ಸೊನಾಕ್ಷಿ ಲವ್‍ಸ್ಟೋರಿಗೆ ತಂದೆಯೇ ವಿಲನ್ ಅಂತೆ..!

Date:

ಬಾಲಿವುಡ್‍ನ ಟಾಪ್ ಹಿರೋಗಳ ಜೊತೆ ನಾಯಕಿಯರು ಸ್ಕ್ರೀನ್ ಶೇರ್ ಮಾಡ್ಬೇಕು ಅಂದ್ರೆ ಒಂದೆರಡು ಮೂವಿಯಲ್ಲಿ ಮೊದ್ಲು ಆಕ್ಟ್ ಮಾಡಿ ಗುರ್ತಿಸಿಕೊಂಡಿರ್ಬೇಕು ಆದ್ರೆ ಈ ನಟಿಯ ಅದೃಷ್ಟ ನೋಡಿ ಬಿ-ಟೌನ್ ಗೆ ಎಂಟ್ರಿ ಕೊಟ್ಟಿದೆ ಅಕ್ಕಪಕ್ಕದಲ್ಲಿದ್ದ ಎಲ್ಲಾ ನಟಿಯರು ಬಾಯಿಮೇಲೆ ಬೆರಳಿಡುವಂತೆ ಮಾಡಿದ್ಲು. ಮೊದ್ಲ ಚಿತ್ರದಲ್ಲೇ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ರ ದಬಂಗ್ ಚಿತ್ರದಲ್ಲಿ ನಟಿಸುತ್ತಾಳೆ. ಈ ಟೈಮ್ನಲ್ಲಿ ನೋಡಿ ಸೊನಾಕ್ಷಿಗಿಂತ ಮುಂಚೆಯೇ ಎಂಟ್ರಿಕೊಟ್ಟಿದ್ದ ನಟಿಯರಿಗೆಲ್ಲಾ ಹೊಟ್ಟೆಹುರಿ ಶುರುವಾಗಿದ್ದು.
ಈಕೆ ನಟಿಸಿದ ಮೊದ್ಲ ಚಿತ್ರವೇ ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುತ್ತದೆ ಅಲ್ಲಿಂದ ಶುರುವಾಯ್ತು ನೊಡಿ ಸೊನಾಕ್ಷಿಯ ಸಿನಿ ಕೆರಿಯರ್. ಆದಾದ ನಂತ್ರ ಅಕ್ಷಯ್ ಕುಮಾರ್ ನಟನೆಯ ರೌಡಿ ರಾಥೋಡ್ ಚಿತ್ರದಲ್ಲಿ ಮಿಂಚುತ್ತಾಳೆ, ಅಷ್ಟರಲ್ಲಿ ಈಕೆಗೆ ಬಿ-ಟೌನಲ್ಲಿ ಒಂದು ಶೈನಿಂಗ್ ಬಂದಿತ್ತು. ಜೋಕರ್, ದಬಂಗ್ -2, ಸುಪರ್‍ಸ್ಟಾರ್ ರಜಿನಿಕಾಂತ್ ಜೊತೆ ಲಿಂಗ ಚಿತ್ರದಲ್ಲೂ ಮಿಂಚುತ್ತಾಳೆ ಈ ದಂತದ ಗೊಂಬೆ. ಅಷ್ಟರಲ್ಲಿ ಆಗ್ಲೆ ಎಲ್ಲಾ ನಟಿಯರು ಈಕೆಯ ಮುಂದೆ ಸೈಡ್ ಲೈನ್ ಆಗಿರ್ತಾರೆ.
ಮೇಲೆ ಹೆಡ್ ಲೈನ್ ಕೊಟ್ಟಿರೋದಕ್ಕೂ ನಾನ್ ಈಗ ಹೇಳ್ತರೋದಕ್ಕೂ ಏನೂ ಸಂಬಂಧ ಇಲ್ಲ ಯಾಕ್ ಸುಮ್ನೆ ಕೊರಿತೀಯಪ್ಪಾ ಡೈರೆಕ್ಟಾಗಿ ಮ್ಯಾಟ್ರಿಗೆ ಬಾರಪ್ಪಾ ಅನ್ಬಹುದು ನೀವು, ಆದ್ರೆ ಇಲ್ಲೇ ಇರೋದು ಸತ್ಯ. ಇದೇ ಟೈಮ್ ಗೆ ಬಿ-ಟೌನಲ್ಲಿ ಹೆಣೈಕ್ಳ ನಿದ್ದೆ ಗೆಡಿಸಿದ್ದ ನಟ ಅಂದ್ರೆ ಅದು ರಣವೀರ್ ಸಿಂಗ್. ಹೌದ್ರಿ ರಣವೀರ್ ಸಿಂಗ್ ಬಿ-ಟೌನ್ ಐಕಾನ್ ಆಗಿ ಗುರುತಿಸಿಕೊಂಡಿದ್ರು, ಈ ಟೈಮ್ನಲ್ಲೇ ನೋಡಿ ಸೋನಾಕ್ಷಿಗೂ ಮತ್ತು ರಣವೀರ್ ಗೂ ಲವ್ ಆಗಿತ್ತಂತೆ.
ಪ್ರೇಮದ ಅಮಲಿನಲ್ಲಿ ಹ್ಯಾಪಿಯಾಗಿರೋ ಟೈಮ್ನಲ್ಲಿ ಯಾರಾದ್ರು ಒಬ್ರು ವಿಲನ್ ಇರ್ಲೇಬೇಕಲ್ವಾ, ವಿಲನ್ ಇಲ್ಲ ಅಂದ್ರೆ ಆ ಲವ್ ಸ್ಟೋರಿಗೆ ಮಜಾನೇ ಇರೋಲ್ಲ. ಇವ್ರ ಲವ್ ಸ್ಟೋರಿಗೆ ವಿಲನ್ ಸಾಮಾನ್ಯದವ್ರು ಇರ್ಲಿಲ್ಲ ಕಣ್ರಿ, ಯಾರೋ ಇಬ್ಬರ ರಿಲೇಶನ್ ಅಥವಾ ಸೋನಾಕ್ಷಿಯನ್ನು ರಣವೀರ್‍ನನ್ನು ಇಷ್ಟಪಡ್ತಿದವ್ರು ವಿಲನ್ ಆಗಿದ್ರೆ ಹೇಗೋ ನಡಿತಿತ್ತು ಆದ್ರೆ ಇವ್ರ ಲವ್ ಸ್ಟೋರಿಲ್ಲಿ ವಿಲನ್ ಆಗಿದ್ದು ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾನೇ, ತಂದೆಯೇ ಇಬ್ಬರ ಲವ್‍ಗೆ ಬ್ರೇಕ್ ಹಾಕ್ಸಿ, ಈ ಜೋಡಿಹಕ್ಕಿಗಳನ್ನ ಬೇರೆ ಮಾಡಿದ್ರರಂತೆ. ಪಾಪ ಈಗ ಇಬ್ಬರ ಪರಿಸ್ಥಿತಿ ನಾನೊಂದು ತೀರ ನೀನೊಂದು ತೀರ ಎನ್ನುವಂತಾಗಿದೆಯಂತೆ.

  • ಹಾಲೇಶ್ ಎಂ.ಎಸ್ ಹುಣಸನಹಳ್ಳಿ

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಸಲ್ಮಾನ್‍ ಖಾನ್‍ಗೆ ಇಂದು ಆಗ್ನಿ ಪರೀಕ್ಷೆ.

ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?

ವಿಕೃತ ಕಾಮುಕ: 14 ವರ್ಷದಲ್ಲಿ 700 ರೇಪ್..!

ಸನ್ನಿ ಜೊತೆ ಸೆಲ್ಫಿ ಬೇಕಾ..? ಹಾಗಾದ್ರೆ ನೀವ್ ಮಾಡ್ಬೇಕಾದದ್ದು ಇಷ್ಟೆ..!

ಬಿಗ್‍ಬಾಸ್ ಮನೆಯಲ್ಲಿ ಕಲ್ಯಾಣ ಭಾಗ್ಯ..!

ತನ್ನ ಮುಂದೆ ನಗ್ನವಾಗಿ ಸ್ನಾನ ಮಾಡುವಂತೆ ಪೀಡಿಸುತ್ತಿದ್ದ ಕಾಮುಕ ಶಿಕ್ಷಕ ಅರೆಸ್ಟ್

2016ರಲ್ಲಿ ಸಾಮಾನ್ಯವಾಗಿ ಬಳಕೆಯಾದ ಪಾಸ್‍ವರ್ಡ್ ಯಾವುದು ಗೊತ್ತಾ.?

ವಿಶ್ವದ ಅರ್ಧದಷ್ಟು ಸಂಪತ್ತು ಈ ಎಂಟು ಜನರ ಪಾಲು..!!

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...