ನೀರು ಎಷ್ಟು ಕುಡಿಯ ಬೇಕು? ಯಾವಾಗ ಕುಡಿಯಬೇಕು? Benefits of Drinking Water

Date:

“ಶಿವಾ ಆಪ: ಸಂತು”ಎಂಬ ಸಂಸ್ಕೃತ ನುಡಿಯಂತೆ ನೀರನ್ನು ದೇವರಿಗೆ ಹೋಲಿಸಲಾಗಿದೆ. ಹೌದು! ಇದು ಅಕ್ಷರಶಃ ನಿಜವಾದ ವಿಷ್ಯ. ನೀರನ್ನು ನಾವು ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಬಳಸಿದಲ್ಲಿ ಇದೊಂದು ನಮ್ಮೊಳಗೆ ಔಷಧಿಯ ಪರಿಣಾಮವನ್ನು ಬೀರುತ್ತದೆ. ಆಯುರ್ವೇದಿಯ ಗ್ರಂಥವಾದ ಅಷ್ಟಾಂಗ ಸಂಗ್ರಹದಲ್ಲಿ ವಾಗ್ಭಟರು ಏನು ಹೇಳುತ್ತಾರೆಂದರೆ ನಾವು ಸಮಯ ಸಂದರ್ಭಕ್ಕೆತಕ್ಕಂತೆ ಸಮ ಪ್ರಮಾಣದಲ್ಲಿ ಸೇವಿಸುವ ನೀರು ನಮ್ಮ ದೇಹದಲ್ಲಿ ಭಾರೀ ಪರಿಣಾಮವನ್ನುಂಟು ಮಾಡುತ್ತದಂತೆ,ಸಮಯಕ್ಕೆ ಪ್ರತಿಕೂಲವಾಗಿ ಅಧಿಕ ಪ್ರಮಾಣದಲ್ಲಿ ಸೇವಿಸಿದ ನೀರು ದೇಹಕ್ಕೆ ತೊಂದರೆಯನ್ನೂ ಉಂಟು ಮಾಡುತ್ತದೆ ಎಂದು ಹೇಳಲಾಗಿದೆ, ಆ ಸರಿಯಾದ ವಿಧಾನಗಳ್ಯಾವುವೆಂದು ನೋಡೋಣವೇನು.?
1.ರಾತ್ರಿ ಮಲಗೋಕ್ಕೆ ಮುನ್ನ ಒಂದು ಗ್ಲಾಸು ನೀರು ಸೇವಿಸೋದ್ರಿಂದ ಸ್ಟ್ರೋಕ್ ಅಥವಾ ಹಾರ್ಟ್ ಅಟ್ಯಾಕ್ ನಂತಹ ತೊಂದರೆಗಳಿಂದ ಪಾರಾಗಬಹುದಂತೆ.
2.ಬೆಳಗ್ಗೆ ಎದ್ದ ತಕ್ಷಣ ಮುಖ ತೊಳೆಯುವುದಕ್ಕೆ ಮುನ್ನ ಎರಡು ಗ್ಲಾಸ್ ನೀರು ಸೇವಿಸೋದ್ರಿಂದ ನಮ್ಮ ದೇಹದ ಆಂತರಿಕ ಅಂಗಗಳು ಸಕ್ರಿಯಗೊಳ್ಳುವುದಲ್ಲದೆ ದೇಹದೊಳಗಿನ ಅಂಗಗಳ ಸ್ವಚ್ಛತೆ ನಡೆಯುತ್ತದೆ.
3.ನಾವು ಆಹಾರ ಸೇವಿಸೋ ಅರ್ಧ ಘಂಟೆಗೆ ಮುನ್ನ ನೀರನ್ನು ಸೇವಿಸಿದಲ್ಲಿ ನಮ್ಮ ದೇಹದ ಜೀರ್ಣ ಕ್ರಿಯೆ ಚೆನ್ನಾಗಿರುತ್ತದೆ.
4.ಸ್ನಾನ ಮಾಡೋ ಮುನ್ನ ಒಂದು ಗ್ಲಾಸು ನೀರನ್ನು ಸೇವಿಸಿದಲ್ಲಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.
5.ಚಾ,ಕಾಫಿ ಕುಡಿಯೋ ಮುನ್ನ ಒಂದು ಗ್ಲಾಸು ನೀರನ್ನು ಸೇವಿಸಿದಲ್ಲಿ ದೇಹದ ಪಿ.ಹೆಚ್ ಲೆವೆಲ್ ಸಮದೂಗಿಸಲ್ಪಟ್ಟು ಅಸಿಡಿಟಿ ಸಮಸ್ಯೆ ತಲೆದೋರುವುದಿಲ್ಲ.
6. ಒಂದೆರಡು ಗುಟುಕು ನೀರನ್ನು ಊಟದ ಸಂದರ್ಭದಲ್ಲಿ ಸೇವಿಸಿದಲ್ಲಿ ನಾವು ಸೇವಿಸುವ ಆಹಾರ ಸಮಪ್ರಮಾಣದಲ್ಲಿ ಜೀರ್ಣವಾಗುತ್ತದೆ.
7.ಸಂಜೆಯ ತಿಂಡಿಗಿಂತಲೂ ಮೊದಲು ಒಂದು ಗ್ಲಾಸು ನೀರು ಸೇವಿಸಿದಲ್ಲಿ ಹೊಟ್ಟೆ ತುಂಬಿ ಅಧಿಕ ಕ್ಯಾಲರಿ ಆಹಾರ ತಿನ್ನುವುದು ತಪ್ಪುವುದಲ್ಲದೆ ದೇಹದ ಬೊಜ್ಜು ನಿಯಂತ್ರಣಕ್ಕೆ ಬರುತ್ತದೆ.
8.ವ್ಯಾಯಾಮ ಮಾಡುವ 10 ನಿಮಿಷ ಮೊದಲು ಹಾಗೂ ವ್ಯಾಯಾಮದ 20 ನಿಮಿಷದ ನಂತರ ನೀರು ಸೇವಿಸಿದಲ್ಲಿ ವ್ಯಾಯಾಮದಿಂದಾಗಿ ಆಗುವ ಡೀಹೈಡ್ರೇಶನ್ ಸಮಸ್ಯೆ ತಪ್ಪುತ್ತದೆ. ದೇಹಕ್ಕೆ ಶಕ್ತಿ ಸಿಗುತ್ತದೆ.
9. ದೇಹಕ್ಕೆ ಸುಸ್ತು ಹಾಗೂ ಒತ್ತಡ ಇರೋ ಸಮಯದಲ್ಲಿ ಸೇವಿಸುವ ಒಂದು ಗ್ಲಾಸು ನೀರಿನಿಂದ ನಮ್ಮ ಮಿದುಳು ರಿಲ್ಯಾಕ್ಸ್ ಆಗಿ ಸುಸ್ತು ಹಾಗೂ ಒತ್ತಡ ನಿವಾರಣೆಯಾಗುತ್ತದೆ.
ಇವಿಷ್ಟನ್ನು ಮಾಡಿ ನೋಡಿ ನೀವೇ ಹೇಳುವಿರಂತೆ…

  • ಸ್ವರ್ಣಲತ ಭಟ್

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!

ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್

ಕಂಬಳದ ಪರವಾಗಿ ಬೆಂಬಲಿಸ್ತೀರಾ..? ನಿಮ್ಮ ಅಭಿಪ್ರಾಯ ತಿಳಿಸಿ

ನವಜಾತ ಶಿಶುವಿಗಿದೆ ನಾಲ್ಕು ಕಾಲು, ಎರಡು ಜನನನಾಂಗ..!

ರಾತ್ರೋ ರಾತ್ರಿ ಎಲಿಮಿನೇಟ್ ಆದ್ರು ಶಾಲಿನಿ..!!

ಹಂಪಿ ಸನ್‍ಲೈಟ್ & ಶ್ಯಾಡೋಸ್ ಚಿತ್ರಪ್ರದರ್ಶನ

ಈ ಬಾರಿಯ ಬಿಗ್‍ಬಾಸ್ ಫೈನಲ್ ಗೆಸ್ಟ್ ಯಾರು ಗೊತ್ತಾ..?

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...