ಖ್ಯಾತ ಕಾಲಿವುಡ್ ನಟ ಧನುಷ್ ನಮ್ಮ ಹಿರಿಯ ಮಗ ಎಂದು ಕೋರ್ಟ್ ಮೆಟ್ಟಿಲೇರಿದ ದಂಪತಿಯ ಸುದ್ದಿ ಭಾರಿ ಚರ್ಚೆಯಾಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೆ ಈಗ ಅದು ಸುಳ್ಳು ಎಂದು ಹೇಳುವ ಮೂಲಕ ಇನ್ನಷ್ಟು ಟ್ವಿಸ್ಟ್ ನೀಡಿದ್ದಾರೆ ನಟ ಧನುಷ್..! ಹೌದು ಮಧುರೈನ ಮೇಲೂರು ನಿವಾಸಿ ಆರ್.ಕದಿರೇಸನ್ ಹಾಗೂ ಕೆ.ಮೀನಾಕ್ಷಿ ಎನ್ನುವ ದಂಪತಿಗಳು ಸಿನಿಮಾ ನಟ ಧನುಷ್ ನಮ್ಮ ಹಿರಿಯ ಮಗ ಸಿನಿಮಾದಲ್ಲಿ ಅತಿ ಎತ್ತರಕ್ಕೆ ಬೆಳೆದು ಈಗ ಸ್ವಂತ ಅಪ್ಪ ಅಮ್ಮನನ್ನೆ ಮರೆತು ಬಿಟ್ಟಿದ್ದಾನೆ. ನಮ್ಮ ಕುಟುಂಬ ತೀರಾ ಕಷ್ಟದಲ್ಲಿದ್ದು ಅವರಿಂದ ಸಹಾಯ ಕೊಡಿಸುವಂತೆ ಹೇಳಿ ಮದ್ರಾಸ್ ಕೋರ್ಟ್ ಮೆಟ್ಟಿಲೇರಿದ್ರು. ಇವರ ಅರ್ಜಿಗೆ ಸ್ಪಂದಿಸಿದ್ದ ನ್ಯಾಯಾಲಯ ನಟ ಧನುಷ್ ಈ ಕುರಿತು ಕೋರ್ಟ್‍ಗೆ ಬಂದು ವಿವರಣೆ ನೀಡಬೇಕೆಂದು ಆದೇಶ ನೀಡಿತ್ತು. ಈ ಆದೇಶದಂತೆ ಹೈಕೋರ್ಟ್ ನ್ಯಾಯಪೀಠದೆದುರು ಹಾಜರಾದ ಧನುಷ್ ನಕಲಿ ಪೋಷಕರ ಬ್ಲ್ಯಾಕ್‍ಮೇಲ್‍ಗೆ ನಾನು ಬಲಿಯಾಗುತ್ತಿದ್ದೇನೆ ಅಷ್ಟೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಇವರಿಬ್ಬರೂ ನನ್ನನ್ನು ಬ್ಲ್ಯಾಕ್‍ಮೇಲ್ ಮಾಡ್ತಾ ಇದ್ದಾರೆ ಅಂತ ಕೋರ್ಟ್‍ನ ಮುಂದೆ ಪ್ರತ್ಯಾರೊಪ ಮಾಡಿದ್ದಾರೆ. ನಾನೊಬ್ಬ ಗೌರವಾನ್ವಿತ ನಟ. ನಾನು ಜುಲೈ 28, 1983ರಲ್ಲಿ ಎಗ್ಮೋರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ್ದು. ನಮ್ಮ ತಂದೆ ಕೃಷ್ಣ ಮೂರ್ತಿ ತಾಯಿ ವಿಜಯಲಕ್ಷ್ಮಿ. ನನ್ನ ಮೊದಲ ಹೆಸರು ವಂಕಟೇಶ್ ಪ್ರಭು. 2003ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಂತರ ಧನುಷ್ ಕೆ ರಾಜಾ ಎಂದು ಹೆಸರು ಬದಲಾಯಿತು ಎಂದು ಧನುಷ್ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ನಟಿ ಶ್ರೀದೇವಿಯೂ ಕೂಡ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದರು. ಇಂತಹ ಪ್ರಕರಣಗಳಿಗೆ ನ್ಯಾಯಾಲಯ ಖುದ್ದು ವಿಚಾರಣೆ ಮಾಡುವ ಬದಲು ಅದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬೇಕು ಹಾಗೂ ದಂಪತಿಗಳು ನನ್ನ ಮೇಲೆ ನೀಡಿದ ಆರೋಪದ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಇಬ್ಬರ ವಾದವನ್ನು ಪರಿಶೀಲಿಸಿರುವ ಕೋರ್ಟ್ ಮುಂದಿನ ವಿಚಾರಣೆಯನ್ನು ಫೆ.8ಕ್ಕೆ ತಳ್ಳಿ ಹಾಕಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!
ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್
ಕಂಬಳದ ಪರವಾಗಿ ಬೆಂಬಲಿಸ್ತೀರಾ..? ನಿಮ್ಮ ಅಭಿಪ್ರಾಯ ತಿಳಿಸಿ
ನವಜಾತ ಶಿಶುವಿಗಿದೆ ನಾಲ್ಕು ಕಾಲು, ಎರಡು ಜನನನಾಂಗ..!
ರಾತ್ರೋ ರಾತ್ರಿ ಎಲಿಮಿನೇಟ್ ಆದ್ರು ಶಾಲಿನಿ..!!