ಬಿಗ್‍ಬಾಸ್ ಸೀಸನ್3 ವಿನ್ನರ್ ಹುಚ್ಚವೆಂಕಟ್!! ಪ್ರಥಮ್ ಗೆಲುವು ನೀಡುವ ಸಂದೇಶವೇನು?

Date:

ಕನ್ನಡ ಬಿಗ್‍ಬಾಸ್‍ ಸೀಸನ್ 4 ರ ವಿನ್ನರ್ ಆಗಿ ಹೊರಹೊಮ್ಮುವ ಮೂಲಕ ‘ಹುಚ್ಚಾಟ’ಕ್ಕೆ ಬೆಲೆ ಎಂದು ಒಳ್ಳೆಯ ಹುಡುಗ ಪ್ರಥಮ್ ತೋರಿಸಿಕೊಟ್ಟಿದ್ದಾರೆ.
ಹತ್ತಾರು ವರ್ಷದ ನಿರಂತರ ಶ್ರಮ, ಸಭ್ಯತೆ, ಪ್ರಾಮಾಣಿಕತೆ, ಒಳ್ಳೆಯತನ ಎಲ್ಲದಕ್ಕಿಂತ ಕಿರುಚಾಟ, ಕಾಲೆಳೆಯುವ ದುರ್ಬುದ್ಧಿಯೇ ಗೆಲ್ಲುವುದು ಎಂದು ಪ್ರಥಮ್ ಗೆಲುವು ತೋರಿಸಿದೆ.
ಪ್ರಥಮ್ ಬಗ್ಗೆ ಯಾರಿಗೇನು ದ್ವೇಷವಿಲ್ಲ. ಸ್ವತಃ ರನ್ನರ್ ಅಪ್ ಗೆ ತೃಪ್ತರಾದ ಕೀರ್ತಿಕುಮಾರ್ (ಕೀರ್ತಿ ಶಂಕರಘಟ್ಟ, ಕಿರಿಕ್ ಕೀರ್ತಿ) ಸಹ ಪ್ರಥಮ್ ನ ಗುಣಗಾನ ಮಾಡಿದ್ದಾರೆ. ಅದು ಕೀರ್ತಿ ಎಂಬ ಹೃದಯವಂತನ ನಿಜವಾದ ವ್ಯಕ್ತಿತ್ವವೂ ಹೌದು. ಕೀರ್ತಿ ಅವರು ಎಂದು ತೋರಿಕೆಗಾಗಿ, ಮುಖವಾಡ ಧರಿಸಿ ಆಡಿದವರಲ್ಲ. ಅವರ ಆಟ, ಪ್ರತಿ ಟಾಸ್ಕ್ ನಲ್ಲಿ ತೋರುತ್ತಿದ್ದ ಆಸಕ್ತಿ, ಗೆಲ್ಲುವ ಛಲ ಪ್ರಥಮ್ ಎಂಬ ಒಳ್ಳೆಯ ಹುಡುಗನಲ್ಲಿ ಕಾಣಲೇ ಇಲ್ಲ.
ದಂಡನಾಯಕನಾಗಿ ಅದ್ಭುತ ನಿರ್ವಹಣೆ ತೋರಿರುವ ಪ್ರಥಮ್ ನ ಆ ಸಾಧನೆಯಿಂದ ಮನೆಯೊಳಗಿನ ಉಳಿದವರ ಕೊಡುಗೆ ಅಪಾರ ಎನ್ನುವುದನ್ನು ಮರೆಯುವಂತಿಲ್ಲ.
ಪ್ರಥಮ್ ಎಂಬ ಸಾಮಾನ್ಯ ಹುಡುಗ ಘಟಾನುಘಟಿಗಳ ಎದುರು ಗೆದ್ದಿರುವುದು ಸಾಮಾನ್ಯವೇನಲ್ಲ. ಪ್ರಾಮಾಣಿಕ ಆಟವಾಡಿ, ಸಜ್ಜನಿಕೆಯಿಂದ ವರ್ತಿಸಿ ಗೆದ್ದಿದ್ದರೆ ಆ ಬಿಗ್‍ಬಾಸ್‍ ಟ್ರೋಫಿಯ ತೂಕ ಕೂಡ‌ ಹೆಚ್ಚುತ್ತಿತ್ತು.
ಕಿರಿಕ್ ಕೀರ್ತಿ, ರೇಖಾ ನಿಜವಾದ ವಿನ್ನರ್: ಯಾರು ಏನೇ ಹೇಳಲಿ, ಪ್ರಥಮ್ ಗೆದ್ದಿರುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಿದೆ. ಕಿರುಚಾಟ, ಅವಾಚ್ಯ ಶಬ್ಧಗಳ ಬಳಕೆ, ಅನಗತ್ಯ ಖಂಡನೆ, ಹುಚ್ಚಾಟದ ಕುಣಿತ, ನಿಂಧನೆ, ಬೇರೊಬ್ಬರನ್ನು ರೊಚ್ಚಿಗೆಬ್ಬಿಸುವುದು ಗೆಲುವಿನ ಅಸ್ತ್ರ, ಜನಮನ್ನಣೆಯ ಭೂಮಿಕೆ ಎಂಬುದನ್ನು ಪ್ರಥಮ್ ಗೆ ಒಲಿದು ಬಂದ ಜಯ ಸ್ಪಷ್ಟಪಡಿಸಿದೆ.
ಜನ ಇಷ್ಟಪಡುವ ಹುಚ್ಚುತನವನ್ನೇ ಸಾಧನವಾಗಿ ಬಳಸಿಕೊಂಡಿದ್ದು ತಪ್ಪಲ್ಲ. ಆದರೆ, ಅಂತಿಮ ಮೂವರಲ್ಲಿ ರೇಖಾ ಅವರನ್ನು ಹೊರಗೆ ಕಳುಹಿಸುವ ಬದಲು ಪ್ರಥಮ್ ಅನ್ನು ಕಳುಹಿಸಬೇಕಿತ್ತು ಎನ್ನುವುದು ಸಭ್ಯ ವೀಕ್ಷಕರ, ಸಾಮಾಜಿಕ ಜಾಲತಾಣಗಳನ್ನು ನೋಡದೆ ಮನೆಯಲ್ಲೇ ಟಿವಿ ನೋಡಿದ ವೀಕ್ಷಕ ವರ್ಗದ ಅಭಿಪ್ರಾಯ. ರೇಖಾ ಮತ್ತು ಕೀರ್ತಿಯವರಲ್ಲಿ ಯಾರು ಗೆದ್ದರೂ ಜನ ಖುಷಿ ಪಡುತ್ತಿದ್ದರು. ಪ್ರಾಮಾಣಿಕತೆ, ಸಹಜತೆ ಗೆಲ್ಲುವುದು ಎಂಬ ಸಂದೇಶವೂ ಸಮಾಜಕ್ಕೆ ತಲುಪುತ್ತಿತ್ತು.

ಕಳೆದ ಬಾರಿ ವಿನ್ನರ್ ಹುಚ್ಚವೆಂಕಟ್:
ಪ್ರಥಮ್ ಗೆಲುವು ಹುಚ್ಚವೆಂಕಟ್ ಅವರನ್ನು ನೆನಪಿಸುತ್ತಿದೆ‌. ಒಂದುವೇಳೆ ರವಿಮುರೂರ್ ಗೆ ಹೊಡೆದು ಮನೆಯಿಂದ ಆಚೆ ಬರದಿದ್ದರೆ ಬಿಗ್ ಬಾಸ್ ಸೀಸನ್ 3 ನ ವಿನ್ನರ್ ಆಗಿರುತ್ತಿದ್ದರು!

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?

ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ

ಈ ದೇಶದಲ್ಲಿ 70 ಲೀಟರ್ ಪೆಟ್ರೋಲ್ ಬೆಲೆ ಕೇವಲ 95 ರೂಪಾಯಿ ಮಾತ್ರ..!

ಅಧ್ಯಕ್ಷ ಸ್ಥಾನ ಏರಿದ ನಂತರ ಮೋದಿಗೆ ಆಹ್ವಾನ ನೀಡಿದ ಟ್ರಂಪ್

ಕಂಬಳದ ಪರವಾಗಿ ಬೆಂಬಲಿಸ್ತೀರಾ..? ನಿಮ್ಮ ಅಭಿಪ್ರಾಯ ತಿಳಿಸಿ

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...