ನನಸಾಗಲಿದೆ ಸೈನಿಕರ ದಶಕಗಳ ಕನಸು: ಸದ್ಯದಲ್ಲೆ ಬುಲೆಟ್ ಪ್ರೂಫ್ ಹೆಲ್ಮೆಟ್ ವಿತರಣೆ.

Date:

ದೇಶದ ಎಲ್ಲಾ ಪ್ರಜೆಗಳು ಆರಾಮದಾಯಕ ಜೀವನ ನಡುಸ್ತಾ ಇದ್ದಾರೆ ಅಂದ್ರೆ ಅದಕ್ಕೆ ಮೂಲ ಕಾರಣ ನಮ್ಮ ದೇಶ ಕಾಯುವ ಸೈನಿಕನ ನಿಷ್ಠೂರ ಸೇವೆ. ಹಗಲು ರಾತ್ರಿ ಚಳಿ ಇರ್ಲಿ ಮಳೆ ಇರ್ಲಿ ಯಾವುದಕ್ಕೂ ಹೆದರದ ಅಂಜದ ಗಂಡು ಅಂದ್ರೆ ಅದು ನಮ್ಮ ವೀರ ಯೋಧರು. ಆದ್ರೆ ಅವರು ದೇಶಕ್ಕಾಗಿ ಜೀವನ್ಮರಣ ಹೋರಾಟ ನಡೆಸಿದ್ರೂ ಅವರ ಜೀವಕ್ಕೆ ಬೆಲೆ ಇಲ್ಲ. ಎಷ್ಟೊ ವರ್ಷಗಳಿಂದ ಸೇನೆಯ ಯೋಧರಿಗೆ ಜೀವ ರಕ್ಷದ ಹೆಲ್ಮೆಟ್ ನೀಡ್ಬೇಕು ಅನ್ನೊ ಕೂಗು ಕೇಳಿ ಬರ್ತಾ ಇದ್ರೂ ಕೂಡ ಅವರ ಕೂಗು ಯಾರಿಗೂ ಕೇಳಿಸಲೇ ಇಲ್ಲ. ಆದ್ರೆ ಈಗ ದೇಶದ ಎಲ್ಲಾ ಯೋಧರಿಗೂ ಸಂತಸದ ಸುದ್ದಿಯೊಂದು ಕೇಂದ್ರ ಸರ್ಕಾರ ತಂದಿದೆ. ಗಡಿ ಕಾಯುವ ಯೋಧರಿಗೆ ತಮ್ಮ ಜೀವ ರಕ್ಷಣೆ ಮಾಡಿಕೊಳ್ಳಲು ಗುಂಡು ನಿರೋಧಕ ಅತ್ಯಾಧುನಿಕ ವಿಶ್ವದರ್ಜೆಯ ಹೆಲ್ಮೇಟ್‍ಗಳನ್ನು ನೀಡಲು ಮುಂದಾಗಿದೆ. ಈಗಾಗ್ಲೆ ನೂತನ ಮಾದರಿಯ ಹೆಲ್ಮೇಟ್ ತಯಾರಿಸವಂತೆ ಕಾನ್ಪುರದ ಎಂಕೆಯು ಕಂಪನಿಗೆ ಅಧಿಕೃತ ಆದೇಶ ನೀಡಿದ್ದು, ಒಟ್ಟು ಒಂದು ಲಕ್ಷದ ಐವತ್ತು ಸಾವಿರ ಹೆಲ್ಮೇಟ್‍ಗಳನ್ನು ತಯಾರಿಸಿಕೊಡುವಂತೆ ಕಂಪನಿಗೆ ಸೂಚಿಸಲಾಗಿದೆ. ಇದಕ್ಕಾಗಿ 170 ಕೋಟಿಯಿಂದ 180 ಕೋಟಿ ಹಣವನ್ನು ನೀಡಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿದೆ. ಇನ್ನು ಕಾನ್ಪುರದ ಎಂಕೆಯು ಕಂಪನಿಯು ವಿಶ್ವದ ನಾನಾ ದೇಶಗಳಿಗೆ ಸೇನಾ ರಕ್ಷಣಾ ಪರಿಕರಗಳನ್ನು ತಯಾರಿಸಿ ರವಾನೆ ಮಾಡುತ್ತಿದೆ. ಭಾರತೀಯ ಯೋಧರಿಗೆ ನೀಡಲಾಗ್ತಾ ಇರೋ ಈ ಹೆಲ್ಮೇಟ್‍ನ ವೈಶಿಷ್ಟತೆ ನೋಡೋದಾದ್ರೆ ಈ ಹೆಲ್ಮೇಟ್‍ಗಳು 9 ಮಿಲಿಮೀಟರ್‍ನಿಂದ ಹೊಡೆದ ಬುಲೇಟ್‍ನ ರಭಸವನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ಬಳಕೆಯಲ್ಲಿ ತುಂಬಾ ಹಗುರ ಮತ್ತು ಆರಾಮದಾಯಕವಾದ ಈ ಹೆಲ್ಮೇಟ್ ನೈಟ್ ಬೈನಾಕುಲರ್ ಸೇರಿದಂತೆ ಅತ್ಯಾಧುನಿಕ ಸೌಕರ್ಯವನ್ನು ಹೊಂದಿದೆ. ಇನ್ನು ಈ ಬುಲೇಟ್ ಪ್ರೂಫ್ ಹೆಲ್ಮೇಟ್‍ನಲ್ಲಿ ಮೈಕ್ ವ್ಯವಸ್ಥೆಯಿದ್ದು ಇದರಿಂದ ಬೇರೆ ಬೇರೆ ಯೋಧರಿಗೆ ಮಾಹಿತಿ ರವಾನೆಗೆ ಸಹಕಾರಿಯಾಗಲಿದೆ.

ಇನ್ನು ಈ ಅತ್ಯಾಧುನಿಕ ಹೆಲ್ಮೇಟ್‍ಗಳನ್ನು ಪಡೆಯಬೇಕಂದ್ರೆ ಭಾರತೀಯ ಸೈನಿಕರು ಇನ್ನೂ ಮೂರು ವರ್ಷಗಳು ಕಾಯಬೇಕಾಗುತ್ತದೆ. ಅದರೊಳಗಾಗಿ ಹೆಲ್ಮೇಟ್ ತಯಾರು ಮಾಡಿಕೊಡುವಂತೆ ಕೇಂದ್ರ ಸರ್ಕಾರ ಮನವಿ ಆಡಿಕೊಂಡಿದ್ದರೂ ಕೂಡ ಸದ್ಯಕ್ಕಂತೂ ಈ ಹೆಲ್ಮೇಟ್ ಪಡೆಯೋ ಭಾಗ್ಯ ಸೈನಿಕರಿಗಿಲ್ಲ ಅಷ್ಟೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಸೋಷಿಯಲ್ ಮೀಡಿಯಾದಲ್ಲಿ ಕಿರಿಕ್ ಕೀರ್ತಿ ಬಗ್ಗೆ ಅಪಪ್ರಚಾರ

ಮೋದಿಗೆ ಧನ್ಯವಾದ ಹೇಳಿದ ಒಬಾಮಾ ಯಾಕೆ ಗೊತ್ತಾ.?

ಮೆಣಸಿನಕಾಯಿ ತಿಂದು ಬೀಗಿದ ಪ್ರಥಮ್.

ಮನಿ ಪ್ಲಾಂಟ್ ಮನೆಗೆ ಸೊಬಗೋ ಮನಿಯ ಸಂಕೇತವೋ???

ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?

ವಿಕೃತ ಕಾಮುಕ: 14 ವರ್ಷದಲ್ಲಿ 700 ರೇಪ್..!

ಸನ್ನಿ ಜೊತೆ ಸೆಲ್ಫಿ ಬೇಕಾ..? ಹಾಗಾದ್ರೆ ನೀವ್ ಮಾಡ್ಬೇಕಾದದ್ದು ಇಷ್ಟೆ..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...