ಜಾನಿ ಡೆಪ್.. ಈ ಹೆಸ್ರು ಯಾರಿಗೆ ಗೊತ್ತಿಲ್ಲ ಹೇಳಿ.. ಪೈರೆಟ್ಸ್ ಆಫ್ ಕೆರೇಬಿಯನ್ ಚಿತ್ರದ ಮೂಲಕ ಎಲ್ಲರ ಮನಗೆದ್ದಿರುವ ಈ ನಟನ ತೆರೆ ಹಿಂದಿನ ಸತ್ಯ ಕೇಳಿದ್ರೆ ನೀವೆ ಶಾಕ್ ಆಗಿ ಹೋಗ್ತೀರ..! ಸಾಮಾನ್ಯವಾಗಿ ಹಾಲಿವುಡ್, ಬಾಲಿವುಡ್ ಸ್ಟಾರ್ ನಟರಿಗೆ ನೀಡುವ ಸಂಭಾವನೆ ಎಷ್ಟೆ ದೊಡ್ಡದಾಗಿದ್ರೂ ಕೂಡ ಅವರ ಖರ್ಚು ವೆಚ್ಚದಲ್ಲಿ ಸ್ವಲ್ಪನಾದ್ರೂ ಹಿಡಿತ ಇರುತ್ತೆ. ಆದ್ರೆ ಈ ಹಾಲಿವುಡ್ ಸೂಪರ್ ಸ್ಟಾರ್‍ಗೆ ಮಾತ್ರ ಅದು ಅನ್ವಯವಾಗೊಲ್ಲ. ಯಾಕಂದ್ರೆ ಇವ್ನ ಖರ್ಚಿಗೆ ಪ್ರತಿ ತಿಂಗಳು 2 ಬಿಲಿಯಲ್ ಡಾಲರ್ ಬೇಕು..! ಅಂದ್ರೆ ಬರೋಬ್ಬರಿ 13.5 ಕೋಟಿ..! ಈತ ತನ್ನ 14 ಐಶಾರಾಮಿ ಮನೆ ಹಾಗೂ 70 ಎಕ್ಸಪೆನ್ಸಿವ್ ಗಿಟಾರ್‍ಗಳಿಗೆ ತಿಂಗಳಿಗೆ ಕೋಟಿಗಟ್ಟಲೆ ಹಣ ಖರ್ಚು ಮಾಡ್ತಾನಂತೆ..! ಇದಿಷ್ಟೆ ಆಗೋಗಿದ್ರೆ ಪರ್ವಾಗಿಲ್ಲ ಆದ್ರೆ ಜಾನಿ ಡೆಪ್ ತಾನು ಕುಡಿಯುವ ವೈನ್‍ಗೆ ಪ್ರತಿ ತಿಂಗ್ಳಿಗೆ 20 ಲಕ್ಷ ಖರ್ಚು ಮಾಡ್ತಾನಂತೆ..! ಇವೆಲ್ಲಾ ಹೇಗೆ ಗೊತ್ತಾಯ್ತು ಅಂತೀರ..? ಇವೆಲ್ಲಾ ಗೊತ್ತಾಗಿದ್ದು ಸ್ವತಃ ಜಾನಿ ಡೆಪ್‍ರಿಂದ್ಲೆ. ಅದು ಹೇಗೆ ಗೊತ್ತಾ..?
ಜಾನಿ ಡೆಪ್‍ನ ಸಂಪೂರ್ಣ ವ್ಯವಹಾರವನ್ನು ನೋಡ್ಕೊಳ್ತಾ ಇರೋದು ಟಿಎಂಜಿ ಎಂಬ ಖಾಸಗಿ ಸಂಸ್ಥೆ. ಈತನ ಎಲ್ಲಾ ಆರ್ಥಿಕ ವ್ಯವಹಾರವನ್ನ ಇದೇ ಟಿಎಂಜಿ ಸಂಸ್ಥೆಯೆ ನೊಡಿಕೊಳ್ತಾ ಇರೋದು. ಹೀಗಿರುವಾಗ ಜಾನಿ ಡೆಪ್ ಈ ಸಂಸ್ಥೆ ಹಣಕಾಸು ವ್ಯವಹರದಲ್ಲಿ ನನಗೆ ಮೋಸ ಮಾಡ್ತಾ ಇದೆ ಅಂತ ಕೋರ್ಟ್ ಮೊರೆ ಹೋಗಿದ್ದಾನೆ. ಹೀಗಾಗಿ ಕೋರ್ಟ್ ಮುಂದೆ ಸತ್ಯ ಬಾಯ್ಬಿಟ್ಟ ಟಿಎಂಜಿ ಸಂಸ್ಥೆ ಜಾನಿ ಡೆಪ್ ಐಶಾರಾಮಿ ಜೀವನ ನಡೆಸುತ್ತಿರೊ ಬಗ್ಗೆ ಹೇಳಿಕೊಂಡಿದೆ. ಈತ ಸುಮಾರು 500 ಕೋಟಿಗೆ ಬೆಲೆ ಬಾಳುವ 14 ಐಶಾರಾಮಿ ಬಂಗಲೆಗಳ ನಿರ್ವಹಣೆಗೆ ಹಣ ಖರ್ಚಾಗುತ್ತಿದ್ದು ಈತ ಕುಡಿಯುವ ವೈನ್‍ಗೆ 20 ಲಕ್ಷ ಖರ್ಚಾಗ್ತಾ ಇದೆ ಅಂತ ಟಿಎಂಜಿ ಸಂಸ್ಥೆ ಕೋರ್ಟ್‍ನಲ್ಲಿ ಹೇಳಿಕೊಂಡಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ತಮಿಳಿನ ಪೂಜೈ ರಿಮೇಕ್ ಚಿತ್ರದಲ್ಲಿ ಪುನೀತ್ ಹೀರೋ.
ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.
ಹಳ್ಳಿಡಾಕ್ಟ್ರು – ಇವರಿಂದಲೇ ಹಳ್ಳಿಯ ಸೊಗಡು ಇನ್ನು ಉಳಿದಿರೋದು.
ವಿಷ್ಣುದಾದರಿಂದ ಸೂಪರ್‍ಸ್ಟಾರ್ ಆದ್ರಂತೆ ಈ ನಟ..!
ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ