ಪ್ರತಿಷ್ಠಿತ ವಾಹಿನಿಯೊಂದರಲ್ಲಿ ಪ್ರಸಾರವಾಗ್ತಾ ಇರೋ ಬಿಗ್‍ಬಾಸ್ ರಿಯಾಲಿಟಿ ಶೋ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಾಗ್ತಾನೆ ಬರ್ತಾ ಇದೆ. ಮನೆಯೊಳಗಿನ ಸದಸ್ಯರ ನಡುವೆಯೇ ಭಿನ್ನಾಭಿಪ್ರಾಯಗಳನ್ನು ಮೂಡಿಸುವ ಮೂಲಕ ತಾನು ನೀಡುವ ಟಾಸ್ಕ್ ನ್ನು ಸಖತ್ ಮನರಂಜನೆ ಸಿಗೋ ರೀತಿ ಮಾಡ್ತಿದೆ ಈ ಬಿಗ್‍ಬಾಸ್.. ಒಬ್ಬರನ್ನೊಬ್ಬರು ಕಾಲೆಳೆದುಕೊಳ್ಳೋದು, ಜಗಳ ಆಡೋದು, ನಾಮಿನೇಟ್ ಮಾಡೋದು.. ಇಷ್ಟು ಮಾತ್ರ ಬಿಗ್‍ಬಾಸ್ ಮನೇಲಿ ನಡೀತಾ ಇತ್ತು ಆದ್ರೆ ಇದೇ ಬಿಗ್‍ಬಾಸ್ ಮನೆಯಲ್ಲಿ ಒಂದು ಮಂಗಳ ಕಾರ್ಯ ನಡೀತಾ ಇದೆ..! ಅದೇನಂದ್ರೆ ಬಿಗ್‍ಬಾಸ್‍ನಲ್ಲಿ ಭಾಗವಹಿಸಿರುವ ಓರ್ವ ಸೆಲೆಬ್ರೆಟಿಯ ಮದುವೆಗೆ ದೊಡ್ಮನೆ ವೇದಿಕೆಯಾಗಲಿದೆ..! ಅರೆ ಇದೇನಪ್ಪಾ ಬಿಗ್‍ಬಾಸ್ ಮನೇಲಿ ಯಾರ್ ಮದ್ವೆ ಆಗುತ್ತೆ ಅಂತ ಕನ್ಫ್ಯೂಸ್ ಆಗ್ತಾ ಇದೆಯಾ..? ನಾವೇಳ್ತಾ ಇರೋದು ಹಿಂದಿ ವಾಹಿನಿಯಲ್ಲಿ ಪ್ರಸಾರವಾಗ್ತಾ ಇರೋ ಬಿಗ್‍ಬಾಸ್-10ನಲ್ಲಿ ಭಾಗವಹಿಸರೊ ಸೆಲೆಬ್ರೆಟಿ ಬಗ್ಗೆ.. ಹೌದು ಈ ಬಾರಿಯ ಬಿಗ್‍ಬಾಸ್ ಸೀಸನ್-10ನಲ್ಲಿ ಭಾಗವಹಿಸಿರೋ ಭೋಜ್ಪುರಿ ನಟಿ ಮೊನಾಲಿಸಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇವರು ಹಸೆಮಣೆ ಏರ್ತಾ ಇರೋದು ಯಾವುದೇ ಮದುವೆ ಮಂಟಪದಲ್ಲಿ ಅಲ್ಲ. ಬದ್ಲಾಗಿ ಬಿಗ್‍ಬಾಸ್ ಮನೆಯಲ್ಲೆ..! ಈಕೆಯನ್ನು ಕೈ ಹಿಡಿಯುತ್ತಿರುವವರು ಬೇರ್ಯಾರೂ ಅಲ್ಲ ಮೊನಾಲಿಸಾ ಗೆಳೆಯ ವಿಕ್ರಾಂತ್ ಸಿಂಗ್ ರಜಪೂತ್. ಒಬ್ಬೊರನ್ನೊಬ್ಬರು ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗಲು ನಿರ್ಧಾರ ಮಾಡಿರೋ ಈ ಜೋಡಿ ಸದ್ಯಕ್ಕೆ ಮದುವೆಯನ್ನು ತಳ್ಳಿ ಹಾಕಿದ್ರು. ಕಾರಣ ಮೊನಾಲಿಸಾಗೆ ಬಿಗ್‍ಬಾಸ್‍ನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತ್ತು. ಮನೆಯಿಂದ ಹೊರ ಬಂದ ಕೂಡಲೆ ಇಬ್ಬರು ಮದುವೆಯಾಗುವ ನಿರ್ಧಾರ ಮಾಡಿದ್ರು. ಆದ್ರೆ ಬಿಗ್‍ಬಾಸ್ ಮನೆಯಲ್ಲೆ ಮದುವೆಯಾಗುವ ಚಾನ್ಸ್ ಸಿಗಲಿದೆ ಅಂದ ಕೂಡ್ಲೆ ವಿಕ್ರಾಂತ್ ಫುಲ್ ಖುಷಿಯಾಗಿದ್ದಾರೆ.
ತನ್ನ ನೆಚ್ಚಿನ ಪ್ರೇಯಸಿಯನ್ನು ವಿವಾಹವಾಗಲು ಕಾತರದಿಂದ ಕಾಯ್ತಾ ಇದ್ದಾರಂತೆ ವಿಕ್ರಾಂತ್. ಇಂದು ಬಿಗ್‍ಬಾಸ್ ಮನೆಯೊಳಗೆ ವಿಕ್ರಾಂತ್ ಕುಟುಂಬಸ್ಥರು ಪ್ರವೇಶ ಮಾಡಲಿದ್ದು ಅಲ್ಲಿ ಮೊನಾಲಿಸಾ ಒಪ್ಪಿಗೆ ಸಿಕ್ಕುದ್ರೆ ಸದ್ಯದಲ್ಲೆ ಬಿಗ್‍ಬಾಸ್ ಮನೇಲಿ ಮಂಗಳವಾದ್ಯ ಕೇಳಲಿದೆ. ಇನ್ನು ಟಿವಿಯಲ್ಲಿ ಅಭಿಮಾನಿಗಳ ಮುಂದೆ ಕೈ ಹಿಡಿಯುವ ಅವಕಾಶ ಸಿಕ್ಕಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ ವಿಕ್ರಾಂತ್.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ತನ್ನ ಮುಂದೆ ನಗ್ನವಾಗಿ ಸ್ನಾನ ಮಾಡುವಂತೆ ಪೀಡಿಸುತ್ತಿದ್ದ ಕಾಮುಕ ಶಿಕ್ಷಕ ಅರೆಸ್ಟ್
2016ರಲ್ಲಿ ಸಾಮಾನ್ಯವಾಗಿ ಬಳಕೆಯಾದ ಪಾಸ್‍ವರ್ಡ್ ಯಾವುದು ಗೊತ್ತಾ.?
ವಿಶ್ವದ ಅರ್ಧದಷ್ಟು ಸಂಪತ್ತು ಈ ಎಂಟು ಜನರ ಪಾಲು..!!
ಡ್ರಾಪ್ ಕೊಡೋ ನೆಪದಲ್ಲಿ ಮಾನಸಿಕ ಅಸ್ವಸ್ಥೆಯನ್ನೆ ರೇಪ್ ಮಾಡಿದ ಪೊಲೀಸ್..!