ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಗೆ ಈಗಾಗಲೆ ಆಯಾ ದೇಶಗಳಲ್ಲಿ ಪೂರ್ವ ತಯಾರಿಗಳು ನಡೀತಾ ಇದೆ. ಅದೇ ರೀತಿ ವಿಶ್ವದ ಎಲ್ಲಾ ತಂಡಗಳು ಮುಂದಿನ ವಿಶ್ವಕಪ್‍ಗಾಗಿ ಸಖತ್ ಪ್ರಿಪೇರ್ ಕೂಡ ನಡೆಸುತ್ತಿದ್ದಾರೆ. ಆದ್ರೆ ಮುಂದಿನ ವಿಶ್ವಕಪ್‍ನಲ್ಲಿ ಒಂದು ಬದಲಾವಣೆ ಆಗುವ ಸಾಧ್ಯತೆ ಹೆಚ್ಚಾಗಿ ಗೋಚರಿಸುತ್ತಾ ಇದೆ..! ಅದೇನಂದ್ರೆ 2019ರ ವರ್ಲ್ಡ್ ಕಪ್‍ನಲ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಕಣಕ್ಕಿಳಿಯೋದು ಬಹುತೇಕ ಡೌಟ್..! ಹೌದು.. ನೆರೆಯ ಪಾಕಿಸ್ತಾನ ಮುಂದಿನ ವಿಶ್ವಕಪ್‍ನಲ್ಲಿ ಸ್ಥಾನ ಪಡೆಯೋದ್ರಲ್ಲಿ ವಿಫಲತೆ ಹೊಂದುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಕಾರಣ ಪಾಕ್ ತಂಡದ ಕಳಪೆ ಪ್ರದರ್ಶನ..! ಪಾಕ್ ತಂಡದಲ್ಲೀಗ ಅನುಭವಿ ಆಟಗಾರರ ಅಲಭ್ಯ ಒಂದೆಡೆಯಾದ್ರೆ ತಂಡದಲ್ಲಿ ಆಂತರಿಕ ಕಿತ್ತಾಟಗಳು ಎದ್ದು ಕಾಣ್ತಾ ಇದೆ. ಇದರ ಪರಿಣಾಮವಾಗಿ ಪಾಕಿಸ್ತಾನ ತಂಡ ತೀರ ಕೆಳ ಮಟ್ಟದ ಪ್ರದರ್ಶನ ನೀಡಿ ಐಸಿಸಿಯ ಕೆಂಗಣ್ಣಿಗೆ ಗುರಿಯಾಗಿದೆ. ಐಸಿಸಿ ಹೊರ ಹಾಕಿರೋ ರ್ಯಾಂಕಿಂಗ್ ಪಟ್ಟಿಯಲ್ಲಿ ಪಾಕ್ ಮುಂದಿನ ವಿಶ್ವಕಪ್‍ಗೆ ನೇರ ಅರ್ಹತೆ ಗಿಟ್ಟಿಸಿಕೊಳ್ಳೊದ್ರಲ್ಲಿ ವಿಫಲತೆ ಹೊಂದಿದೆ. ತಂಡದ ಕೆಟ್ಟ ಪ್ರದರ್ಶನದಿಂದ ಪಾಕ್ ಭಾರಿ ತಲೆದಂಡ ಕಟ್ಟಬೇಕಾದ ಸ್ಥಿತಿ ಬಂದಿದೆ. ಸದ್ಯಕ್ಕೆ ಐಸಿಸಿ ರ್ಯಾಂಕಿಂಗ್ ಪ್ರಕಾರ ಪಾಕ್‍ನ ಬಳಿ ಕೇವಲ 89 ಅಂಕ ಪಡೆದುಕೊಂಡಿದೆ. ಬಾಂಗ್ಲದೇಶ ಪಾಕ್‍ಗಿಂತಲೂ ಎರಡು ಅಂಕ ಮುಂದಿದ್ದು ವೆಸ್ಟ್ ಇಂಡೀಸ್ ಪಾಕ್‍ಗಿಂತ ಎರಡು ಅಂಕಗಳ ಹಿಂದೆ ಉಳಿದುಬಿಟ್ಟಿದೆ. ಆದ್ರೆ ಐಸಿಸಿ ನಿಯಮದ ಪ್ರಕಾರ ಸೆಪ್ಟೆಂಬರ್ 30, 2017ರ ಒಳಗಾಗಿ ಐಸಿಸಿ ರ್ಯಾಂಕಿಂಗ್‍ನ ಅಗ್ರ ಐಳು ತಂಡದವರಿಗೆ ಮಾತ್ರ ವಿಶ್ವಕಪ್‍ಗೆ ನೇರವಾಗಿ ಅರ್ಹತೆ ಪಡೆದುಕೊಳ್ಳುತ್ತಾರೆ. ಈ ಲೀಸ್ಟ್ ನಲ್ಲಿ ಬರೋದಾದ್ರೆ ಪಾಕ್ ಈಗ ಎಂಟನೆ ಸ್ಥಾನದಲ್ಲಿದ್ದು, ಸೆಪ್ಟೆಂಬರ್ ಒಳಗಾಗಿ ಅಗ್ರ ಏಳರ ಘಟ್ಟದಲ್ಲಿ ಬರೋದು ಬಹುತೇಕ ಅನುಮಾನವಾಗಿದೆ. ಪಾಕಿಸ್ತಾನ ಫೆಬ್ರವರಿಯಲ್ಲಿ ಬಾಂಗ್ಲಾ ವಿರುದ್ದ ಪಂದ್ಯವನ್ನಾಡಲಿದ್ದು, ಅದಾದ ನಂತರ ವೆಸ್ಟ್ ಇಂಡೀಸ್ ವಿರುದ್ದ ಸೆಣಸಾಡಲಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!
ತನ್ನ ಹಸುಳೆಯನ್ನೆ ಮೆಟ್ಟಿಲ ಮೇಲಿಂದ ಎಸೆದ ತಾಯಿ..!
ನಕಲಿ ಅಪ್ಪ-ಅಮ್ಮನಿಂದ ಬ್ಲ್ಯಾಕ್‍ಮೇಲ್: ನಟ ಧನುಷ್ ಆರೋಪ
ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!
ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್