ಚುನಾವಣಾ ಪ್ರಚಾರದಲ್ಲಿ ಅಭ್ಯರ್ಥಿಗಳು ಮತದಾರರ ಮನೆ ಮನೆಗೆ ಹೋಗಿ ಮತಯಾಚನೆ ಮಾಡುವ ಜೊತೆಯಲ್ಲೆ ಹಣ-ಹೆಂಡವೂ ಕೂಡ ಎಗ್ಗಿಲ್ಲದೆ ಸರಬರಾಜಾಗುತ್ತೆ. ಇದು ಚುನಾವಣಾ ಸಂದರ್ಭದಲ್ಲಿ ಮಾಮೂಲಿ ಅಂತ ಹೇಳ್ಬೋದು. ಆದ್ರೆ ಪಂಜಾಬ್‍ನಲ್ಲಿ ಇವೆಲ್ಲದರ ಜೊತೆಗೆ ಡ್ರಗ್ಸ್ ಕೂಡ ಸರಬರಾಜಾಗ್ತಾ ಇದೆ ಅಂದ್ರೆ ನೀವು ನಂಬ್ತೀರಾ..? ಖಂಡಿತ ನಂಬಲೇ ಬೇಕಾದ ಸತ್ಯ ಇದು ನೋಡಿ..! ಇನ್ನೇನು ಪಂಜಾಬ್‍ನಲ್ಲಿ ಇದೇ ಫೆ.4 ರಿಂದ ಮತದಾನ ಆರಂಭವಾಗುತ್ತೆ. ಈ ನಿಟ್ಟಿನಲ್ಲಿ ಅಭ್ಯರ್ಥಿಗಳು ಮತಯಾಚನೆಯ ಜೊತೆಗೆ ಹಣ, ಮಧ್ಯ, ರೇಷ್ಮೆ ಸೀರೆಗಳ ಜೊತೆಗೆ ಮನೆ ಮನೆಗೆ ಡ್ರಗ್ಸ್ ಗಳನ್ನು ನೀಡ್ತಾ ಬಂದಿದ್ದಾರೆ ಎಂಬ ಸುದ್ದಿ ಕೇಳಿ ಬರ್ತಾ ಇದೆ. ಪಂಜಾಬ್‍ನ ಗುರುದಾಸ್‍ಪುರ ಸೇರಿದಂತೆ ಹಲವು ನಗರಗಳಲ್ಲಿ ಡ್ರಗ್ಸ್ ಸರಬರಾಜು ಎಗ್ಗಿಲ್ಲದೆ ತಾಂಡವವಾಡ್ತಾ ಇದೆ. ಮನೆ ಮನೆಗೆ ಡ್ರಗ್ಸ್ ಬರ್ತಾ ಇರೋದ್ರಿಂದ ಅಲ್ಲಿನ ಜನ ಸಖತ್ ಖುಷಿಯಾಗಿದ್ದಾರಂತೆ..! ಒಂದು ಪೈಸೆಯೂ ಖರ್ಚಿಲ್ಲದೆ ಮನೆ ಮನೆಗೂ ಡ್ರಗ್ಸ್ ಬರ್ತಾ ಇರೋದು ಎಲ್ರಿಗು ಖುಷಿ ಕೊಡ್ತಾ ಇದೆ ಅಂತ ವ್ಯಸನಿಯೊಬ್ಬ ಸಂತಸ ವ್ಯಕ್ತಪಡಿಸಿದ್ದಾನೆ..! ಯಾರ್ಯಾರೋ ಬಂದು ಹಣ, ಹೆಂಡ ಜೊತೆ ಅಫೀಮು ಕೊಟ್ಟು ಹೋಗ್ತಾ ಇದ್ದಾರೆ. ಇಂಥ ಉಪಯೋಗಗಳು ಚುನಾವಣೆಯಲ್ಲಿ ಇದೆ ಅಂತಾದ್ರೆ ಪಂಜಾಬ್‍ನಲ್ಲಿ ಪ್ರತಿ ತಿಂಗಳು ಚುನಾವಣೆ ಆಗ್ಲಿ ಅಂತಾರೆ ಡ್ರಗ್ಸ್ ವ್ಯಸನಿ. ಇವುಗಳನ್ನೆಲ್ಲಾ ತಡೆಯಲು ಪೊಲೀಸರ ಜೊತೆಗೆ ಅರಸೇನಾ ಪಡೆಗಳು ಕೂಡ ಬಹುವಾಗಿ ಶ್ರಮಿಸುತ್ತಿದ್ದಾರೆ. ಆದರೆ ಅಲ್ಲಿನ ಜನರೆಲ್ಲರೂ ಡ್ರಗ್ಸ್ ಮಾಫಿಯಾಗೆ ಬೆಂಬಲ ವ್ಯಕ್ತಪಡಿಸುತ್ತಿರುವ ಕಾರಣ ಸಂಪೂರ್ಣವಾಗಿ ಹತ್ತಿಕ್ಕಲು ವಿಫಲವಾಗ್ತಾ ಇದೆ ಎನ್ನಲಾಗಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.
ಶುಭ ಶುಕ್ರವಾರದಂದು ತೆರೆಗೆ ಬರಲಿದೆ ಕುಳ್ಳನ ಚೌಕ
ಬಜೆಟ್-2017: ಯಾವುದು ತುಟ್ಟಿ, ಯಾವುದು ಅಗ್ಗ..?
ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ
ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?
ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?
ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!