No menu items!
5.2 C
Munich
Friday, April 24, 2026

ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ

Must read

ಇಡೀ ರಾಜ್ಯದಾದ್ಯಂತ ಸಾಂಸ್ಕೃತಿಕ ಕ್ರೀಡೆ ಕಂಬಳ ಕ್ರೀಡೆಯ ಪರ ಧನಿ ಎತ್ತಿದ್ದಾರೆ ಜನ. ಒಂದುಕಡೆ ಕಂಬಳವನ್ನು ಆಚರಣೆಗೆ ತರಲು ಕೋರ್ಟ್ ಆದೇಶ ನೀಡ್ಬೇಕು ಎನ್ನುವ ಕೂಗುಗಳು ಕೇಳಿ ಬರ್ತಾ ಇದ್ರೆ ಕಂಬಳ ಒಂದು ಕ್ರೀಡೇನಾ..? ಅದನ್ನು ಆಡೋರಿಗೆ ಮಾನ ಮರ್ಯಾದೆ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ ಹಿರಿಯ ಗಾಂಧಿವಾದಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ..! ಕಂಬಳ ನಮ್ಮ ಸಂಸ್ಕೃತಿ ಎನ್ನುವವರಿಗೆ ಸೊಪ್ಪು ಹಾಕಬೇಡಿ. ಕಂಬಳ ಒಂದು ಕ್ರೀಡೆಯಲ್ಲ ಅದು ಅಸಯ್ಯವಾದ ಕ್ರೀಡೆ. ಎತ್ತುಗಳಿಗೆ ಹಿಂಸೆ ನೀಡೋದೆ ಸಾಂಸ್ಕೃತಿಕ ಕ್ರೀಡೇನಾ..? ಇವೆಲ್ಲಾ ಸಂಪ್ರದಾಯಕ್ಕೆ ವಿರುದ್ದವಾದ ಕ್ರೀಡೆ. ಇನ್ನು ಇದನ್ನು ಆಡುವವರಿಗೆ ಮಾನ ಮರ್ಯಾದೆನೆ ಇಲ್ಲ ಎಂದು ಖಾರವಾಗಿ ನುಡಿದಿದ್ದಾರೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ. ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡೆವು ಎಂದು ತನ್ನ ಇಳಿಯ ವಯಸ್ಸಿನಲ್ಲೂ ಪ್ರಟಿಭಟನೆ ನಡೆಸುತ್ತಿರುವ ದೊರೆಸ್ವಾಮಿ, ಕಂಬಳ ಕ್ರೀಡೆಗೆ ನನ್ನ ಸಂಪೂರ್ಣ ವಿರೋಧವಿದ್ದು ಸರ್ಕಾರ ಯಾವದೇ ಕಾರಣಕ್ಕೂ ಈ ಆಟಕ್ಕೆ ಬೆಂಬಲ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ಇವರೊಬ್ಬರೆ ಅಲ್ಲ ಕಂಬಳಕ್ಕೆ ನನ್ನ ವಿರೋಧವಿದೆ ಅಂತ ಈ ಹಿಂದೆ ಹಿರಿಯ ಸಾಹಿತಿ ದೇವನೂರು ಮಹಾದೇವಪ್ಪನವರೂ ಕೂಡ ಅಭಿಪ್ರಾಯ ಪಟ್ಟಿದ್ದರು.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?

ನಕಲಿ ಅಪ್ಪ-ಅಮ್ಮನಿಂದ ಬ್ಲ್ಯಾಕ್‍ಮೇಲ್: ನಟ ಧನುಷ್ ಆರೋಪ

ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!

ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್

ಕಂಬಳದ ಪರವಾಗಿ ಬೆಂಬಲಿಸ್ತೀರಾ..? ನಿಮ್ಮ ಅಭಿಪ್ರಾಯ ತಿಳಿಸಿ

ನವಜಾತ ಶಿಶುವಿಗಿದೆ ನಾಲ್ಕು ಕಾಲು, ಎರಡು ಜನನನಾಂಗ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article