2017- ಕೇಂದ್ರ ಬಜೆಟ್ ಲೈವ್ | LIVE BUDGET

Date:

  • LIVE BUDGET
  • 4ನೇ ಕೇಂದ್ರ ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವ ಜೇಟ್ಲಿ.
  • ಜಗತ್ತಿನ 6ನೇ ಅತಿ ದೊಡ್ಡ ಆರ್ಥಿಕ ಶಕ್ತಿ ಹೊಂದಿದ ದೇಶ ಭಾರತವಾಗಿದೆ. ವಿದೇಶಿ ಬಂಡವಾಳದ ಹೂಡಿಕೆ ಶೇ.36ರಷ್ಟು ಹೆಚ್ಚಳವಾಗಿದೆ.
  • ಕೇಂದ್ರ ಬಜೆಟ್‍ನ ವಿಶೇಷತೆಗಳು..
    ನೋಟು ಅಪಮೌಲ್ಯೀಕರಣ ಹಾಗೂ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಗಮನದಲ್ಲಿಟ್ಟುಕೊಂಡು ಇಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡನೆ ಮಾಡುತ್ತಿರುವುದು ಇಡೀ ದೇಶವೇ ಕುತೂಹಲದಿಂದ ವೀಕ್ಷಿಸುತ್ತಿದೆ. ಈ ಬಜೆಟ್ ಮಂಡನೆ ಈ ಹಿಂದಿನ ಎಲ್ಲಾ ಬಜೆಟ್ ಮಂಡನೆಗಳಿಂತ ಹಲವು ಹೊಸತನಕ್ಕೆ ಸಾಕ್ಷಿಯಾಗಿದ್ದು ಸ್ವಾತಂತ್ರ್ಯ ನಂತರದ ಇದೇ ಪ್ರಪ್ರಥಮ ಬಾರಿಗೆ ಫೆಬ್ರವರಿ 1ನೇ ತಾರೀಕಿಗೆ ಬಜೆಟ್ ಮಂಡನೆಯಾಗ್ತಾ ಇದೆ. ಹಾಗಾದ್ರೆ ಏನಿದೆ ಈ ಬಾರಿಯ ಬಜೆಟ್ ಮಂಡನೆಯ ವಿಶೇಷತೆ..? ಯಾರ ಜೇಬಿಗೆ ಬಿತ್ತು ಕತ್ತರಿ..? ಇದು ಬಡವರ ಸ್ನೇಹಿ ಬಜೆಟ್ಟಾ..? ಪ್ರತಿಯೊಂದು ಡಿಟೇಲ್ಸ್‍ನ ಇಲ್ಲಿದೆ ಮಿಸ್ ಮಾಡ್ದೆ ಓದಿ.
    • ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಫೆ.1 ರಂದು ಕೇಂದ್ರ ಬಜೆಟ್ ಮಂಡನೆ
    • ಮಾಜಿ ಸಚಿವ ಹಾಗೂ ಹಾಲಿ ಸಂಸದ ಇ ಅಹ್ಮದ್ ನಿಧನ ಹೊಂದಿದ್ರೂ ಬಜೆಟ್ ಮಂಡನೆಗೆ ಸರ್ವಪಕ್ಷಗಳ ಒಪ್ಪಿಗೆ.
    • ನೋಟು ಅಮಾನ್ಯೀಕರಣದ ನಂತರ ನಡೆದ ಮೊದಲನೆ ಬಜೆಟ್ ಮಂಡನೆ ಮಾಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ
    • ನೋಟು ಅಮಾನ್ಯೀಕರಣ ಆರ್ಥಿಕ ಅಭಿವೃದ್ದಿಗೆ ಪೂರಕ ಎಂದು ಬಜೆಟ್‍ನಲ್ಲಿ ಉಲ್ಲೇಖ
    • ಬಡವರು ಮತ್ತು ದುರ್ಬಲ ವರ್ಗದವರಿಗೆ ಸರ್ಕಾರದಿಂದ ನೆರವು
    • ಪಾರದರ್ಶಕತೆ ಹಾಗೂ ವಿಶ್ವಾಸರ್ಹತೆಗಾಗಿ ದೇಶದಲ್ಲಿ ಡಿಜಿಟಲಿಕರಣವೇ ನಮ್ಮ ಧ್ಯೇಯ
    • ಮೂರು ವರ್ಷಗಳವರೆಗೆ ಸರಕಾರಿ ಬ್ಯಾಂಕ್‍ಗಳಿಗೆ ಸಾಲ
    • ರೈತರ ಅಭಿವೃದ್ದಿಗಾಗಿ ಮಣ್ಣಿನ ಕಾರ್ಡ್
    • ರೈತರ ಸಾಲದ ಮೇಲೆ 60 ದಿನಗಳ ಬಡ್ಡಿ ವಿನಾಯ್ತಿ
    • ರೈತರಿಗೆ 10 ಲಕ್ಷ ಕೋಟಿ ಸಾಲ ನೀಡಲು ಕೇಂದ್ರ ಸರ್ಕಾರ ನಿರ್ಧಾರ
    • ಹಾಲು ಉತ್ಪಾದನೆಗೆ 8 ಸಾವಿರ ಕೋಟಿ ಮೀಸಲು.
    • 2018ಕ್ಕೆ ಬಡತನ ಮುಕ್ತ ಭಾರತದ ಗುರಿ.
    • ಫಸಲು ಭೀಮಾ ಯೋಜನೆಗೆ 9 ಸಾವಿರ ಕೋಟಿ ರೂಪಾಯಿ ಮೀಸಲು
    • ನರೇಗಾ ಯೋಜನೆ ಅಡಿ ದೇಶದಲ್ಲಿ ಮತ್ತಷ್ಟು ಉದ್ಯೋಗವಕಾಶ ನೀಡಲು ಕೇಂದ್ರ ನಿರ್ಧಾರ
    • 1 ಕೋಟಿ ಕುಟುಂಬಕ್ಕೆ ಅಂತ್ಯೋದಯ ಅನ್ನ ಯೋಜನೆಯ ಭಾಗ್ಯ
    • ಗ್ರಾಮೀಣಾಭಿವೃದ್ದಿಗೆ ಪ್ರತಿ ವರ್ಷ 3 ಲಕ್ಷ ಕೋಟಿ ಮೀಸಲು
    • ಈ ವರ್ಷದಲ್ಲಿ 5 ಸಾವಿರ ನೀರಿನ ಹೊಂಡಗಳ ನಿರ್ಮಾಣದ ಗುರಿ
    • ಪ್ರಧಾನ್ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಗೆ 23 ಸಾವಿರ ಕೋಟಿ
    • ಮನ್‍ರೇಗಾ ಯೋಜನೆಗೆ 48 ಸಾವಿರ ಕೋಟಿ
    • ಆರ್ಥಿಕ ಸುಧಾರಣೆಗೆ ಜಿಎಸ್‍ಟಿ ಜಾರಿ ಮಾಡಲು ಕೇಂದ್ರ ನಿರ್ಧಾರ
    • ಪ್ರಧಾನ್ ಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿಯಲ್ಲಿ ದಿನಕ್ಕೆ 133 ಕಿ.ಮೀ ರಸ್ತೆ ಅಭಿವೃದ್ದಿ
    • 2018ರ ಅಂತ್ಯಕ್ಕೆ ಗ್ರಾಮೀಣ ಪ್ರದೇಶಗಳಿಗೆ ಶೇ.100ರಷ್ಟು ವಿದ್ಯುತ್ ಪೂರೈಕೆಯ ಗುರಿ
    • ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಒತ್ತು ನೀಡಿದ ಕೇಂದ್ರ. ಆನ್ ಲೈನ್ ಶೀಕ್ಷಣಕ್ಕೆ ಹಚ್ಚಿನ ಮಹತ್ವ 350 ಹೊಸ ಕೋರ್ಸ್ ಆರಂಭ
    • ಶಾಲೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳಿಗೆ ಹೆಚ್ಚು ಒತ್ತು
    • ದೇಶದ ಐದು ಕಡೆಯಲ್ಲಿ ಪ್ರವಾಸೋಧ್ಯಮ ವಲಯ ಸ್ಥಾಪನೆ.
    • ಹಿರಿಯ ನಾಗರಿಕರಿಗೆ ಪಿಂಚಣಿ ಸೇವೆ ಹಾಗೂ ಆಧಾರ್ ಕಾರ್ಡ್ ಆಧಾರಿತ ಆರೋಗ್ಯ ಸೇವೆ ನೀಡಲು ನಿರ್ಧಾರ
    • ರೈಲ್ವೇ ಯೋಜನೆಗಳನ್ನು ಘೋಷಿಸಿದ ಅರುಣ್ ಜೇಟ್ಲಿ ರೈಲ್ವೆಗೆ 1 ಲಕ್ಷ 30 ಸಾವಿರ ಕೋಟಿ ಅನುದಾನ
    • 70 ಸಾವಿರ ರೈಲ್ವೆ ನಿಲ್ದಾಣಗಳಲ್ಲಿ ಸೌರ ಶಕ್ತಿ ಅಳವಡಿಕೆ.
    • ಸರಕು ಸಾಗಾಣಿಕೆ ವಲಯಗಳಲ್ಲಿ ಖಾಸಗೀಕರಣದ ಘೋಷಣೆ ಮಾಡಿದ ಜೇಟ್ಲಿ
    • 2020ರ ಒಳಗೆ ಮಾನವ ರಹಿತ ರೈಲ್ವೆ ಕ್ರಾಸಿಂಗ್
    • ತೀರ್ಥ ಯಾತ್ರಿಗಳಿಗೆ ಕೇಂದ್ರದಿಂದ ವಿಶೇಷ ರೈಲ್ವೇ ಸೇವೆ ಘೋಷಣೆ.
    • ರೈಲ್ವೆದಲ್ಲಿ ಡಿಜಿಟಲ್ ಬುಕ್ಕಿಂಗ್ ಸೇವೆ. ಎಲ್ಲಾ ಕೋಚ್‍ಗಳಿಗೂ ಬಯೋ ಸಿಸ್ಟಮ್
    • 500 ರೈಲ್ವೇ ನಿಲ್ದಾಣಗಳಿಗೆ ಎಸ್ಕಲೇಟರ್ ಸೌಲಭ್ಯ
    • ರೈಲ್ವೆ ವೆಬ್‍ಸೈಟ್‍ನಲ್ಲಿ ಟಿಕೇಟ್ ಬುಕಿಂಗ್ ಮಾಡಿದ್ರೆ ನೋ ಸರ್ವಿಸ್ ಚಾರ್ಜ್

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?

ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...