000ರೂ. ನೋಟು ಚಲಾವಣೆಗೆ ಬಂದಿದ್ದೆ, ಜನ 2000 ನೋಟು ಇಡ್ಕೊಂಡು ಏನೆಲ್ಲಾ ಆಟ ಆಡಿದ್ರು ಅನ್ನೊದು ನಿಮಗೆಲ್ಲಾ ಗೊತ್ತೆ ಇದೆ..! ಇನ್ನು ಮೋದಿ ಅವರ ಈ ನಿರ್ಣಯವನ್ನು ಬೆಂಬಲಿಸಿದ ಅಭಿಮಾನಿಗಳು ಜನರಿಗೆ ತೊಂದ್ರೆ ಆಗ್ಬಾರ್ದು ಅಂತ 1 ರೂಪಾಯಿಗೆ ಪಾನಿಪೂರಿ, ಸಮೋಸ ಕೊಟ್ಟ ಉದಾಹರಣೆಯೂ ಇದೆ. 1ರೂ.ಗೆ ಸೀರೆ ಕೊಟ್ಟ ಉದಾಹರಣೆಯೂ ಇದೆ. ಆದ್ರೆ ಈಗ ಸೀರೆ ಮೇಲೂ ಹೊಸ 2000ರೂ. ನೋಟಿನ ಚಿತ್ರ ಬಂದು ಹೊಸ ಟ್ರೆಂಡ್ ಸೃಷ್ಠಿ ಮಾಡಿದೆ..! ಸೂರತ್‍ನ ಸೀರೆ ವ್ಯಾಪಾರಿಗಳು ಈಗ ಪಿಂಕ್ ಕಲರ್‍ನ 2000 ನೋಟಿನ ಚಿತ್ರ ಇರುವ ಸೀರೆಯನ್ನು ಉತ್ಪಾದಿಸಿ ಮಾರಾಟ ಮಾಡ್ತಾ ಇದ್ದು, ಅದನ್ನು ಕೊಳ್ಳೋಕೆ ಮಹಿಳೆಯರು ಮುಗಿ ಬಿದ್ದಿದ್ದಾರೆ..! ಈಗಾಗ್ಲೆ ಮಾರುಕಟ್ಟೆಯಲ್ಲಿ ಈ ಸೀರೆಗೆ ಭಾರಿ ಬೇಡಿಕೆ ಬಂದಿದ್ದು ಪಿಂಕ್ ಕಲರ್ ಸೀರೆ ಖರೀದಿ ಮಾಡೋಕೆ ಮಹಿಳೆಯರು ನಾ ಮುಂದು ತಾ ಮುಂದು ಅಂತ ಕ್ಯೂನಲ್ಲಿ ನಿಂತಿದ್ದಾರೆ ನೋಡಿ..! ಇನ್ನು ಈ ರೀತಿಯ ವಿಭಿನ್ನ ಸೀರೆ ತಯಾರು ಮಾಡಿದ ಮಾಲಿಕರಿಗೆ ಸೀರೆ ಮಾರಾಟವಾಗುತ್ತೊ ಇಲ್ಲೊ ಎಂಬ ಆತಂಕ ಸೃಷ್ಠಿಯಾಗಿತ್ತು. ಆದ್ರೆ ಈಗ ಇದೇ ಸೀರೆಗೆ ಹೆಚ್ಚು ಬೇಡಿಕೆ ಇರುವ ಕಾರಣ ವ್ಯಾಪಾರಿಗಳು ಫುಲ್ ಖುಷ್ ಆಗಿದ್ದಾರೆ. ಹೆಚ್ಚು ಹೆಚ್ಚು ಸೀರೆಗಳನ್ನು ತಯಾರು ಮಾಡಿ ಹೊರ ರಾಜ್ಯಗಳಿಗೂ ಕಳುಹಿಸುವ ಪ್ಲಾನ್ ಮಾಡಿದ್ದಾರೆ ಮಾಲಿಕರು. ಈಗಾಗ್ಲೆ ಉತ್ತಾರಾಖಂಡ್, ಉತ್ತರ ಪ್ರದೇಶ, ಮಣಿಪುರ, ಪಂಜಾಬ್, ಗೋವಾ ರಾಜ್ಯಗಳಲ್ಲಿ 2000ರೂ. ಚಿತ್ರದ ಸೀರೆಗೆ ಬೇಡಿಕೆ ಇದ್ದು ಸದ್ಯದಲ್ಲೆ ರಾಜ್ಯಕ್ಕೂ ಈ ಸೀರೆ ಬಂದು ಹೊಸ ಟ್ರೆಂಡ್ ಸೃಷ್ಠಿ ಮಾಡೋದ್ರಲ್ಲಿ ಯಾವುದೇ ಅನುಮಾನ ಇಲ್ಲ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ರಯೀಸ್ ಚಿತ್ರ ಬಿಡುಗಡೆ ಮಾಡ್ಬೇಡಿ: ಶಿವಸೇನೆ ಧಮ್ಕಿ..!
ಅಧಿಕಾರಿಗಳ ಕರಾಳ ಮುಖವನ್ನು ವಿಡಿಯೋ ಮೂಲಕ ಬಯಲಿಗೆಳೆದ ಯೋಧ..!
ಇನ್ಮುಂದೆ ಖಾಸಗೀ ಆಸ್ಪತ್ರೆಯಲ್ಲಿ ಫ್ರೀ ಟ್ರೀಟ್‍ಮೆಂಟ್ ಇರೋದಿಲ್ಲ..!
ಮತ್ತೆ ಒಂದಾಗಲಿದ್ದಾರೆ ಸುದೀಪ್ ದಂಪತಿ
195 ಬಾರಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರು ಒಂದು ಬಾರಿಯೂ ದಂಡ ಕಟ್ಲಿಲ್ಲ..!
ಗುಡ್ ನ್ಯೂಸ್: ಸದ್ಯದಲ್ಲೆ ಬಡವರ ಖಾತೆಗೆ ನೇರ ಹಣ ಪಾವತಿ..?
ಫಿಲ್ಮ್ ಫೇರ್‍ಗೆ ಸನ್ನಿ ಶಾರ್ಟ್ ಫಿಲ್ಮ್ ! #Sunny Leone Short film