ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?

Date:

ಹಲವಾರು ವಿವಾದಗಳಿಂದ ಸುದ್ದಿ ಮಾಡ್ತಾ ಇರೋ ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಂದು ಸುದ್ದಿ ಮಾಡಿ ಸದ್ದು ಮಾಡ್ತಾ ಇದೆ. ಈಗ ಸುದ್ದಿಯಾಗಿರೋದು ಬೇರೇನಕ್ಕೂ ಅಲ್ಲ ಪ್ರತಿಷ್ಠಿತ ಮಂತ್ರಿ ಮಾಲ್‍ನ ಗೋಡೆ ಕುಸಿತದಿಂದ..! ಸೋಮವಾರ ಮಧ್ಯಾಹ್ನ ಸದಾ ಗಿಜಿಗುಡ್ತಾ ಇದ್ದ ಮಂತ್ರಿ ಮಾಲ್‍ನಲ್ಲಿ ಇದ್ದಕ್ಕಿದ್ದ ಹಾಗೆ ಬಂದ ಭಾರಿ ಸದ್ದೊಂದು ಮಾಲ್‍ನಲ್ಲಿದ್ದ ಜನರಿಗೆ ಆತಂಕ ಸೃಷ್ಠಿಸಿತ್ತು. ಆಗ್ಲೆ ನೋಡಿ ಮಾಲ್‍ನ ಗೋಡೆ ಕುಸಿದು ಬಿದ್ದಿದೆ ಎಂಬ ಅಘಾತಕಾರಿ ಸಂಗತಿ ಗೊತ್ತಾಗಿದ್ದು. ಈ ಅವಘಡದಲ್ಲಿ ಮಾಲ್‍ನ ಹೌಸ್ ಕೀಪರ್ ಸೇರಿದಂತೆ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಮಾಲ್‍ನಲ್ಲಿದ್ದ ಜನರನ್ನು ಸುರಕ್ಷಿತವಾಗಿ ಹೊರ ಕರೆಸಿ ಮಾಲ್ ಬಂದ್ ಮಾಡಲಾಗಿದೆ.

ಹಾಗಾಗಿ ಈ ವಾರ ಮಂತ್ರಿಮಾಲ್‍ಗೆ ಬಂದು ವೀಕೆಂಡ್ ಮಸ್ತಿ ಕಳಿಬೇಕು ಅನ್ನೋರ್ಗೆ ಆ ಅಸೆ ನೆರವೇರೋದು ಕಷ್ಟ ಅನ್ಸುತ್ತೆ. ಯಾಕಂದ್ರೆ ಈ ವಾರ ಮಾಲ್ ಓಪನ್ ಆಗೋದು ಬಹುತೇಕ ಡೌಟ್..! ಕಳಪೆ ಕಾಮಗಾರಿ ಹಣೆಪಟ್ಟಿ ಹೊತ್ತಿರುವ ಮಂತ್ರಿ ಮಾಲ್ ಬಗ್ಗೆ ಬಿಬಿಎಂಪಿ ಸಂಪೂರ್ಣ ತನಿಖೆ ನಡೆಸುವಂತೆ ತನಿಖಾ ತಂಡವನ್ನು ರಚನೆ ಮಾಡಿದ್ದು, ಈ ತಂಡ ತನಿಖೆ ಮಾಡಿ ವರದಿ ಕಳುಹಿಸೋಕೆ ಇಲ್ಲಾ ಅಂದ್ರೂ ಒಂದು ವಾರವಾದ್ರೂ ಬೇಕು. ಮಾಲ್ ನವೀಕರಣ, ಬಿಬಿಎಂಪಿ ಅಧಿಕಾರಿಗಳ ತನಿಖೆ, ಬೆಸ್ಕಾಂ ಅಧಿಕಾರಿಗಳ ಪರಿಶೀಲನೆ, ಜಲ ಮಂಡಳಿ ಅಧಿಕಾರಿಗಳ ಭೇಟಿ, ವಿದ್ಯುತ್ ಪರಿವೀಕ್ಷಣಾಲಯ ಅಧಿಕಾರಿಗಳಿಂದ ಎನ್‍ಓಸಿ ನೀಡ್ಬೇಕು, ಇವೆಲ್ಲಾ ಕಾರ್ಯ ಮುಗಿಯೋಕೆ ಒಂದುವಾರನಾದ್ರೂ ಬೇಕು ಅದಾದ್ಮೆಲೆ ಮಾಲ್ ಓಪನ್ ಆಗೋದು.. ಇದಿಷ್ಟೆಲ್ಲಾ ತನಿಖೆ ನಡೆದು ಮಾಲ್ ಓಪನ್ ಮಾಡೋಕೆ ಅರ್ಹ ಅಂತಾದ್ರೆ ಇನ್ನೆರಡುವಾರದಲ್ಲಿ ಓಪನ್ ಆಗ್ಬೋದು..? ಇನ್ನು ಕಳಪೆ ಕಾಮಗಾರಿ ಆರೋಪ ಸಾಬೀತಾಗಿ ಮಾಲ್ ಶಾಶ್ವತ ಬಂದ್ ಆಗುತ್ತೋ..? ಇಲ್ಲ ತಮ್ಮ ಹಣದ ಬಲದಿಂದ ಮಾಲ್ ಓಪನ್ ಮಾಡೋಕೆ ಅನುಮತಿ ಗಿಟ್ಟುಸ್ಕೊಂಡು ಸದ್ಯದಲ್ಲೆ ಮಾಲ್ ಓಪನ್ ಮಾಡ್ತಾರೊ..? ಮುಂದಿನ ದಿನದಲ್ಲಿ ಕಾದು ನೋಡ್ಬೇಕಿದೆ ಅಷ್ಟೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ವಿಕೃತ ಕಾಮುಕ: 14 ವರ್ಷದಲ್ಲಿ 700 ರೇಪ್..!

ಸನ್ನಿ ಜೊತೆ ಸೆಲ್ಫಿ ಬೇಕಾ..? ಹಾಗಾದ್ರೆ ನೀವ್ ಮಾಡ್ಬೇಕಾದದ್ದು ಇಷ್ಟೆ..!

ಬಿಗ್‍ಬಾಸ್ ಮನೆಯಲ್ಲಿ ಕಲ್ಯಾಣ ಭಾಗ್ಯ..!

ತನ್ನ ಮುಂದೆ ನಗ್ನವಾಗಿ ಸ್ನಾನ ಮಾಡುವಂತೆ ಪೀಡಿಸುತ್ತಿದ್ದ ಕಾಮುಕ ಶಿಕ್ಷಕ ಅರೆಸ್ಟ್

2016ರಲ್ಲಿ ಸಾಮಾನ್ಯವಾಗಿ ಬಳಕೆಯಾದ ಪಾಸ್‍ವರ್ಡ್ ಯಾವುದು ಗೊತ್ತಾ.?

ವಿಶ್ವದ ಅರ್ಧದಷ್ಟು ಸಂಪತ್ತು ಈ ಎಂಟು ಜನರ ಪಾಲು..!!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...