No menu items!
10 C
Munich
Friday, April 24, 2026

ಆರ್‍ಎಸ್‍ಎಸ್ ಸಭೆಗೆ ಹೋಗಲ್ವಂತೆ ಬಿಎಸ್‍ವೈ..!

Must read

ಬಿಜೆಪಿ ಪಕ್ಷದ ಇಬ್ಬರು ಪ್ರಮುಖ ನಾಯಕರುಗಳ ಒಳಜಗಳದ ಎಫೆಕ್ಟ್ ರಾಷ್ಟ್ರೀಯ ಸೇವಾ ಸಂಘ (ಆರ್‍ಎಸ್‍ಎಸ್)ದ ಮೇಲೂ ಬಿದ್ದಿದೆ ಅಂತ ಕಾಣ್ಸುತ್ತೆ. ಯಾಕಂದ್ರೆ ಇಂದಿನಿಂದ ಮೂರು ದಿನಗಳ ಕಾಲ ಆರ್‍ಎಸ್‍ಎಸ್‍ನ ಬೈಠಕ್ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಬಿಎಸ್ ಯಡಿಯೂರಪ್ಪ ಭಾಗವಹಿಸೋದಿಲ್ವಂತೆ. ಯಾಕಂದ್ರೆ ಆರ್‍ಎಸ್‍ಎಸ್ ಬಿಎಸ್‍ವೈ ಅವರನ್ನು ಸಭೆಗೆ ಭಾಗವಹಿಸುವಂತೆ ಹೇಳಿಲ್ವಂತೆ. ಹಾಗಾಗಿ ಸಭೆಗೆ ಹೋಗ್ತಾ ಇಲ್ಲ ಅಂತ ಹೇಳುವ ಮೂಲಕ ಅಚ್ಚರಿಯ ಬೆಳವಣಿಗೆಗಳಿಗೆ ಎಡೆ ಮಾಡಿ ಕೊಟ್ಟಿದ್ದಾರೆ..! ಬೆಂಗಳೂರಿನ ಕೇಶವಾ ಕೃಪಾದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಬೈಠಕ್ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಸಂಘದ 40 ಸಂಘಟನೆಗಳ ಸದಸ್ಯರು, ಬಿಜೆಪಿ ಪಕ್ಷದ 13 ಮಂದಿ ಪ್ರಮುಖ ನಾಯಕರುಗಳು ಭಾಗವಹಿಸಲಿದ್ದಾರೆ. ಇನ್ನೊಂದೆಡೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಪ್ರತ್ಯೇಕ ಸಂಧಾನ ಸಭೆಯನ್ನು ಆರ್‍ಎಸ್‍ಎಸ್ ಮುಂದೂಡಿದೆ ಎನ್ನಲಾಗಿದೆ. ಒಟ್ನಲ್ಲಿ ಮೂರು ದಿನಗಳ ಆರ್‍ಎಸ್‍ಎಸ್ ಬೈಠಕ್ ಕೇವಲ ಪಕ್ಷ ಸಂಘಟನೆಯ ವಿಚಾರಕ್ಕೆ ಮಾತ್ರ ಸೀಮಿತವೋ..? ಅಥವಾ ಪಕ್ಷದ ಪ್ರಮುಖ ಇಬ್ಬರು ನಾಯಕರುಗಳ ಜಗಳ ನಿಲ್ಲಿಸಲು ಯತ್ನಿಸುತ್ತಾ ಎಂಬುದೆ ಯಕ್ಷ ಪ್ರಶ್ನೆಯಾಗಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?

ವಿಕೃತ ಕಾಮುಕ: 14 ವರ್ಷದಲ್ಲಿ 700 ರೇಪ್..!

ಸನ್ನಿ ಜೊತೆ ಸೆಲ್ಫಿ ಬೇಕಾ..? ಹಾಗಾದ್ರೆ ನೀವ್ ಮಾಡ್ಬೇಕಾದದ್ದು ಇಷ್ಟೆ..!

ಬಿಗ್‍ಬಾಸ್ ಮನೆಯಲ್ಲಿ ಕಲ್ಯಾಣ ಭಾಗ್ಯ..!

ತನ್ನ ಮುಂದೆ ನಗ್ನವಾಗಿ ಸ್ನಾನ ಮಾಡುವಂತೆ ಪೀಡಿಸುತ್ತಿದ್ದ ಕಾಮುಕ ಶಿಕ್ಷಕ ಅರೆಸ್ಟ್

2016ರಲ್ಲಿ ಸಾಮಾನ್ಯವಾಗಿ ಬಳಕೆಯಾದ ಪಾಸ್‍ವರ್ಡ್ ಯಾವುದು ಗೊತ್ತಾ.?

ವಿಶ್ವದ ಅರ್ಧದಷ್ಟು ಸಂಪತ್ತು ಈ ಎಂಟು ಜನರ ಪಾಲು..!!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article