ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧ ಮಾಡಿ 10 ವರ್ಷಗಳೆ ಕಳೆದು ಹೋಗಿದೆ. ಆದರೆ ಈಗ ಮತ್ತೆ ರಾಜ್ಯದಲ್ಲಿ ಲಾಟರಿ ಮಾರಾಟದ ಕೂಗು ಕೇಳಿ ಬರ್ತಾ ಇದೆ..! ಹೌದು ರಾಜ್ಯದೊಳಗೆ ಎಂಎಸ್‍ಐಎಲ್ ಮುಖಾಂತರ ಕಾನೂನು ಬದ್ಧವಾಗಿ ಲಾಟರಿ ಮಾರಾಟ ಆರಂಭ ಮಾಡ್ಬೇಕು ಅಂತ ಕರ್ನಾಟಕ ರಾಜ್ಯ ಚಿಲ್ಲರೆ ಮಾರಾಟ ಸಂಘ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ರಾಮಕೃಷ್ಣ ಸರ್ಕಾರ 2007ರಲ್ಲಿ ರಾಜ್ಯದಲ್ಲಿ ಲಾಟರಿ ನಿಷೇಧ ಮಾಡಿದ ನಂತರ ಸಂಪೂರ್ಣವಾಗಿ ಲಾಟರಿ ನಿಷೇಧವಾಗಿದೆ ಎಂಬ ಭಾವನೆ ಅವರಲ್ಲಿದೆ ಎಂದನಿಸುತ್ತಿದೆ. ಆದರೆ ರಾಜ್ಯದ ಒಳಗೆ ಇನ್ನೂ ಕೂಡ ಲಾಟರಿ ಮಾರಾಟ ನಿಂತಿಲ್ಲ. ತಮಿಳುನಾಡು ಮೂಲದವರಿಂದ ರಾಜ್ಯದಲ್ಲಿ ಅಕ್ರಮ ಲಾಟರಿ ದಂಧೆ ನಡೆಯುತ್ತಲೆ ಇದೆ. ಈ ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಕೆಲವು ರಾಜಕೀಯ ಧುರೀಣರು ಕೂಡ ಶಾಮೀಲಾಗಿದ್ದು ಬೆಳಕಿಗೆ ಬಂದಿತ್ತು. ಪ್ರಕರಣದ ಕುರಿತು ಸಿಬಿಐ ತನಿಖೆಗೆ ನೀಡಿದ್ರೂ ಕೂಡ ಪ್ರತಿಫಲ ಮಾತ್ರ ಶೂನ್ಯ. ಹೊರ ರಾಜ್ಯದ ಲಾಟರಿ ದಂಧೆ ರಾಜಾರೋಷವಾಗಿ ನಡೀತಾನೆ ಇದೆ. ಆನ್‍ಲೈನ್ ಲಾಟರಿ ದಂಧೆಯೂ ಕೂಡ ಯಾರ ಭಯನೂ ಇಲ್ದೆ ನಿರಂತರವಾಗಿ ನಡಿಯುತ್ತಾ ಬರ್ತಿದೆ. ಆದ್ರೆ ಇದರಿಂದ ತೀವ್ರ ಸಮಸ್ಯೆಗೊಳಗಾಗಿದ್ದು ಮಾತ್ರ ನಮ್ಮ ರಾಜ್ಯದ ಲಾಟರಿ ಮಾರಾಟಗಾರರು. ಲಾಟರಿ ನಿಷೇಧ ಮಾಡಿದ ನಂತರ ಇದನ್ನೆ ನಂಬಿ ಬದುಕುತ್ತಿದ್ದ ಲಕ್ಷಾಂತರ ಮಂದಿ ಬೀದಿ ಪಾಲಾಗಿದ್ದಾರೆ. ಅಷ್ಟೆ ಅಲ್ಲ ಸರ್ಕಾರಕ್ಕೆ ಬರ್ತಾ ಇದ್ದ ಆದಾಯ ಕೂಡ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ. ಒಂದು ವೇಳೆ ರಾಜ್ಯದಲ್ಲಿ ಕಾನೂನು ಬದ್ಧವಾದ ಲಾಟರಿ ಮಾರಾಟ ಆರಂಭವಾಗಿದ್ದೆ ಆದ್ರೆ ಸಾಪ್ತಾಹಿಕ ಲಾಟರಿ ಮಾರಾಟದಿಂದ ವರ್ಷಕ್ಕೆ 4 ಸಾವಿರ ಕೋಟಿ ಹಣ ಸರ್ಕಾರದ ಬೊಕ್ಕಸಕ್ಕೆ ಸೇರಲಿದೆ. ಅಲ್ಲದೆ ರಾಜ್ಯದಲ್ಲಿದ್ದ 8 ಲಕ್ಷಕ್ಕೂ ಅಧಿಕ ಲಾಟರಿ ಮಾರಾಟದಾರರಿಗೆ ಮರಳಿ ಉದ್ಯೋಗ ಸಿಕ್ಕಿದಂತಾಗುತ್ತದೆ. ಅಷ್ಟೆ ಅಲ್ಲ ಲಾಟರಿ ಮಾರಾಟ ಆರಂಭದಿಂದ ಅಕ್ರಮವಾಗಿ ನಡೆಯುತ್ತಿರುವ ಲಾಟರಿ ದಂಧೆ ನಿಂತು ಹೋಗಲಿದೆ ಎಂದು ರಾಮಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ಸರ್ಕಾರಕ್ಕೆ ಮನವರಿಕೆಯ ಪ್ರಯತ್ನ ಮಾಡಿರುವ ಇವರಿಗೆ ಸರ್ಕಾರ ಲಾಟರಿ ಮಾರಾಟಕ್ಕೆ ಅನುವು ಮಾಡಿಕೊಡುತ್ತಾ..? ಕಾದು ನೋಡಬೇಕಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!
2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?
ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ
ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!
ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್